ಹರಿಪ್ರಸಾದ 'ಕೈ'ಗೆ ಕೆಪಿಸಿಸಿ ಕೀಲಿ?
ಬೆಂಗಳೂರು,
ಜು. 4 : ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ ಕೆ ಹರಿಪ್ರಸಾದ ಅವರು ಕೆಪಿಸಿಸಿ ಅಧ್ಯಕ್ಷರಾಗುವ ಸಾಧ್ಯತೆ ಇದೆ. ನೆರೆ ಹಣ ದುರ್ಬಳಿಕೆ ಆರೋಪ ಎದುರಿಸುತ್ತಿರುವ ಕೆಪಿಸಿಸಿ ಅಧ್ಯಕ್ಷ ಆರ್ ವಿ ದೇಶಪಾಂಡೆ ಅವರ ಕೆಳಗಿಳಿಸುವುದು ಖಚಿತವಾಗಿದ್ದು, ಆ ಸ್ಥಾನಕ್ಕೆ ಹರಿಪ್ರಸಾದ ಅವರನ್ನು ನೇಮಿಸಲು ದಿಲ್ಲಿ ವರಿಷ್ಠರು ಚಿಂತನೆ ನಡೆಸಿದ್ದಾರೆ. id="toptextpromo">ನಾಯಕತ್ವ
ಕೊರತೆ, ಜೆಡಿಎಸ್ ಜೊತೆ ಮೈತ್ರಿ ಹೊಂದಾಣಿಕೆಯ ಗೊಂದಲ, ನೆರೆ ಹಣ ದುರ್ಬಳಿಕೆ ಮಾಡಿಕೊಂಡಿರುವ ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಸಂಪೂರ್ಣ ಕುಸಿದಿದೆ. ಪಕ್ಷವನ್ನು ತಳಮಟ್ಟದಿಂದ ಸಂಘಟಿಸಲು ಹರಿಪ್ರಸಾದ ಅವರನ್ನು ರಾಜ್ಯಕ್ಕೆ ಕಳಿಸುವ ಸಾಧ್ಯತೆ ಇದೆ ಎಂದು ಉನ್ನತ ಮೂಲಗಳು ತಿಳಿಸಿವೆ. id='are-slot-1' class='oiad oi-axt oiadv'> id='top-searched-articles'>ಇತ್ತೀಚೆಗೆ
ವಿಧಾನಸಭೆಯಿಂದ ರಾಜ್ಯ ಸಭೆಗೆ ನಡೆದ ಚುನಾವಣೆಯಲ್ಲಿ ಹರಿಪ್ರಸಾದ ಅವರನ್ನು ಎರಡನೇ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಲು ಕಾಂಗ್ರೆಸ್ ನಿರ್ಧರಿಸಿತ್ತು. ಆದರೆ, ಈ ನಿರ್ಧಾರಕ್ಕೆ ಜೆಡಿಎಸ್ ನಿಂದ ಬಲವಾದ ವಿರೋಧ ವ್ಯಕ್ತವಾಗಿತ್ತು. ಈ ವಿರೋಧವೇ ಹರಪ್ರಸಾದ ಅವರಿಗೆ ವರದಾನವಾಗುವ ಸಾಧ್ಯತೆ ಇದೆ. ಜೆಡಿಎಸ್ ಬಗ್ಗೆ ಮೃದುಧೋರಣೆ ತಾಳಲಾರದೆ ಪಕ್ಷವನ್ನು ಕಟ್ಟುವ ಸಮರ್ಥ ನಾಯಕನನ್ನು ಕಾಂಗ್ರೆಸ್ ಹುಡುತ್ತಿದೆ.











Click it and Unblock the Notifications