ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಣ್ಣೀರ ಕಡಲಲ್ಲಿ ಕಗ್ಗತ್ತಲ ಖಂಡ

By Mrutyunjaya Kalmat
|
Google Oneindia Kannada News

Player Gyan
ಜೋಹಾನ್ಸ್ ಬರ್ಗ್, ಜು. 3 : ಫೀಫಾ ವಿಶ್ವಕಪ್ ಫುಟ್ಬಾಲ್ ಮಹಾಸಮರದ ಏಕೈಕ ಆಶಾಕಿರಣ ಎನ್ನಲಾಗಿದ್ದ ಕಪ್ಪು ಹುಡುಗರ ಘಾನಾ ಪುಟ್ಬಾಲ್ ತಂಡ ಕ್ವಾರ್ಟರ್ ಪೈನಲ್ ನಲ್ಲಿ ಉರುಗ್ವೆ ವಿರುದ್ಧ ಸೋಲನುಭವಿಸಿ ಸಮರದಿಂದ ಹೊರಬಿದ್ದರುವುದು ಆಫ್ರಿಕಾ ಉಪಖಂಡದಲ್ಲಿ ಆಘಾತ ಉಂಟು ಮಾಡಿದೆ. ಫೆವರೀಟ್ ತಂಡದಲ್ಲಿ ಒಂದಾಗಿದ್ದ ಘಾನಾ ಔಟ್ ಆಗಿರುವುದು ಅಭಿಮಾನಿಗಳಿಗೆ ತೀವ್ರ ನಿರಾಶೆ ಮೂಡಿಸಿದ್ದು, ಇಡೀ ಉಪಖಂಡ ಶೋಕಾಚರಣೆ ಆಚರಿಸತೊಡಗಿದೆ.

ನೆಚ್ಚಿನ ಆಟಗಾರ ಗ್ಯಾನ್ ಅವರು ಪೆನಾಲ್ಟಿ ಕಿಕ್ ನಲ್ಲಿ ತಪ್ಪಿಸಿಕೊಂಡ ಮಹತ್ವದ ಗೋಲು ಇಡೀ ಪಂದ್ಯದ ತಿರುವನ್ನೇ ಬದಲಿಸಿತು. ಉರುಗ್ವೆ ವಿರುದ್ಧ ಘಾನಾ ಸೋಲನುಭವಿಸಿದ ಕ್ಷಣ ಆಫ್ರಿಕ ಉಪಖಂಡಕ್ಕೆ ಭೂಮಿ ಕುಸಿತ ಅನುಭವ. ನೆಚ್ಚಿನ ತಂಡದ ತಾಯ್ನಾಡಿನಲ್ಲಿ ಏರ್ಪಡಿಸಲಾಗಿರುವ ಫೀಪಾ ವಿಶ್ವಕಪ್ ನ್ನು ಎತ್ತಿ ಹಿಡಿಯಲಿದೆ ಎಂದು ಕನಸು ಕಂಡವರೆ ಹೆಚ್ಚು ಮಂದಿ.

ಆದರೆ, ಆನಿರೀಕ್ಷಿತವಾಗಿ ಘಾನಾ ಉರುಗ್ವೆ ಎದುರು ಸೋತು ಟೂರ್ನಿಯಿಂದ ಹೊರಿಬಿದ್ದಾಗ ಜೋಹಾನ್ಸ್ ಬರ್ಗ್ ನ ಕ್ರೀಡಾಂಗಣದಲ್ಲಿದ್ದ ಸುಮಾರು 80 ಸಾವಿರಕ್ಕೂ ಅಧಿಕ ಆಫ್ರಿಕ ಉಪಖಂಡದ ಫುಟ್ಬಾಲ್ ಅಭಿಮಾನಿಗಳ ಕಣ್ಣಲ್ಲಿ ನೀರು. ಹತಾಶಯಿಂದ ಕೆಲವರು ಚೀರಾಟ, ಕೂಗಾಟ, ಅರಚಾಟ ಮುಗಿಲು ಮುಟ್ಟಿತ್ತು.

ಭಾರಿ ನಿರೀಕ್ಷೆ ಹೊಂದಿದ್ದ ಆಟಗಾರ ಗ್ಯಾನ್ ಮತ್ತವರ ತಂಡ ಸೋತರೂ ಅಲ್ಲಿನ ಫುಟ್ಬಾಲ್ ಅಭಿಮಾನಿಗಳು ಹಾಡಿಹೊಗಳುತ್ತಿದ್ದಾರೆ. ನಮ್ಮ ಹುಡುಗರು ಅತ್ಯುತ್ತಮವಾಗಿ ಆಡಿದರು. ಆದರೆ, ಅದೃಷ್ಟ ನಮಗೆ ಕೈಕೊಟ್ಟಿತು. ಮುಂದಿನ ವಿಶ್ವಕಪ್ ನಲ್ಲಾದರೂ ಘಾನಾಗೆ ವಿಶ್ವಕಪ್ ಕಿರೀಟ ಸಿಗಲೆಂದು ದೇವರಲ್ಲಿ ಪ್ರಾರ್ಥಿಸುತ್ತೇವೆ ಎನ್ನುವ ಸಮಾಧಾನದ ಮಾತುಗಳು ಆಫ್ರಿಕಾದಾದ್ಯಂತ ಕೇಳಿ ಬರತೊಡಗಿವೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X