ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗಣಿಕಂಪೆನಿಯಿಂದ ಬಡವರಿಗೆ ಕ್ಯಾನ್ಸರ್ ಅಸ್ಪತ್ರೆ

By Mahesh
|
Google Oneindia Kannada News

Vedanta to invest Rs 350 Cr for Cancer Hospital
ಚತ್ತೀಸ್ ಘಡ್, ಜೂ.30: ಬಳ್ಳಾರಿ ಗಣಿ ಉದ್ಯಮಿಗಳು ಗಳಿಸಿದ ಹಣದಿಂದ ಸಾಮೂಹಿಕ ವಿವಾಹ ಮುಂತಾದ ಸಮಾಜ ಒಪ್ಪುವ ಕಾರ್ಯಗಳನ್ನು ಮಾಡುವುದನ್ನು ನೋಡಿರುತ್ತೀರಾ, ಆದರೆ, ದೇಶದ ಪ್ರಮುಖ ಗಣಿಸಂಸ್ಥೆಯೊಂದು ಇನ್ನೊಂದು ಹೆಜ್ಜೆ ಮುಂದಿಟ್ಟಿದೆ.

ರಾಯ್ ಪುರನಲ್ಲಿ ಬಡವರಿಗಾಗಿ ಸುಸಜ್ಜಿತ ಕ್ಯಾನ್ಸರ್ ಆಸ್ಪತ್ರೆ ಸ್ಥಾಪಸಿದಲು ಅನಿಲ್ ಅಗರವಾಲ್ ಮಾಲೀಕತ್ವದ ಗಣಿ ಸಂಸ್ಥೆ ವೇದಾಂತ ಮುಂದಾಗಿದೆ. ಗಣಿ ಕಂಪೆನಿ ವೇದಾಂತ ಚತ್ತೀಸ್ ಘಡ್ ನ ರಾಯ್ ಪುರದಲ್ಲಿ 350 ಕೋಟಿ ರುಪಾಯಿಗಳ ವೆಚ್ಚದಲ್ಲಿ 360 ಹಾಸಿಗೆಗಳ ಕ್ಯಾನ್ಸರ್ ಆಸ್ಪತ್ರೆ ಯನ್ನು ನಿರ್ಮಿಸುವುದಾಗಿ ತಿಳಿಸಿದೆ.

50 ಎಕರೆ ವಿಸ್ತೀರ್ಣದ ಈ ಸುಸಜ್ಜಿತ ಆಸ್ಪತ್ರೆಯಲ್ಲಿ 125 ವೈದ್ಯರು ಹಾಗೂ 300 ದಾದಿಯರನ್ನು ನೇಮಕ ಮಾಡಿಕೊಳ್ಳಲಿರುವುದಾಗಿ ಕಂಪೆನಿ ಪ್ರಕಟಿಸಿದ್ದು ನಿರ್ಮಾಣ ಕಾರ್ಯ ಸಾಗಿದ್ದು ಇದಕ್ಕೆ ವೆದಾಂತ ಕ್ಯಾನ್ಸರ್ ಹಾಸ್ಪಿಟಲ್ ಅಂಡ್ ರೀಸರ್ಚ್ ಸೆಂಟರ್ ಎಂದು ಹೆಸರಿಸಲಾಗಿದೆ.

ಮೊದಲ ಹಂತದಲ್ಲಿ ಕಂಪೆನಿ 200 ಕೋಟಿ ರುಪಾಯಿಗಳನ್ನು ಹೂಡಿಕೆ ಮಾಡಲಿದ್ದು ನವೆಂಬರ್ 2011ಕ್ಕೆ ನಿರ್ಮಾಣಕಾರ್ಯ ಮುಗಿಯಲಿದ್ದು ಬಡ ವರ್ಗದವರಿಗೆ ಚಿಕಿತ್ಸೆಯಲ್ಲಿ ರಿಯಾಯ್ತಿ ನೀಡಲಾಗುವುದು ಎಂದು ಸಂಸ್ಥೆ ಹೇಳಿದೆ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X