ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಟೋ ಮೀಟರ್ ದರ 14 ರಿಂದ 18ಕ್ಕೆ ಏರಿಕೆ?

By Mahesh
|
Google Oneindia Kannada News

Auto Rickshaw fares may rise
ಬೆಂಗಳೂರು, ಜೂ.29: ಈ ವಾರ ಆಟೋ ದಲ್ಲಿ ಕನಿಷ್ಠ ಪ್ರಯಾಣದರ ರು.14 ರ ಕೊಟ್ಟು ಸುತ್ತಾಡಿ ಬಿಡಿ. ಮುಂದಿನವಾರದಿಂದ ದರ ಏರಿಕೆಯಾಗಲಿದ್ದು 18 ರು ಗೆ ಏರಲಿದೆ. ಪೆಟ್ರೋಲ್ ಬೆಲೆ ಏರಿಕೆ, ಐದು ವರ್ಷಗಳಿಂದ ಕನಿಷ್ಠ ಪ್ರಯಾಣದರ ಏರಿಕೆಯಾಗದಿರುವುದರಿಂದ ಆಟೋರಿಕ್ಷಾ ಸಂಘಗಳ ಮನವಿಯನ್ನು ಸಾರಿಗೆ ಸಚಿವರು ಪುರಸ್ಕರಿಸುವ ಎಲ್ಲಾ ಸಾಧ್ಯತೆಗಳಿವೆ.

ಬೆಂಗಳೂರಿನ ಪ್ರಮುಖ ಆಟೋ ಸಂಘಟನೆಗಳಾದ ಆದರ್ಶ ಆಟೋ ಹಾಗೂ ಟ್ಯಾಕ್ಸಿ ಚಾಲಕರ ಸಂಘ, ಬಿಜೆಪಿ ಆಟೋ ಸಂಘ ಮುಂತಾದ ಸಂಘಟನೆಗಳು ಬೆಂಗಳೂರು ನಗರ ಜಿಲ್ಲಾಧಿಕಾರಿ ಎಂಕೆ ಆಯ್ಯಪ್ಪ ಅವರನ್ನು ಭೇಟಿ ಮಾಡಿ ಈ ಬಗ್ಗೆ ಮನವಿ ಸಲ್ಲಿಸಿದ್ದಾರೆ.

ಕಳೆದ ಐದಾರು ವರ್ಷಗಳಲ್ಲಿ ಬಿಎಂಟಿಸಿ, ಕೆಎಸ್ಆರ್‍ ಟಿಸಿ ಸಂಸ್ಥೆಗಳು ಪ್ರಯಾಣ ದರವನ್ನು ಹಲವು ಬಾರಿ ಏರಿಸಿವೆ. ಆದರೆ, ಆಟೋ ಪ್ರಯಾಣ ದರ ಏರಿಕೆ ಕಂಡಿಲ್ಲ. ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಏರಿಕೆಯಾಗಿರುವ ಹಿನ್ನೆಲೆಯಲ್ಲಿ ಆಟೋ ಕನಿಷ್ಠ ಪ್ರಯಾಣ ದರ ಏರಿಕೆ ಅನಿವಾರ್ಯ ಎಂದು ಆದರ್ಶ ಆಟೋ ಸಂಘ ಹೇಳಿದೆ.

ಆಟೋರಿಕ್ಷಾ ಕಷ್ಟ ನಷ್ಟ ವಿವರಗಳು:

*ಹಳೆ ದರ:ಕನಿಷ್ಠ ಪ್ರಯಾಣದರ ರು.14( ಪ್ರತಿ 2ಕಿ.ಮೀಗೆ) ನಂತರ ಮುಂದಿನ ಹಂತದಲ್ಲಿ ರು.7 ನಂತೆ ಹೆಚ್ಚಳ.
*ಸಂಭವನೀಯ ಹೊಸ ದರ: ರು. 18( ಪ್ರತಿ 2ಕಿ.ಮೀಗೆ) ನಂತರ ಮುಂದಿನ ಹಂತದಲ್ಲಿ ರು.8-9 ನಂತೆ ಹೆಚ್ಚಳ.
*ಬೆಂಗಳೂರಿನಲ್ಲಿ ಪೆಟ್ರೋಲ್ ಪ್ರತಿ ಲೀ.ಗೆ 58.09 ರು ಇದ್ದು, ಎರಡು ಸ್ಟ್ರೋಕ್ ಇಂಜಿನ್ ವುಳ್ಳ ಆಟೋ ಪ್ರತಿ ಲೀಟರ್ ಗೆ 25 ಕೀ.ಮೀ ಮೈಲೇಜ್ ಕೊಡುತ್ತದೆ. ನಾಲ್ಕು ಸ್ಟ್ರೋಕ್ ಆದರೆ 30ಕಿ.ಮೀ ಮೈಲೇಜ್ ನಿರೀಕ್ಷಿಸಬಹುದು.
* ಎಲ್ ಪಿಜಿ ಕಿಟ್ ವುಳ್ಳ ಆಟೋರಿಕ್ಷಾಗೆ ಪ್ರತಿ ಕೆಜಿ ಕಿಟ್ ಗೆ ರು.40 ತಗುಲುತ್ತದೆ. ಮೈಲೇಜ್ ಪೆಟ್ರೋಲ್ ಗಾಡಿಗಿಂತ ಐದು ಕಿ.ಮೀ ಅಧಿಕ ಓಡುತ್ತದೆ.
* ಆಟೋಗೆ ಇಂಜಿನ್ ಆಯಿಲ್ ಪ್ರತಿ ಲೀಟರ್ ಗೆ 130 ರು ಆಗಿದೆ. ಇದು ಕೂಡಾ ದುಬಾರಿ ಎನಿಸಿದೆ.
*ಬೆಳಗ್ಗೆ 7 ರಿಂದ ರಾತ್ರಿ 11 ರವರೆಗೆ ಓಡಿಸಿದರೂ ರಾಜಾಜಿನಗರದಂತಹ ಏರಿಯಾದಲ್ಲೇ ಹತ್ತು ಜನ ಪ್ಯಾಸೇಂಜರ್ ಸಿಗುವುದಿಲ್ಲ ಎನ್ನುತ್ತಾರೆ ಆಟೋ ಚಾಲಕ ರಾಜು.
*ಆಟೋ ಪ್ರಯಾಣ ದರ ಏರಿಕೆ ಮಾಡಿದ ಮೇಲೆ ಆಟೋ ಮೀಟರ್ ಪಲ್ಸ್ ಬದಲಿಸಲು ಮೆಕ್ಯಾನಿಕ್ ಗೆ 500 ರು ಹಾಗೂ ಆರ್ ಟಿಒಗೆ 100 ರು ತೆರಬೇಕಾಗುತ್ತದೆ.
* ಮೆಟ್ರೋ ಶುರುವಾದರೆ, ನಮ್ಮನ್ನು ಕೇಳುವವರು ಯಾರು ಸಿಗುವುದಿಲ್ಲ.ಜನ ಸಾಮಾನ್ಯರು ಕಷ್ಟದಲ್ಲಿದ್ದಾರೆ. ಬೆಲೆ ಏರಿಕೆಗೆ ಇದು ಸಮಯವಲ್ಲ ಎನ್ನುತ್ತಾರೆ ಫ್ರೇಜರ್ ಟೌನ್ ನಿವಾಸಿ ಚಾಲಕ ವೇಲು.

ಈಗ ನಿರ್ಧಾರ ಸಾರಿಗೆ ಇಲಾಖೆಯ ಮುಂದಿದ್ದು, ಬಲ್ಲ ಮೂಲಗಳು ಪ್ರಕಾರ ಆಟೋ ಪ್ರಯಾಣದ ಕನಿಷ್ಠ ಮೀಟರ್ ದರವನು 17 ಅಥವಾ 18 ರು ಗಳಿಗೆ ಏರಿಸುವುದು ಗ್ಯಾರಂಟಿ ಎನ್ನಲಾಗಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X