ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಶ್ವಕಪ್ ಚಾಂಪಿಯನ್ ಇಟಲಿಗೆ ಮುಖಭಂಗ

By Mahesh
|
Google Oneindia Kannada News

ಜೋಹಾನ್ಸ್ ಬರ್ಗ್, ಜೂ 25 : ಇದು ಕೇವಲ ಇಟಲಿ ಪಾಲಿಗಲ್ಲದೆ ಇಡೀ ವಿಶ್ವವನ್ನೇ ಅಚ್ಚರಿ ಕಡಲಲ್ಲಿ ಮುಳುಗಿಸಿದೆ. ಹಾಲಿ ಚಾಂಪಿಯನ್ ಇಟಲಿ ತಂಡ 2010 ಫೀಫಾ ವಿಶ್ವಕಪ್ ಫುಟ್ಬಾಲ್ ಚಾಂಪಿಯನ್ ಷಿಪ್ ನಲ್ಲಿ ಮೊದಲ ಸುತ್ತಿನಲ್ಲೇ ಹೊರಬಿದ್ದು ತೀವ್ರ ಮುಖಭಂಗ ಅನುಭವಿಸಿದೆ.

ಸಾಕರ್ ಸಿಟಿ ಕ್ರೀಡಾಂಗಣದಲ್ಲಿ ಗುರುವಾರ ( ಜೂ 24 ) ನಡೆದ ಲೀಗ್ ಹಂತದ ತನ್ನ ಕೊನೆಯ ಪಂದ್ಯದಲ್ಲಿ ಇಟಲಿ ಸ್ಲೊವಾಕಿಯಾ ಎದುರು 2 -3 ಗೋಲುಗಳ ಅಂತರದಿಂದ ತಲೆಬಾಗಿತು. ವಿಜೇತ ಸ್ಲೊವಾಕಿಯಾ ತಂಡದ ಪರ ರಾಬರ್ಟ್ ವಿಟೆಕ್ ಎರಡು ಗೋಲು ಸಿಡಿಸಿ ಗಮನ ಸೆಳೆದರು.

ಫೀಫಾ ವಿಶ್ವಕಪ್ 2010 : ವಿಶ್ವಕಪ್ ವೇಳಾಪಟ್ಟಿ || ಅಂಕಗಳ ಪಟ್ಟಿ ||

ಕ್ಯಾಮಿಲ್ ಕೊಪುನೆಕ್ ಮತ್ತೊಂದು ಗೋಲು ಸಿಡಿಸಿ ಗೆಲುವಿನ ರೂವಾರಿಯಾದರು. ಇಟಲಿ ಪರ ಆಂತೊನಿಯಾ ನತಾಳೆ ಮತ್ತು ಫಾಬಿಯಾ ಕ್ವೆಗ್ಲಿಯುರೆಲ್ಲ ತಲಾ ಒಂದೊಂದು ಗೋಲು ದಾಖಲಿಸಿದರೂ ತಂಡಕ್ಕೆ ಯಾವ ಲಾಭವನ್ನು ತಂದು ಕೊಡಲಿಲ್ಲ . ಶಕ್ತಿಶಾಲಿ ಇಟಲಿ ಎದುರು ಹೀರೋಗಳಂತೆ ಹೋರಾಡಿದ ಸ್ಲೊವಾಕಿಯಾ ಆಟಗಾರರು ನಡೆಸಿದ ಕದನ ಗಮನ ಸೆಳೆಯಿತು.

ವಿಡಿಯೋ: ಇಟಲಿಯ ಬಗ್ಗುಬಡಿದ ಸ್ಲೊವಾಕಿಯಾ

ಆಡಿದ ಮೂರು ಪಂದ್ಯಗಳಿಂದ ಒಂದರಲ್ಲೂ ಗೆಲುವಿನ ಫಲಿತಾಂಶ ಕಾಣದ ಇಟಲಿ ಎರಡು ಡ್ರಾ ಮತ್ತು ಒಂದು ಸೋಲಿನೊಂದಿಗೆ ಕೇವಲ ಎರಡು ಅಂಕ ಗಳಿಸಿ ಕೊನೆಯ ಸ್ಥಾನ ಪಡೆದು ಟೂರ್ನಿಯಿಂದ ಹೊರದಬ್ಬಿಸಿಕೊಂಡಿದೆ. ಕಳೆದ ಬಾರಿಯ ರನ್ನರ್ ಅಪ್ ಕೂಡಾ ಇಟಲಿಯಂತೆ ಗುಂಪಿನಲ್ಲಿ ಕಡೇ ಸ್ಥಾನ ಪಡದು ಹೊರಬಿದ್ದಿರುವುದು ಇತಿಹಾಸ ಪುಟ ಸೇರಿದೆ.

ವಿಡಿಯೋಗಳು : ವಿಶ್ವಕಪ್ ಆಶಯ ಗೀತೆ || ಗಾಯಕಿ ಶಕೀರಾ ಗೀತೆ || ಎಕಾನ್ ಹಾಡಿದ ಆಫ್ರಿಕಾ ಗೀತೆ ||

ಕಳೆದ ಬಾರಿ ಜರ್ಮನಿಯಲ್ಲಿ ಪ್ರಬಲ ಫ್ರಾನ್ಸ್ ತಂಡವನ್ನು ಮಣಿಸಿ ನಾಲ್ಕನೇ ಬಾರಿಗೆ ಇಟಲಿ ಜಾಗತಿಕ ಫುಟ್ಬಾಲ್ ನಲ್ಲಿ ತನ್ನ ಸಾಮ್ರಾಜ್ಯ ಸ್ಥಾಪಿಸಿತ್ತು. ಆದರೆ ಕಳೆದ ಬಾರಿ ಪ್ರಶಸ್ತಿಗಾಗಿ ಸೆಣಸಿದ್ದ ಇಟಲಿ ಮತ್ತು ಫ್ರಾನ್ಸ್ ತಂಡ 2010 ವಿಶ್ವಕಪ್ ನಲ್ಲಿ ನಾಕೌಟ್ ಹಂತದಲ್ಲೇ ಹೊರಬಿದ್ದಿದ್ದು ವಿಶ್ವಕಪ್ ಇತಿಹಾಸದಲ್ಲೇ ಇದೇ ಪ್ರಥಮ. ಇದು ಅಭಿಮಾನಿಗಳ ಎದೆ ಧಸಕ್ಕೆನ್ನುವಂತಾಗಿದೆ.

ಇನ್ನೊಂದು ಮಹತ್ವದ ಪಂದ್ಯದಲ್ಲಿ ಪರುಗ್ವೆ ನ್ಯೂಜಿಲ್ಯಾಂಡ್ ನೊಂದಿಗೆ ಗೋಲು ಗಳಿಸದೆ 0-0 ಡ್ರಾ ಸಾಧಿಸಿತು. ಮೂರು ಪಂದ್ಯಗಳಲ್ಲಿ 5 ಅಂಕಗಳೊಂದಿಗೆ ಎಫ್ ಗುಂಪಿನ ಅಗ್ರಸ್ಥಾನಪಡೆದ ಪರುಗ್ವೆ ಮುಂದಿನ ಹಂತದಲ್ಲಿ ಜಪಾನ್ ವಿರುದ್ಧ ಸೆಣಸಲಿದೆ. 16 ರ ಹಂತದಲ್ಲಿ ಸ್ಲೋವಾಕಿಯಾ ಪ್ರಬಲ ಹಾಲೆಂಡ್ ವಿರುದ್ಧ ಆಡಲಿದೆ.

English summary
In probably the biggest shocker of the 19th FIFA World Cup so far, four-time World Champs Italy made a devastating exit from the tournament.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X