ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಿದು ಮಧ್ಯಸ್ಥಿಕೆ ವಿಫಲ, ಹೆಗ್ಡೆ ನಿರ್ಧಾರ ಅಚಲ

By Mahesh
|
Google Oneindia Kannada News

Chidu asks Lokayukta to reconsider resignation
ಬೆಂಗಳೂರು, ಜೂ.25: ಲೋಕಾಯುಕ್ತ ಸಂತೋಷ್ ಹೆಗ್ಡೆ ಅವರರಾಜೀನಾಮೆಯನ್ನು ರಾಜ್ಯಪಾಲರು ಅಂಗೀಕರಿಸದಿರಲು ನಿರ್ಧರಿಸಿದ ಬೆನ್ನಲ್ಲೇ ಕೇಂದ್ರ ಗೃಹ ಸಚಿವ ಪಿ ಚಿದಂಬರಂ ಅವರ ಮಧ್ಯಸ್ಥಿಕೆಯಲ್ಲಿ ಸಂತೋಷ್ ಹೆಗ್ಡೆ ಅವರ ಮನವೊಲಿಕೆಯ ಪ್ರಯತ್ನಗಳು ನಡೆದು, ವಿಫಲವಾಗಿದೆ.

ಲೋಕಾಯುಕ್ತರೊಡನೆಇಂದು ದೂರವಾಣಿ ಮೂಲಕ ಸಂಭಾಷಣೆ ನಡೆಸಿದ ನಂತರ ಸುದ್ದಿಗಾರರೊಡನೆ ಮಾತನಾಡಿದ ಕೇಂದ್ರ ಗೃಹ ಸಚಿವ ಪಿ ಚಿದಂಬರಂ ಅವರು ಲೋಕಾಯುಕ್ತರು ಮರಳಿ ಅಧಿಕಾರ ಸ್ವೀಕರಿಸುವ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದರು.

ನಿಮ್ಮ ರಾಜೀನಾಮೆಯಿಂದ ರಾಜ್ಯದಲ್ಲಿ ಭ್ರಷ್ಟಾಚಾರ ಹೆಚ್ಚಾಗಲಿದೆ. ದುಷ್ಟ ಶಕ್ತಿಗಳಿಗೆ ಉತ್ತೇಜನ ನೀಡಿದಂತಾಗುತ್ತದೆ. ಕರ್ನಾಟಕ ಜನತೆಯ ಹಿತ ದೃಷ್ಟಿಯಿಂದ ನೀವು ಅಧಿಕಾರದಲ್ಲಿ ಮುಂದುವರೆಯುವುದು ಅನಿವಾರ್ಯವಾಗಿದೆ ಎಂದು ಹೆಗ್ಡೆ ಅವರಲ್ಲಿ ನಿವೇದಿಸಿಕೊಂಡಿದ್ದೇನೆ ಎಂದು ಚಿದಂಬರಂ ಹೇಳಿದರು.

ನನ್ನ ನಿರ್ಧಾರ ಅಚಲ: ಆದರೆ, ಇದಕ್ಕೆ ಪ್ರತಿಕ್ರಿಯಿಸಿದ ಲೋಕಾಯುಕ್ತ ಸಂತೋಷ್ ಹೆಗ್ಡೆ, ಎಲ್ಲರ ಅಭಿಮಾನದ ಋಣ ನನ್ನ ಮೇಲಿದೆ. ರಾಜೀನಾಮೆ ನೀಡಿದ ಕ್ಷಣದಿಂದ ರಾಜ್ಯದಲ್ಲಿ ನಡೆದಿರುವ ಪ್ರತಿಭಟನೆ, ಮನವೊಲಿಕೆ ಪತ್ರಗಳು, ಟೆಕ್ಕಿಗಳಿಂದ ಇಮೇಲ್ ಗಳು, ಆಪ್ತರ ಎಸ್ ಎಂಎಸ್ ಸಂದೇಶಗಳನ್ನು ನೋಡಿದ್ದೇನೆ. ಆದರೆ, ನನ್ನ ನಿರ್ಧಾರದಲ್ಲಿ ಯಾವುದೇ ಬದಲಾವಣೆಯಿಲ್ಲ. ರಾಜೀನಾಮೆ ಹಿಂದಕ್ಕೆ ಪಡೆಯುವ ಪ್ರಶ್ನೆಯೇ ಇಲ್ಲ ಎಂದಿದ್ದಾರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X