ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರುಪಾಯಿಗೆ ಯಾವ ಚಿಹ್ನೆಇದ್ದರೆ ಚೆನ್ನ?

By Mahesh
|
Google Oneindia Kannada News

Rupee Signs
ನವದೆಹಲಿ, ಜೂ.24: ಭಾರತೀಯ ರೂಪಾಯಿಗೂ ಒಂದು ಲಾಂಛನ ಸಿಗುವ ಎಲ್ಲಾ ಸಾಧ್ಯತೆಗಳಿದ್ದು, ಇಂದು ಸಭೆ ಕೇಂದ್ರ ಸಚಿವ ಸಂಪುಟ ಸಭೆ ಸೇರಿ ಭಾರತೀಯ ರೂಪಾಯಿ ಯಾವ ಚಿಹ್ನೆ ಸೂಕ್ತ ಎಂಬುದನ್ನು ನಿರ್ಧರಿಸಲಿದೆ.

ಈಗಾಗಲೇ ಹಲವು ಲಾಂಛನಗಳನ್ನು ಸಿದ್ಧಪಡಿಸಲಾಗಿದ್ದು, ಭಾರತಕ್ಕೆ ಹೊಂದಾಣಿಕೆಯಾಗುವ ಲಾಂಛನವನ್ನು ಇವುಗಳಲ್ಲಿ ಒಂದು ಅಧಿಕೃತ ಚಿಹ್ನೆ ಆರಿಸಲಾಗುವುದು.

ಜಾಗತಿಕ ಕರೆನ್ಸಿಗಳಾದ ಅಮೆರಿಕನ್ ಡಾಲರ್ ($), ಬ್ರಿಟೀಷ್ ಪೌಂಡ್ (£), ಐರೋಪ್ಯ ಒಕ್ಕೂಟದ ಯೂರೋ (€) ಮತ್ತು ಜಪಾನ್‌ನ ಯೆನ್ (¥) ಗುಂಪಿಗೆ ಭಾರತದ ರೂಪಾಯಿಯೂ ಸೇರ್ಪಡೆಯಾಗಲಿದೆ.

ವಿದೇಶಿ ಕರೆನ್ಸಿಗಳು ಸ್ವಂತ ಸಂಕೇತಾಕ್ಷರಗಳ (USD, GDP, JPY, EUR) ಜತೆ ಲಾಂಛನಗಳನ್ನೂ ಹೊಂದಿವೆ. ಆದರೆ ಭಾರತವು ತನ್ನ ರೂಪಾಯಿಗೆ ಇದುವರೆಗೆ ಹೊಂದಿರುವುದು ಕೇವಲ ಸಂಕೇತಾಕ್ಷರಗಳನ್ನು ಮಾತ್ರ. 'Rs', 'Re', 'INR' ಎನ್ನುವುದೇ ಈ ಸಂಕೇತಾಕ್ಷರಗಳು.

ಪಾಕಿಸ್ತಾನ, ನೇಪಾಳ ಮತ್ತು ಶ್ರೀಲಂಕಾ ದೇಶಗಳೂ ಭಾರತದ ಸಂಕೇತಾಕ್ಷರ(('Rs', 'Re')ವನ್ನೇ ಬಳಸುತ್ತಿರುವುದು ಗೊಂದಲಕ್ಕೆ ಕಾರಣವಾಗಿದೆ. ಕಳೆದ ಹಲವು ವರ್ಷಗಳಿಂದ ಹೊಸ ಲಾಂಛನದ ಬಗ್ಗೆ ಸರ್ಕಾರ ಮಾತನಾಡಿದ್ದರೂ, ಯಾವುದೇ ನಿರ್ಧಾರ ಕೈಗೊಂಡಿರಲಿಲ್ಲ.

ಈ ಸಂಬಂಧ ಸಾರ್ವಜನಿಕರಿಂದಲೇ ಹೊಸ ಲಾಂಛನದ ವಿನ್ಯಾಸಗಳನ್ನೂ ಆಹ್ವಾನಿಸಲಾಗಿತ್ತು. ಸರ್ಕಾರ ರಚಿಸಿದ್ದ ಸಮಿತಿಯು ,ಹಿಂದಿ ಅಕ್ಷರ 'र' ಹೊಂದಿರುವ ವಿನ್ಯಾಸಗಳನ್ನು [ ಚಿತ್ರ ವೀಕ್ಷಿಸಿ] ಅಂತಿಮಗೊಳಿಸಿದೆ. ಅವುಗಳಲ್ಲಿ ಸೂಕ್ತವಾದ ಒಂದನ್ನು ಆರಿಸಲಾಗುತ್ತದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X