ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜೀಸಸ್ ಕ್ರಿಸ್ತ ಮತ್ತೆ ಅವತರಿಸಿ ಬರಲಿದ್ದಾನೆ!

By Prasad
|
Google Oneindia Kannada News

40 percent americans believe that Christ will come again
ವಾಷಿಂಗ್ಟನ್, ಜೂ. 23 : ಅಧರ್ಮ ಮಿತಿಮೀರಿದಾಗ ದುರ್ಜನರನ್ನು ಮಟ್ಟಹಾಕಲು ನಾನು ಮತ್ತೆಮತ್ತೆ ಅವತರಿಸಿ ಬರುತ್ತೇನೆ ಎಂದು ಭಗವಾನ್ ಶ್ರೀಕೃಷ್ಣನೇ ಹೇಳಿದ್ದಾನೆ. ಇದು ಹಿಂದೂಗಳ ನಂಬುಗೆ. ಅದರಂತೆ, ಇನ್ನು 40 ವರ್ಷಗಳಲ್ಲಿ 2050ರಲ್ಲಿ ಜೀಸಸ್ ಕ್ರಿಸ್ತ ಅವತರಿಸಿ ಬಂದು ಮಾನವ ಕುಲವನ್ನು ಕಾಪಾಡುತ್ತಾನೆ ಎಂದು ಶೇ.40ರಷ್ಟು ಅಮೆರಿಕನ್ನರು ನಂಬಿದ್ದಾರೆ.

ಪೀವ್ ರಿಸರ್ಚ್ ಸೆಂಟರ್ ಫಾರ್ ದಿ ಪೀಪಲ್ ಮತ್ತು ಸ್ಮತಿಸೋನಿಯನ್ ಮ್ಯಾಗಜೀನ್ ನಡೆಸಿದ ಸಮೀಕ್ಷೆಯಲ್ಲಿ ಕ್ರೈಸ್ತನ ಪುನರಾವತಾರ, ಭಯೋತ್ಪಾದನೆ, ಅಮೆರಿಕದ ಆರ್ಥಿಕ ಸ್ಥಿತಿಗತಿಗಳ ಬಗ್ಗೆ ಜನರು ತಮ್ಮ ಅನಿಸಿಕೆ ಹೊರಗೆಡಹಿದ್ದಾರೆ.

ಕಂಪ್ಯೂಟರ್ ಕ್ರಾಂತಿ, ಕ್ಯಾನ್ಸರ್ ನ ನಿರ್ನಾಮ, ಅಮೆರಿಕದ ಆರ್ಥಿಕ ಸ್ಥಿತಿ ಉತ್ತಮವಾಗುವಿಕೆ ಕುರಿತಂತೆ ಅನೇಕರು ಆಶಾವಾದ ಹೊಂದಿದ್ದರೆ, ಕೆಲವರು ವಿಶ್ವಯುದ್ಧ, ಉಲ್ಕಾಪಾತ, ವಿದ್ಯುತ್ ಕ್ಷಾಮದಿಂದ ಅಮೆರಿಕಾ ಸರ್ವನಾಶವಾಗಿ ಹೋಗುತ್ತದೆ ಎಂದು ನಿರಾಶಾವಾದ ವ್ಯಕ್ತಪಡಿಸಿದ್ದಾರೆ.

ಈ ಶತಮಾನದ ಮಧ್ಯದಲ್ಲಿ ಮಾನವ ನಿರ್ಮಿತ ಕಂಪ್ಯೂಟರ್ ಕೂಡ ಮಾನವನಂತೆ ವ್ಯವಹರಿಸಲು ಸಾಧ್ಯವಾಗುತ್ತದೆ ಎಂದು ಶೇ.81ರಷ್ಟು ಜನ ಅಭಿಪ್ರಾಯಪಟ್ಟಿದ್ದಾರೆ. ಶೇ.71ರಷ್ಟು ಜನರು ಕ್ಯಾನ್ಸರ್ ನಿಂದ ಸಂಪೂರ್ಣವಾಗಿ ಗುಣಮುಖವಾಗುವುದು ಸಾಧ್ಯ ಎಂದು ಹೇಳಿದ್ದಾರೆ.

ಈ ಸಮೀಕ್ಷೆಯಲ್ಲಿ 30ರೊಳಗಿನ ಯುವಕರೇ ಹೆಚ್ಚಾಗಿ ಭಾಗವಹಿಸಿದ್ದು, ಶೇ.68ರಷ್ಟು ಜನ 2050ರ ಹೊತ್ತಿಗೆ ವಿಶ್ವಯುದ್ಧವಾಗುತ್ತದೆ, ಅದೇ ಸಮಯದಲ್ಲಿ ವಿದ್ಯುತ್ ಕ್ಷಾಮ ಸಂಭವಿಸಲಿದೆ ಎಂದು ಶೇ.72ರಷ್ಟು ಮಂದಿ ಮತ್ತು ಶೇ.31ರಷ್ಟು ಜನರು ಉಲ್ಕಾಪಾತವಾಗಿ ಜೀವಜಂತುಗಳಿಗೆ ಅಪಾರ ಹಾನಿಯಾಗಲಿದೆ ಎಂದಿದ್ದಾರೆ. ಶೇ. 53ರಷ್ಟು ಮಂದಿ ಅಮೆರಿಕಾದ ಮೇಲೆ ಭಯೋತ್ಪಾದಕರಿಂದ ಅಣುದಾಳಿ ಆಗಲಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಸಮೀಕ್ಷೆಯನ್ನು ದೂರವಾಣಿ ಮತ್ತು ಆನ್ ಲೈನ್ ಸಂದರ್ಶನಗಳ ಮುಖಾಂತರ ನಡೆಸಲಾಗಿತ್ತು ಎಂದು ದಿ ಟೆಲಿಗ್ರಾಫ್ ವರದಿ ಮಾಡಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X