ಟಾಕ್ 24 ಅವರ್ಸ್ : ಟಾಟಾ ಬಿಯಾನಿ ಕಮಾಲ್

ಈ ಸೇವೆಯನ್ನು ಫ್ಯೂಚರ್ ಸಮೂಹದ 75 ನಗರಗಳಲ್ಲಿರುವ ಚಿಲ್ಲರೆ ಮಾರಾಟ ಮಳಿಗೆಗಳು ಹಾಗೂ 65 ಗ್ರಾಮೀಣ ಪ್ರದೇಶಗಳಿಗೆ ವಿಸ್ತರಿಸಲಾಗುವುದು ಎನ್ನಲಾಗಿದೆ. ಸಮೂಹದ ಪ್ಯಾಂಟಲೂನ್, ಬಿಗ್ ಬಜಾರ್ ಹಾಗೂ ಸೆಂಟ್ರಲ್ ಮಳಿಗೆಗಳಲ್ಲಿ ಸಂಪರ್ಕ ಲಭ್ಯವಿದ್ದು ಗ್ರಾಹಕರು ತಮ್ಮ ರೀ ಚಾರ್ಚ್ ಮೌಲ್ಯಕ್ಕನುಗುಣವಾಗಿ ಉಚಿತ ಮಾತನಾಡುವ ಸಮಯ ಪಡೆಯಲಿದ್ದಾರೆ.
ಪ್ಯಾಂಟಲೂನ್ ನಲ್ಲಿ 2500 ರು.ಗಳ ಖರೀದಿ ಮಾಡುವ ಗ್ರಾಹಕರು 50 ನಿಮಿಷಗಳ ಉಚಿತ ಟಾಕ್ ಟೈಮ್ ಹಾಗೂ ಬಿಗ್ ಬಜಾರ್ ನಲ್ಲಿ 1500 ರುಪಾಯಿಗಳ ಖರೀದಿ ಮಾಡುವ ಗ್ರಾಹಕರು 90 ನಿಮಿಷಗಳ ಉಚಿತ ಟಾಕ್ ಟೈಮ್ ಪಡೆಯಲಿದ್ದಾರೆ.
ಪ್ರೀ ಪೇಯ್ಡ್ , ಪೋಸ್ಟ್ ಪೇಯ್ಡ್ ಬದಲಿಗೆ ನಾವು ಅನ್ ಪೇಯ್ಡ್ ಮೊಬೈಲ್ ಜಾರಿಗೆ ತಂದಿದ್ದೇವೆ ಎನ್ನುತ್ತಾರೆ ಫ್ಯೂಚರ್ ಸಮೂಹದ ಟೆಲಿಕಾಮ್ ವಿಭಾಗದ ಮುಖ್ಯಸ್ಥ ಮಯೂರ್ ತೋಶ್ನಿವಾಲ್. ಫ್ಯೂಚರ್ ಗ್ರೂಪ್ ದೇಶದ ಅತೀ ದೊಡ್ಡ ಚಿಲ್ಲರೆ ಮಾರಾಟ ಸರಪಳಿ ಮಳಿಗೆ ಆಗಿದೆ.
ಟಾಟಾದ ಜಿಎಸ್ಎಮ್ ಮೊಬೈಲ್ ಸೇವೆಗೆ ಜಪಾನ್ ನ ಎನ್ ಟಿಟಿ ಡೊಕೊಮೊ ಹಾಗೂ ಸಿ ಡಿಎಮ್ಎ ಮೊಬೈಲ್ ಗಳಿಗೆ ವರ್ಜಿನ್ ಮೊಬೈಲ್ ಪಾಲುದಾರನಾಗಿದೆ. ಫ್ಯೂಚರ್ ಸಮೂಹ ಯಾವುದೇ ಮೊಬೈಲ್ ನೆಟ್ ವಕ್ ಹೊಂದಿಲ್ಲದಿದ್ದರೂ, ಹಾಲಿ ಮೊಬೈಲ್ ಆಪರೇಟರ್ ಗಳ ಬಳಿ ಮಾತನಾಡುವ ಸಮಯವನ್ನು ಖರೀದಿ ಮಾಡಿ ತನ್ನ ಬ್ರಾಂಡ್ ನಡಿಯಲ್ಲಿ ತನ್ನ ಗ್ರಾಹಕರಿಗೆ ನೀಡುತ್ತಿದೆ.
'ಶಾಪ್ ಮೋರ್, ಟಾಕ್ ಮೋರ್' ಎನ್ನುವುದು ಫ್ಯೂಚರ್ ಸಮೂಹದ ಮಂತ್ರವಾಗಿದೆ. ಎರಡೂ ಕಂಪೆನಿಗಳ ಸಹಯೋಗದಿಂದ ಎರಡೂ ಕಂಪೆನಿಗಳ ಗ್ರಾಹಕರಿಗೆ ಎರಡೂ ಕಂಪೆನಿಗಳ ಸೇವೆಗಳು ಲಭ್ಯವಾಗಲಿವೆ ಎಂದು ಬಿಯಾನಿ ಹೇಳಿದರು.












Click it and Unblock the Notifications