ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪೆಟ್ರೋಲ್ ಬೆಲೆ ಏರಿಕೆಗೆ ಜೂ.25 ಮಹೂರ್ತ?

By Mahesh
|
Google Oneindia Kannada News

EGoM to meet Friday to consider fuel price hike
ನವದೆಹಲಿ, ಜೂ.22: ಜೂನ್ ಮೊದಲ ವಾರದಲ್ಲಿ ಇಂಧನ ಬೆಲೆ ಏರಿಸುವುದಾಗಿ ಬೆದರಿಕೆ ಸುದ್ದಿ ಕೊಟ್ಟಿದ್ದ ಕೇಂದ್ರ ಸರ್ಕಾರ, ಸಚಿವ ಸಮೂಹದ ಸಲಹೆಯಂತೆ, ದರ ಪರಿಷ್ಕರಣೆಯನ್ನು ಮುಂದೂಡಿತ್ತು. ಆದರೆ, ಈ ಶುಕ್ರವಾರ ಮತ್ತೆ ಈ ಬಗ್ಗೆ ಚರ್ಚಿಸಲು ಸಚಿವ ಸಮೂಹ(eGoM )ಸಭೆ ಸೇರಿ, ಇಂಧನ ದರ ಏರಿಕೆ ಬಗ್ಗೆ ತೀರ್ಮಾನ ಕೈಗೊಳ್ಳಲಿದೆ.

ದೇಶಿಯ ಹಾಗೂ ಅಂತಾರಾಷ್ಟ್ರೀಯ ತೈಲ ಬೆಲೆಯಲ್ಲಿ ಸಾಕಷ್ಟು ವ್ಯತ್ಯಾಸವಿದ್ದು, ದೇಶಿ ಚಿಲ್ಲರೆ ಮಾರಾಟ ಬೆಲೆ ಈಗ ಪ್ರತಿ ಬ್ಯಾರೆಲ್ ಗೆ 60 ಡಾಲರ್ ಆಗಿದೆ. ಅದೇ ಅಂತಾರಾಷ್ಟ್ರೀಯ ತೈಲ ಬೆಲೆ ಬ್ಯಾರೆಲ್ ಗೆ 77 ಡಾಲರ್ ಆಗಿದೆ. ಇವೆರಡನ್ನು ಸಮಾನಾಗಿಸಿದರೆ, ಲೀಟರಿಗೆ 3.75 ರು.ಗಳಷ್ಟು ತೈಲ ಬೆಲೆ ಏರಿಕೆ ಕಾಣಬೇಕಾಗುತ್ತದೆ.

ಕೇಂದ್ರದ ವಾಮಮಾರ್ಗ:ಇಂಧನ ಏರಿಕೆಯ ಬಿಸಿ ಮುಟ್ಟುವ ಮೊದಲು ಕೇಂದ್ರ ಸಚಿವ ಮುರಳಿ ದಿವೋರಾ ರಾಜ್ಯ ಸರ್ಕಾರಗಳಿಗೆ ನೀಡಿರುವ ಮಹತ್ವದ ಸೂಚನೆ ನೀಡಿದ್ದಾರೆ. ಪೆಟ್ರೋಲ್ ಮೇಲಿನ ಮಾರಾಟ ತೆರಿಗೆಯನ್ನು ಕಡಿತಗೊಳಿಸಲು ರಾಜ್ಯಸರ್ಕಾರಗಳಿಗೆ ಹೇಳಿದ್ದಾರೆ. ಇದರ ಜೊತೆಗೆ ವಿವಿಧ ರಾಜ್ಯಗಳು ವಿಧಿಸಿರುವ ಮೌಲ್ಯವರ್ಧಿತ ತೆರಿಗೆ ಕೂಡ ಗ್ರಾಹಕರ ಮೇಲೆ ಪರಿಣಾಮ ಬೀರುತ್ತದೆ ಎಂದು ಕೇಂದ್ರ ಸಚಿವರು ಅಭಿಪ್ರಾಯಪಟ್ಟಿದ್ದಾರೆ.

ಏನೇ ಆದರೂ, ಜೂ. 26 ರಂದು ಕೇಂದ್ರ ಗೃಹ ಸಚಿವ ಪ್ರಣಬ್ ಮುಖರ್ಜಿ ನೇತೃತ್ವದಲ್ಲಿ ನಡೆಯುವ ಸಚಿವ ಸಮೂಹ ಸಭೆಯಲ್ಲಿ ಎಲ್ಲವೂ ನಿರ್ಧಾರವಾಗಲಿದೆ. ಪೆಟ್ರೋಲ್ ಬೆಲೆ ಗಳನ್ನು ಸರ್ಕಾರಿ ನಿಯಂತ್ರಣದಿಂದ ಮುಕ್ತಗೊಳಿಸುವ ಸಾಧ್ಯತೆಯೂ ಇದೆ. ಎನ್ನಲಾಗಿದೆ.

ಬೆಲೆ ಏರಿಕೆ ನಿರ್ಧಾರ ಕೈಗೊಳ್ಳುವ ಮುನ್ನ, ಕೀರಟ್ ಪಾರೀಖ್ ವರದಿ ಶಿಫಾರಸ್ಸಿನ ಬಗ್ಗೆ ಕೂಡ ಚರ್ಚೆ ನಡೆಯಲಿದೆ. ಪೆಟ್ರೋಲ್ ಹಾಗೂ ಡೀಸೆಲ್ ದರ ಪ್ರತಿ ಲೀಟರ್ ಗೆ 3.50 ರು ಹೆಚ್ಚಳವಾಗುವ ಸಾಧ್ಯತೆಯಿದೆ. ಅಡುಗೆ ಅನಿಲದ ದರ ಪ್ರತಿ ಸಿಲಿಂಡರ್ ಗೆ 25 ರುಪಾಯಿಗಳಿಂದ 50 ರುಪಾಯಿಗಳ ವರೆಗೂ ಹೆಚ್ಚಾಗುವ ಸಾಧ್ಯತೆಯಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X