ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಆರ್ಎಸ್ಎಸ್' ಮದ್ದಿಗೆ ಅಮೆರಿಕಾದ ಪೇಟೆಂಟ್

By Rajendra
|
Google Oneindia Kannada News

Go-vigyan Anusandhan Kendra
ನಾಗಪುರ, ಜೂ.18 : ರಾಷ್ಟ್ರೀಯ ಸ್ವಯಂಸೇವಕ ಸಂಘದ ಗೋ ವಿಜ್ಞಾನ ಅನುಸಂಧಾನ ಕೇಂದ್ರ ಸಂಶೋಧಿಸಿರುವ ಗೋ ಮೂತ್ರದಿಂದ ತಯಾರಾದ ಕ್ಯಾನ್ಸರ್ ಮದ್ದಿಗೆ ಅಮೆರಿಕಾದ ಪೇಟೆಂಟ್ ಲಭಿಸಿದೆ. ಈ ಮದ್ದಿಗೆ 'ಕಾಮಧೇನು ಆರ್ಕ್' ಎಂದು ನಾಮಕರಣ ಮಾಡಲಾಗಿದೆ.

ಸತತ ಮೂರನೇ ಬಾರಿಗೆ ಈ ಕೇಂದ್ರದ ಸಾಧನೆಗಾಗಿ ಅಮೆರಿಕಾದ ಪೇಟೆಂಟ್ ಲಭಿಸಿದೆ. ಅನುಸಂಧಾನ್ ಕೇಂದ್ರ, ರಾಷ್ಟ್ರೀಯ ಎನ್ವಿರಾಂಮೆಂಟಲ್ ರಿಸರ್ಚ್ ಇನ್ಸ್ಟಿಟ್ಯೂಟ್ ಜಂಟಿಯಾಗಿ ಈ ಸಂಶೋಧನೆಯನ್ನು ಕೈಗೊಂಡಿದೆ. ಗೋ ಮೂತ್ರವನ್ನು ಸಂಸ್ಕರಿಸಿ ತಯಾರಿಸಿರುವ ಈ ಮದ್ದು ಜೀವಧಾತುಗಳ ಪುನರುತ್ಪತ್ತಿಗೆಸಹಕಾರಿಯಾಗಲಿದೆ.

ಸಾಮಾನ್ಯವಾಗಿ ರೋಗಿಗೆ ನಿರೋಧಕ ಶಕ್ತಿ ಕಡಿಮೆಯಾದಾಗ, ಜೀವಧಾತುಗಳ ಪುನರುತ್ಪತ್ತಿ ಕೂಡ ನಿಂತಿರುತ್ತದೆ. ಈ ಮದ್ದನ್ನು ಮೂವರ ಮೇಲೆ ಪ್ರಯೋಗಿಸಲಾಗಿತ್ತು. ಇವರಲ್ಲಿ ಇಬ್ಬರು ಗಂಟಲು ಹಾಗೂ ಮತ್ತೊಬ್ಬರು ಗರ್ಭಕೋಶ ಕ್ಯಾನ್ಸರ್ ನಿಂದ ಬಳಲುತ್ತಿದ್ದರು. ಈ ಮೂವರು ಈಗ ಗುಣಮುಖರಾಗಿದ್ದಾರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X