ಅನಾಹುತಕಾರಿ ಹೇಳಿಕೆ ನೀಡಿದ್ದ ಭಾಷಣಕಾರನಿಗೆ ನಿಷೇಧ

44 ವರ್ಷದ ಮುಂಬೈ ವೈದ್ಯ, ಇಸ್ಲಾಮಿಕ್ ರಿಸರ್ಚ್ ಫೌಂಡೇಷನ್ ಸ್ಥಾಪಕ, ಪೀಸ್ ಟಿವಿ ಚಾನಲ್ ಮಾಲಿಕ ಜಾಕಿರ್ ಇತ್ತೀಚೆಗೆ ಭಾಷಣವೊಂದರಲ್ಲಿ ಮೇಲಿನ ಹೇಳಿಕೆ ನೀಡಿದ್ದ. ಲಂಡನ್ ಮತ್ತು ಉತ್ತರ ಇಂಗ್ಲೆಂಡಿನಲ್ಲಿ ಜಾಕಿರ್ ಉಪನ್ಯಾಸಗಳನ್ನು ನೀಡುವವನಿದ್ದ.
ಯುನೈಟೆಡ್ ಕಿಂಗಡಂಗೆ ಬರದಂತೆ ಜಾಕಿರ್ ಮೇಲೆ ನಿಷೇಧ ಹೇರಲಾಗಿದೆ ಎಂದು ಬ್ರಿಟಿಷ್ ಗೃಹ ಕಾರ್ಯದರ್ಶಿ ತೆರೆಸಾ ಮೇ ಹೇಳಿಕೆ ನೀಡಿದ್ದಾರೆ. ಅವರ ಈ ನಡತೆಯನ್ನು ಒಪ್ಪಲಾಗುವುದಿಲ್ಲ. ಈ ಬಗೆಯ ಅನೇಕ ಹೇಳಿಕೆ ನೀಡಿದ್ದರ ಬಗ್ಗೆ ನಮ್ಮಲ್ಲಿ ಮಾಹಿತಿ ಇದೆ. ಸಾರ್ವಜನಿಕರನ್ನು ಕೆರಳಿಸುವ ಇಂತಹ ಹೇಳಿಕೆ ನೀಡುವವರನ್ನು ಬರಲು ಬಿಡುವುದಿಲ್ಲ ಎಂದು ಮೇ ಹೇಳಿದ್ದಾರೆ.
ಯಾರದೇ ಉಪಸ್ಥಿತಿ ಸಾರ್ವಜನಿಕವಾಗಿ ಹಾನಿ ತರುವಂತಿದ್ದರೆ ಅಂಥವರು ಬ್ರಿಟನ್ನಿಗೆ ಬರದಂತೆ ನಿಷೇಧಿಸುವ ಅಧಿಕಾರ ಬ್ರಿಟನ್ ಗೃಹ ಕಾರ್ಯದರ್ಶಿಗಿದೆ.












Click it and Unblock the Notifications