ವಿಶ್ವ ತಮಿಳು ಸಮ್ಮೇಳನಕ್ಕೆ ಸಿಎಂಗೆ ಆಹ್ವಾನ
ಬೆಂಗಳೂರು,
ಜೂ 17 : ತಮಿಳುನಾಡಿನ ಕೊಯಮತ್ತೂರಿನಲ್ಲಿ ಜೂನ್ 23 ರಿಂದ ಆರಂಭವಾಗಲಿರುವ ವಿಶ್ವ ತಮಿಳು ಸಮ್ಮೇಳನದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸುವಂತೆ ತಮಿಳುನಾಡು ಸರಕಾರ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರನ್ನು ಆಹ್ವಾನಿಸಿದೆ. id="toptextpromo">ತಮಿಳುನಾಡು
ಸರಕಾರದ ಕಾನೂನು ಸಚಿವ ದೊರೈ ಮುರುಗನ್ ಬುಧವಾರ (ಜೂ.16) ಕರ್ನಾಟಕ ಮುಖ್ಯಮಂತ್ರಿಯವರನ್ನು ಭೇಟಿಯಾಗಿ ಖುದ್ದು ಆಹ್ವಾನ ನೀಡಿದ್ದಾರೆ. ಸಚಿವ ಮುರುಗನ್ ಸಿಎಂಗೆ ಶಾಲು ಹೊದಿಸಿ ಸನ್ಮಾನಿಸಿ ಸಮ್ಮೇಳನದಲ್ಲಿ ಭಾಗವಹಿಸುವಂತೆ ಕೋರಿಕೆ ಸಲ್ಲಿಸಿದರು. id='are-slot-1' class='oiad oi-axt oiadv'> id='top-searched-articles'>ಈ
ಸಂದರ್ಭದಲ್ಲಿ ಮಾತನಾಡುತ್ತಾ ಮುರುಗನ್, ಚೆನ್ನೈ ನಲ್ಲಿ ಸರ್ವಜ್ಞ ಪ್ರತಿಮೆ ಹಾಗೂ ಬೆಂಗಳೂರಿನಲ್ಲಿ ತಿರುವಳ್ಳುವರ್ ಪ್ರತಿಮೆ ಸ್ಥಾಪಿಸಿರುವ ಪ್ರಯತ್ನದಲ್ಲಿ ಮುಂದಾದ ರಾಜ್ಯ ಸರಕಾರದ ಕ್ರಮವನ್ನು ಮುಕ್ತಕಂಠ ದಿಂದ ಶ್ಲಾಘಿಸಿ, ಇದರಿಂದ ಎರಡೂ ರಾಜ್ಯಗಳ ಸಂಬಂಧ ಮತ್ತಷ್ಟು ಗಟ್ಟಿಗೊಂಡಿದೆ ಎಂದರು. ಸುಮಾರು 200 ಕೋಟಿ ರು ವೆಚ್ಚದಲ್ಲಿ ವಿಶ್ವ ತಮಿಳು ಸಮ್ಮೇಳನ ಮಾಡಲು ಡಿಎಂಕೆ ಸರ್ಕಾರ ಸರ್ವ ಸನ್ನದ್ಧವಾಗಿದೆ.











Click it and Unblock the Notifications