ಪುಣೆ ಸ್ಫೋಟ ಸಮದ್ ಭಟ್ಕಳಗೆ ಜಾಮೀನು
ಮುಂಬೈ
, ಜೂ.16: ಪುಣೆ ಸ್ಫೋಟದ ಪ್ರಮುಖ ಆರೋಪಿ ಅಬ್ದುಲ್ ಸಮದ್ ಭಟ್ಕಳ್ ಗೆ 25ಸಾವಿರ ದಂಡ ವಿಧಿಸಿ ಸ್ಥಳೀಯ ನ್ಯಾಯಲಯವು ಜಾಮೀನು ನೀಡಿದೆ. ಅಕ್ರಮ ಶಸ್ತ್ರಾಸ್ತ್ರ ಸಾಗಾಣಿಕೆ ಕೇಸ್ ನಲ್ಲಿ ಸಮದ್ ಬಂಧಿತನಾಗಿದ್ದ. id="toptextpromo">ನ್ಯಾಯಾಲಯದ
ಆದೇಶದಂತೆ ಸಮದ್ ಪರ ವಕೀಲರು 25,000 ರುಪಾಯಿಗಳ ಠೇವಣಿ ಇಟ್ಟು ಜಾಮೀನು ಪಡೆದುಕೊಂಡಿದ್ದಾರೆ. ಕಳೆದ ಒಂದು ತಿಂಗಳಿನಿಂದ ನ್ಯಾಯಾಂಗ ವಶದಲ್ಲಿದ್ದ ಸಮದ್ ಬಿಡುಗಡೆಗಾಗಿ ಆತನ ಪೋಷಕರು ತೀವ್ರ ಹೋರಾಟ ನಡೆಸಿದ್ದರು. id='are-slot-1' class='oiad oi-axt oiadv'> id='top-searched-articles'>ದುಬೈನಿಂದ
ಮಂಗಳೂರಿಗೆ ಬಂದಿದ್ದ ಸಮದ್ ಭಟ್ಕಳ್ ನನ್ನು ಮಹಾರಾಷ್ಟ್ರದ ಎಟಿಎಸ್ ಬಜ್ಪೆ ವಿಮಾನ ನಿಲ್ದಾಣದಲ್ಲಿ ಬಂಧಿಸಿದ್ದರು. ಜರ್ಮನ್ ಬೇಕರಿ ಸ್ಫೋಟಕ್ಕೆ ಸಂಬಂಧಿಸಿದಂತೆ ಇನ್ನೂ ನಾಲ್ವರನ್ನು ಆರೋಪಿಗಳೆಂದು ಗುರುತಿಸಲಾಗಿದೆ. ಫೆ.13 ರಂದು ಪುಣೆಯ ಜರ್ಮನ್ ಬೇಕರಿ ಸ್ಫೋಟದಲ್ಲಿ 17 ಜನ ಸಾವನ್ನಪ್ಪಿದ್ದರು. ಸುಮಾರು 60 ಜನಕ್ಕೂ ಹೆಚ್ಚು ಜನ ಗಾಯಗೊಂಡಿದ್ದರು.











Click it and Unblock the Notifications