Get Updates
Get notified of breaking news, exclusive insights, and must-see stories!

ಭಾರತಿ ವಿಷ್ಣು ಸೇರಿದಂತೆ 16 ಮಂದಿಗೆ ರಾಣಿ ಚೆನ್ನಮ್ಮ ಪ್ರಶಸ್ತಿ

Bharathi Vishnuvardhan
ಬೆಂಗಳೂರು, ಜೂ.15: ಅಭಿನೇತ್ರಿ ಭಾರತಿ ವಿಷ್ಣುವರ್ಧನ್, ಗೀತಾಬಾಲಿ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ 16 ಮಹಿಳೆಯರು ಹಾಗೂ ಆರು ಸಂಸ್ಥೆಗಳನ್ನು 2008-09ನೇ ಸಾಲಿನ 'ಕಿತ್ತೂರು ರಾಣಿ ಚೆನ್ನಮ್ಮ' ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಸಂಸ್ಥೆಗಳಿಗೆ ತಲಾ ರು.25 ಸಾವಿರ ನಗದು ಬಹುಮಾನ ಹಾಗೂ ವೈಯಕ್ತಿಕ ವಿಭಾಗದಲ್ಲಿ ರು.10 ಸಾವಿರ ನಗದು ಬಹುಮಾನ ಪ್ರಶಸ್ತಿ ಪತ್ರಗಳನ್ನು ಒಳಗೊಂಡಿದೆ. ಜೂ.16ರಂದು ವಿಧಾನಸೌಧ ಸಮ್ಮೇಳನ ಸಭಾಂಗಣದಲ್ಲಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ಪ್ರಶಸ್ತಿಗಳನ್ನು ಪ್ರದಾನ ಮಾಡಲಿದ್ದಾರೆ. ಇದೇ ಸಂದರ್ಭದಲ್ಲಿ ಉತ್ತಮ ಸಾಧನೆ ಮಾಡಿರುವ ಮೂರು ಸ್ತ್ರೀಶಕ್ತಿ ಗುಂಪುಗಳಿಗೆ 2009-10ನೇ ಸಾಲಿನ 'ಯಶೋಧರಮ್ಮ ದಾಸಪ್ಪ ಪ್ರಶಸ್ತಿ'ಗಳನ್ನು ಪ್ರದಾನ ಮಾಡಲಾಗುತ್ತದೆ.

ವೈಯಕ್ತಿಕ ವಿಭಾಗದಲ್ಲಿ ಬೆಂಗಳೂರಿನ ಹೇಮಾ ದೇಶಪಾಂಡೆ, ಶಿವಮೊಗ್ಗ ವಿನೋಭಾನಗರದ ಎಸ್ ವಿ ಚಂದ್ರಕಲಾ, ಬೆಂಗಳೂರಿನ ಮೇರಿ ಅಕ್ಕಮ್ಮನ್, ಕೊಪ್ಪಳದ ಸತ್ಯಾನಂದಪುರದ ವಿಜಯಾ ಎಸ್.ಹಿರೇಮಠ, ತರೀಕೆರೆಯ ಪ್ರಗತಿ ಮಹಿಳಾ ಸಮಾಜದ ಸಂಸ್ಥಾಪಕಿ ಎ ಎಸ್ ಕಮಾಲಾದೇವಿ, ಧಾರವಾಡದ ದಕ್ಷಾಯಿಣಿ ಬಸವರಾಜ ಸಟ್ಟೂರ, ಬಿಜಾಪುರದ ಶಾಂತಾಬಾಯಿ ಹಾಗೂ ಕುಷ್ಟಗಿಯ ಬುತ್ತಿ ಬಸವೇಶ್ವರನಗರದ ರೇಣುಕಾ ಪವಾರ್ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಕಲಾ ವಿಭಾಗದಲ್ಲಿ ಭಾರತಿ ವಿಷ್ಣುವರ್ಧನ್, ಗೀತಾಬಾಲಿ ಮತ್ತು ಬಳ್ಳಾರಿಯ ಪದ್ಮಮ್ಮ, ಸಾಹಿತ್ಯ ವಿಭಾಗದಲ್ಲಿ ಮಡಿಕೇರಿಯ ಅಪರ್ಣಾ ಮಂಜುನಾಥ ಹುಲಿಸಾಲ, ಬಸವನ ಬಾಗೇವಾಡಿಯ ಪ್ರಭಾವತಿ ಎಸ್ ದೇಸಾಯಿ ಹಾಗೊ ಗಂಗಾವತಿಯ ಸಾಲಿಮಾ ಎಂ. ಮಂಗಳೂರು ಹಾಗೂ ಕ್ರೀಡಾ ವಿಭಾಗದಲ್ಲಿ ಬೆಂಗಳೂರಿನ ಎಂ ಮಂಜುಳಾ, ಮಡಿಕೇರಿಯ ಪಿ ಎಂ ಶೈಲಜಾ ಅವರನ್ನು ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಸಂಸ್ಥೆಗಳ ವಿಭಾಗದಲ್ಲಿ ಕೋಲಾರದ ಸರಸ್ವತಿ ಮಹಿಳಾ ಮಂಡಳಿ, ಕೆಸ್ತೂರಿನ ನಿಸರ್ಗ ಗ್ರಾಮೀಣಾಭಿವೃದ್ಧಿ ಸಂಸ್ಥೆ, ಹುಬ್ಬಳ್ಳಿಯ ಸುರಭಿ ಮಹಿಳಾ ಸಂಘ, ಬೆಳಗಾವಿಯ ಆಶಾಜ್ಯೋತಿ ಮಹಿಳಾ ಅಭಿವೃದ್ಧಿ ಕೇಂದ್ರ, ಕೊಪ್ಪಳದ ಅಕ್ಕಮಹಾದೇವಿ ಮಹಿಳಾ ಮಂಡಳಿ ಹಾಗೂ ಮೈಸೂರಿನ ಜ್ಞಾನಜ್ಯೋತಿ ಸಂಸ್ಥೆಯನ್ನು ಪ್ರಶಸ್ತಿಗೆ ಆಯ್ಕೆಮಾಡಲಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+