ಗಂಗಾನದಿಯಲ್ಲಿ ಭೀಕರ ದೋಣಿ ದುರಂತ
ಲಕ್ನೋ,ಜೂ.14:
ಗಂಗಾ ನದಿಯಲ್ಲಿ ಇಂದು ಸಂಭವಿಸಿದ ಭೀಕರ ದೋಣಿ ದುರಂತದಲ್ಲಿ ಕನಿಷ್ಠ 60 ಜನ ಸಾವನ್ನಪ್ಪಿರುವ ಸಾಧ್ಯತೆಗಳಿವೆ. ಈವರೆಗೂ 20 ಜನರ ಶವಗಳು ಮಾತ್ರ ಪತ್ತೆಯಾಗಿದೆ. id="toptextpromo">ಉತ್ತರ
ಪ್ರದೇಶದ ದುಬಾಹರ್ ಪ್ರದೇಶದಲ್ಲಿನ ಈ ದೋಣಿಯಲ್ಲಿ 60ಕ್ಕೂ ಅಧಿಕ ಮಂದಿ ಪ್ರಯಾಣಿಕರು ಪ್ರಯಾಣಿಸುತ್ತಿದ್ದರು.ನದಿ ಮಧ್ಯದಲ್ಲಿ ಪ್ರಾರ್ಥನಾ ಕಾರ್ಯಕ್ರಮ ನಡೆಸಲು ತೆರಳಿದ್ದ ತಂಡದವರು ದೋಣಿಯನ್ನು ಒಜಾವಾಲಿಯಾ ಘಾಟ್ ಪ್ರದೇಶದಿಂದಬಾಡಿಗೆಗೆ ಪಡೆದಿದ್ದರು ಎಂದು ಜಿಲ್ಲಾಧಿಕಾರಿ ಸೆಂಥಿಲ್ ಪಾಂಡ್ಯನ್ ತಿಳಿಸಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಸಾವಿನ
ಸಂಖ್ಯೆ ಸರಿಯಾಗಿ ಪತ್ತ್ತೆ ಹಚ್ಚಲು ಸಾಧ್ಯವಾಗಿಲ್ಲ. ಹತ್ತಿಪ್ಪತ್ತು ಮಂದಿ ದೋಣಿಯಿಂದ ಹಾರಿ ಪಾರಾಗಿರುವ ಸಾಧ್ಯತೆಯೂ ಇದೆ. 25 ಜನಕ್ಕೆ ಸ್ಥಳಾವಕಾಶವಿದ್ದ ದೋಣಿಯಲ್ಲಿ ಸುಮಾರು 60 ಜನ ಪ್ರಯಾಣ ಮಾಡಿದ್ದೇ ದುರಂತಕ್ಕೆ ಕಾರಣೆ ಎಂದು ಮೇಲ್ನೋಟಕ್ಕೆ ಕಂಡು ಬಂದಿದೆ. ಮೃತಪಟ್ಟವರಲ್ಲಿ ಮಕ್ಕಳ ಸಂಖ್ಯೆ ಅಧಿಕವಾಗಿದ್ದು, ರಕ್ಷಣಾ ಕಾರ್ಯ ಭರದಿಂದ ಸಾಗಿದೆ ಎಂದು ಪಾಂಡ್ಯನ್ ಹೇಳಿದರು.











Click it and Unblock the Notifications