ತಮಿಳು ದೇವ್ರಿಗೆ ಶರಣೆಂದ ಕನ್ನಡ ಸಿಎಂ

ಮುಖ್ಯಮಂತ್ರಿ ಯಡಿಯೂರಪ್ಪ ಪರವಾಗಿ ಕರ್ನಾಟಕದ ಮುಜರಾಯಿ ಆಯುಕ್ತ ಕೆ.ರಾಮಣ್ಣ ನಾಯಕ್ ಅವರು 1 ಕೋಟಿ ರು.ಮೊತ್ತದ ಡಿಮ್ಯಾಂಡ್ ಡ್ರಾಫ್ಟ್‌ಅನ್ನು ತಮಿಳುನಾಡು ಧಾರ್ಮಿಕ ದತ್ತಿ ಸಚಿವ ಕೆಆರ್ ಪೆರಿ ಕರುಪ್ಪನ್‌ರವರಿಗೆ ನೀಡಿದ್ದಾರೆ.ದೇವಾಲಯದ ಸ್ವಾಮಿ ಹಯಗ್ರೀವರ್ ಸನ್ನಿಧಿ ಜೀರ್ಣೋದ್ಧಾರಕ್ಕೆ ಈ ದೇಣಿಗೆ ಹಣವನ್ನು ವಿನಿಯೋಗಿಸಲಾಗುವುದು ಎಂದು ದೇಗುಲದ ಆಡಳಿತ ಮಂಡಳಿ ತಿಳಿಸಿದೆ.
ಕರವೇಗೆ ಇಲ್ಲ ಬೆಲೆ: ನಮ್ಮ ರಾಜ್ಯದ ನೂರಾರು ದೇಗುಲಗಳು, ಗುಡಿ ಗೋಪುರಗಳು ಪಾಳುಬಿದ್ದಿದೆ, ಸುಣ್ಣಬಣ್ಣ ಬಳಿದು ವರ್ಷಗಳೇ ಕಳೆದಿವೆ. ಸಂಬಂಧಪಟ್ಟ ಇಲಾಖೆಗೆ ಸೂಕ್ತ ಸಚಿವರೇ ನೇಮಕವಾಗಿಲ್ಲ, ಪುರಕ್ಕೆ ಹಿತವನ್ನು ಬಯಸುವ ಪುರೋಹಿತ, ಅರ್ಚಕರ ಪಾಡು ಹೇಳತೀರದು.
ಪರಿಸ್ಥಿತಿ ಹೀಗಿರುವಾಗ, ಯಡಿಯೂರಪ್ಪ ಅವರು ತಮಿಳುನಾಡಿನ ದೇಗುಲಗಳ ಉದ್ಧಾರಕ್ಕೆ ಭಾರಿ ಹಣ ನೀಡಿರುವುದು ಖಂಡನಾರ್ಹ ಎಂದು ಪ್ರವೀಣ್ ಕುಮಾರ್ ಶೆಟ್ಟಿ ಬಳಗದ ಕರವೇ ಭಾರಿ ಪ್ರತಿ ಭಟನೆ ನಡೆಸಿತ್ತು. ಆದರೆ, ಇದನ್ನು ಲೆಕ್ಕಿಸದ ಯಡಿಯೂರಪ್ಪ ತಮಿಳುನಾಡು ದೇಗುಲಕ್ಕೆ ದೇಣಿಗೆ ನೀಡಿದ್ದಾರೆ.












Click it and Unblock the Notifications