• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ತುಳಸಿ ಬೆಳೆಸಿ ಮನುಕುಲ ಉಳಿಸಿ

By * ಗುರುರಾಜ ಪೋಶೆಟ್ಟಿಹಳ್ಳಿ, ಬೆಂಗಳೂರು
|

ಧಾರ್ಮಿಕ ಪ್ರಜ್ಞೆಯೊಂದಿಗೆ ಪರಿಸರ ಕಾಳಜಿಯುಳ್ಳ ವಿಶಿಷ್ಟ ಸಂಸ್ಥೆಯೊಂದು ಬೆಂಗಳೂರಿನ ಕನಕಪುರ ರಸ್ತೆಯ ಅಗರ ಗ್ರಾಮದಲ್ಲಿದೆ. ದೇಶದಲ್ಲೇ ಮೊದಲ ಬಾರಿಗೆ ತುಳಸಿ ಅಭಿಯಾನ ಆರಂಭಿಸಿದ ಕೀರ್ತಿಗೆ ಪಾತ್ರವಾಗಿರುವ ಈ ಸಂಸ್ಥೆ ತುಳಸಿ-ಮಠ ವೆಂದೇ ಖ್ಯಾತಿ ಪಡೆದಿದೆ.

ನೈಸ್ ರಸ್ತೆ ದಾಟಿ ಕೊಂಚ ದೂರ ಸಾಗಿ ಬಲಕ್ಕೆ ತಿರುಗಿ ತಾತಗುಣಿಯ ಮೂಲಕ ಸಾಗಿದರೆ ಶ್ರೀ ಸ್ವಾನಂದಾಶ್ರಮದ ಸಿಗುತ್ತದೆ. ಅದರ ಸಮೀಪದಲ್ಲಿ ಶ್ರೀ ಗುರುಕೃಪಾ ಸೇವಾಟ್ರಸ್ಟ್ ನವರ 100x200 ಅಡಿ ನಿವೇಶನದಲ್ಲಿ ನಿರ್ಮಾಣ ಗೊಳ್ಳುತ್ತಿರುವ ಹಂಪಿಯ ಶ್ರೀ ಯಂತ್ರೋದ್ಧಾರಕ ಪ್ರಾಣ ದೇವರ ಪ್ರತೀಕ ಮತ್ತು ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ಮೂರು ಹಂತಗಳ ವಿಶೇಷ ಬೃಂದಾವನದ ಕಟ್ಟಡ ನಿರ್ಮಾಣಕ್ಕಾಗಿ ಶಿಲಾನ್ಯಾಸ 2008 ರ ವಿಜಯದಶಮಿಯಂದು ಉಡುಪಿಯ ಪೇಜಾವರ ಮಠದ ಪರಮ ಪೂಜ್ಯ ಶ್ರೀ ವಿಶ್ವೇಶತೀರ್ಥಶ್ರೀಪಾದಂಗಳವರ ಕೃಪಾಶೀರ್ವಾದದಿಂದ ನೆರವೇರಿತು.

"ತುಳಸಿ ಬೆಳಸಿ, ಮನುಕುಲ ಉಳಿಸಿ" ಎಂಬ ಧ್ಯೇಯವಾಕ್ಯದೊಂದಿಗೆ ಧಾರ್ಮಿಕವಾಗಿ ವೈಜ್ಞಾನಿಕವಾಗಿ ತುಳಸಿಯ ಮಹತ್ವ ತಿಳಿಸುತ್ತಾ ಮಠದ ಆವರಣದಲ್ಲಿ, ಮಳೆ ನೀರು ಕೊಯ್ಲು ತಂತ್ರಜ್ಞಾನದ ಮೂಲಕ ತುಳಸಿ ಸಸಿಗಳನ್ನು ಬೆಳೆಸಿ, ಸಾರ್ವಜನಿಕ ಸ್ಥಳಗಳಾದ ಬಸ್ ನಿಲ್ದಾಣ, ಶಾಲಾ ಆವರಣ, ದೇವಾಲಯ ಇತ್ಯಾದಿಗಳ ಮುಂದೆ ಉಚಿತವಾಗಿ ವಿತರಿಸುತ್ತಿದ್ದಾರೆ. ಪ್ರತಿ ಮನೆಯ ಮುಂದೆ ಸಂಸ್ಕೃತಿಯ ಪ್ರತೀಕವಾಗಿ ಕಂಗೊಳಿಸುತ್ತಿರುವ ತುಳಸಿ ಮುಖ್ಯವಾಗಿ ನಗರಗಳಲ್ಲಿ ಕಣ್ಮರೆಯಾಗುತ್ತಿರುವ ಹಿನ್ನಲೆಯಲ್ಲಿ ಈ ವಿಶಿಷ್ಟ ಜಾಗೃತಿ ಆಂದೋಲನವನ್ನು ಆರಂಭಿಸಿರುವುದು ಶುದ್ಧ ವಾತಾವರಣ ನಿರ್ಮಾಣಕ್ಕೂ ಸಹಕಾರಿ.

ಹತ್ತು ಲಕ್ಷ ತುಳಸಿ ಗಿಡಗಳನ್ನು ಬೆಳೆಸಿ ಉಚಿತವಾಗಿ ವಿತರಿಸುವ ಈ ವಿಶಿಷ್ಟ ಯೋಜನೆಯನ್ನು ಗುರುತಿಸಿ ಶ್ರೀ ಅರಬಿಂದೋ ಕಪಾಲಿ ಶಾಸ್ತ್ರಿ ವೇದ ಸಂಸ್ಕೃತ ಸಂಸ್ಥೆ ಮತ್ತು ಕನ್ನಡ ಸಂಸ್ಕೃತ ವಿಶ್ವವಿದ್ಯಾಲಯ ದವರು ಭಾರತೀಯ ವಿದ್ಯಾ ಭವನದಲ್ಲಿ ಸಾಮಾಜಿಕ ಸ್ವಾಸ್ಥ್ಯ ಪ್ರಶಸ್ತಿ ನೀಡಿ ಗೌರವಿಸಿರುತ್ತಾರೆ. ಈಗಾಗಲೇ, ರಾಜಭವನ, ಶ್ರೀ ಕ್ಷೇತ್ರ ಮಂತ್ರಾಲಯ, ಗುಬ್ಬಿ ಶ್ರೀ ಚಿದಂಬರಾಶ್ರಮ, ಜಿಗಣಿಯ ಪ್ರಶಾಂತ ಕುಟೀರ, ಇನ್ನಿತರ ಅನೇಕ ಸ್ಥಳಗಳಲ್ಲಿ 35,000 ಸಸಿಗಳನ್ನು ವಿತರಿಸಲಾಗಿದೆ.

ದಶ ಲಕ್ಷ ತುಳಸಿ ಯೋಜನೆಯ ಯಶಸ್ಸಿನಿಂದ ಉತ್ತೇಜಿತರಾಗಿರುವ ತುಳಸಿಮಠದವರು ಮುಂಬರುವ ದಿನಗಳಲ್ಲಿ, ಸಾಲಿಗ್ರಾಮ ಶಿಲಾ ಅಭಿಯಾನ ನಡೆಸುವ ಯೋಜನೆ ಇದೆ. ಈ ಮೂಲಕ ಸಾಲಿಗ್ರಾಮ ಕುರಿತಂತೆ ಇರುವ ಅಪನಂಬಿಕೆಗಳನ್ನು ಹೋಗಲಾಡಿಸುವುದು, ಅದರ ಮಹತ್ವವನ್ನು ಸಾರುವುದು ಯೋಜನೆಯ ಪ್ರಮುಖ ಉದ್ದೇಶವೆನಿಸಿದೆ.

ಜ್ಞಾನ, ಭಕ್ತಿ, ವೈರಾಗ್ಯವನ್ನು ಕೊಡುವ ಶ್ರೀ ವ್ಯಾಸರಾಜ ಗುರುಸಾರ್ವಭೌಮರಿಂದ ಪ್ರತಿಷ್ಠಾಪಿಸಲ್ಪಟ್ಟ ಶ್ರೀ ಯಂತ್ರೋದ್ಧಾರಕ ಪ್ರಾಣ ದೇವರ ಪ್ರತಿಷ್ಠಾಪನೆಯು ಹಾಗೂ ಶ್ರೀ ಗುರು ರಾಘವೇಂದ್ರಸ್ವಾಮಿಗಳ ಮೃತ್ತಿಕಾ ಬೃಂದಾವನದ ಪ್ರತಿಷ್ಠಾಪನೆಯನ್ನು ದಿನಾಂಕ 14/06/2010 ಮಂತ್ರಾಲಯದ ಶ್ರೀ ರಾಘವೇಂದ್ರಮಠದ 108 ಶ್ರೀ ಸುಯತೀಂದ್ರತೀರ್ಥ ಶ್ರೀಪಾದರು ನೆರವೇರಿಸಲಿದ್ದಾರೆ.

ಬೃಂದಾವನದ ಪ್ರತಿಷ್ಠಾಪನೆಯಂದು ಮಂತ್ರಾಲಯ ಶ್ರೀ ಗುರು ಸಾರ್ವಭೌಮ ಸಂಸ್ಕೃತ ವಿದ್ಯಾಪೀಠದ ಪ್ರಾಂಶುಪಾಲರಾದ ಡಾ. ಎನ್. ವಾದಿರಾಜಾಚಾರ್ಯರಿಂದ "ಶ್ರೀ ರಾಘವೇಂದ್ರ ವಿಜಯ " ಕುರಿತು ಉಪನ್ಯಾಸ, ನಂತರ ಸಂಸ್ಥಾನ ಪೂಜೆ, ಶ್ರೀ ಸೂರೀಂದ್ರ ತೀರ್ಥರ ಆರಾಧನೆಯ ಅಂಗವಾಗಿ ಅಲಂಕಾರ ಪಂಕ್ತಿ, ತೀರ್ಥಪ್ರಸಾದ ವ್ಯವಸ್ಥೆ ಕಲ್ಪಿಸಿದೆ. ನಾಲ್ಕು ದಿನಗಳ ಈ ಕಾರ್ಯಕ್ರಮಗಳಿಗೂ ಭಗವದ್ಭಕ್ತರು ಆಗಮಿಸಿ ಸವೆ ಸಲ್ಲಿಸಿ ಶ್ರೀ ಹರಿವಾಯುಗಳ ಅನುಗ್ರಹಕ್ಕೆ ಪಾತ್ರರಾಗಬೇಕೆಂದು ಕೋರಿದೆ.

ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ :

Tulasi Sreedhara

Managing Trustee

SRI GURUKRUPA SEVA TRUST

JOIN tulasimata Group: http://groups. google.com/ group/tulasimata /subscribe

MaTa phno:080-2271 9656

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more