ಗುಳಿಗೆ ನುಂಗಿ ಕುಸಿದುಬಿದ್ದ 40 ಮಕ್ಕಳು
ಕೆಜಿಎಫ್,
ಜೂ.8: ಇಲ್ಲಿನ ಕಮ್ಮಸಂದ್ರ ಗ್ರಾಮದ ಸರ್ಕಾರಿ ಶಾಲೆಯ ಸುಮಾರು 40 ಜನ ವಿದ್ಯಾರ್ಥಿಗಳು ಮಲೇರಿಯಾ ನಿರೋಧಕ ಮಾತ್ರೆಗಳನ್ನು ನುಂಗಿ ಅಸ್ವಸ್ಥರಾದ ಘಟನೆ ನಡೆದಿದೆ. ಬೆಳಗ್ಗೆ ಒಂದನೇ ತರಗತಿಯಿಂದ ಏಳನೇ ತರಗತಿಗೆ ಸೇರಿದ ವಿದ್ಯಾರ್ಥಿಗಳಿಗೆ ಆರೋಗ್ಯ ಕೇಂದ್ರದವರು ಮಾತ್ರೆಗಳನ್ನು ನೀಡಿದ್ದರು. id="toptextpromo">ಮಾತ್ರೆ
ನುಂಗಿದ ತಕ್ಷಣ ವಿದ್ಯಾರ್ಥಿಗಳು ತಲೆನೋವು, ಹೊಟ್ಟೆನೋವು ಎನ್ನಲಾರಂಭಿಸಿದರು. ಕೆಲವರು ವಾಂತಿ ಮಾಡಿಕೊಂಡರು. ಎಲ್ಲರನ್ನು ಸರ್ಕಾರಿ ಆಸ್ಪತ್ರೆಗೆ ಸೇರಿಸಲಾಗಿದ್ದು, ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ. ಮಕ್ಕಳು ಚಿಕಿತ್ಸೆಗೆ ಸ್ಪಂದಿಸುತ್ತಿದ್ದು, ಆತಂಕ ಪಡಬೇಕಾಗಿಲ್ಲ ಎಂದು ವೈದ್ಯಾಧಿಕಾರಿಗಳು ಹೇಳಿದರು. id='are-slot-1' class='oiad oi-axt oiadv'> id='top-searched-articles'>ಕೋಲಾರ
ಜಿಲ್ಲೆಯಲ್ಲಿ ಸಾಂಕ್ರಾಮಿಕ ರೋಗಗಳು ಹರಡಿದ ಪರಿಣಾಮ ಪ್ರತಿ ವಿದ್ಯಾರ್ಥಿಗೂ ತಲಾ ನಾಲ್ಕು ಮಲೇರಿಯಾ ನಿರೋಧಕ ಗುಳಿಗೆಗಳನ್ನು ನೀಡಲಾಗಿತ್ತು. ಜಿಲ್ಲಾ ವೈದ್ಯಾಧಿಕಾರಿಗಳು ಕಮ್ಮಸಂದ್ರಕ್ಕೆ ಧಾವಿಸಿದ್ದು, ಘಟನೆ ಬಗ್ಗೆ ಪರಿಶೀಲನೆ ನಡೆಸಿದ್ದಾರೆ.











Click it and Unblock the Notifications