ಮಲ್ಯರಿಗೆ ಸಿಕ್ತು ದೇವೇಗೌಡ್ರ ಸಪೋರ್ಟ್

ಉದ್ಯಮಿ ವಿಜಯ ಮಲ್ಯ ಸ್ವತಂತ್ರವಾಗಿ ರಾಜ್ಯಸಭೆಗೆ ನಾಲ್ಕನೇ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತಿದ್ದಾರೆ. ಮಲ್ಯರಿಗೆ ಸಂಪೂರ್ಣ ಬೆಂಬಲ ನೀಡುತ್ತಿದ್ದೇವೆ ಎಂದು ಜೆಡಿಎಸ್ ನ ರಾಜ್ಯಾಧ್ಯಕ್ಷ ಎಚ್ ಡಿ ಕುಮಾರಸ್ವಾಮಿ ಪ್ರಕಟಿಸಿದರು. ಜೂನ್ 17 ರಂದು ರಾಜ್ಯ ಸಭೆ ಚುನಾವಣೆ ನಡೆಯಲಿದೆ.
ಇತ್ತ ಕಾಂಗ್ರೆಸ್ ಕೂಡಾ ಮಲ್ಯರ ವಿರುದ್ಧ ಯಾರನ್ನು ನಿಲ್ಲಿಸುತ್ತಿಲ್ಲ ಹಾಗೂ ಬಿಜೆಪಿ ವಿರೋಧ ವ್ಯಕ್ತಪಡಿಸಿಲ್ಲ ಮತ್ತು ಜೆಡಿಎಸ್ ಬೆಂಬಲದಿಂದ ದೊರಕಿರುವುದರಿಂದ ಮಲ್ಯರ ಆಯ್ಕೆ ಬಹುತೇಕ ಖಚಿತ ಎನಿಸಿದೆ. ರಾಜ್ಯದಿಂದ ಒಟ್ಟು ನಾಲ್ಕು ಜನರನ್ನು ರಾಜ್ಯಸಭೆಗೆ ಕಳಿಸಲು ಅವಕಾಶವಿರುತ್ತದೆ. 46 ಮತಗಳಿಸಿದ ಅಭ್ಯರ್ಥಿಗೆ ಗೆಲುವು ಖಚಿತ.
ಇದುವರೆವಿಗೂ ಆಸ್ಕರ್ ಫರ್ನಾಂಡಿಸ್ ಅವರನ್ನು ಮಾತ್ರ ಕಣಕ್ಕಿಳಿಸಿದ್ದ ಕಾಂಗ್ರೆಸ್ ,ಇಂದು ಎರಡನೇ ಅಭ್ಯರ್ಥಿಯಾಗಿ ಟಿವಿ ಮಾರುತಿ ಅವರನ್ನು ನಿಲ್ಲಿಸಿ ಅಚ್ಚರಿ ಮೂಡಿಸಿದೆ. ಜೆಡಿಎಸ್ ನೊಂದಿಗೆ ಮೈತ್ರಿ ಮುರಿದುಕೊಂಡ ಮೇಲೆ ಹೈಕಮಾಂಡ್ ಆದೇಶದಂತೆ ಕೊನೆ ಕ್ಷಣದಲ್ಲಿ 2ನೇ ಅಭ್ಯರ್ಥಿಯನ್ನು ಕಣಕ್ಕಿಳಿಸುತ್ತಿರುವುದಾಗಿ ಕೆಪಿಸಿಸಿ ಮೂಲಗಳು ಹೇಳಿವೆ.












Click it and Unblock the Notifications