ಮುಂಗಾರಿಗೆ ಲೈಲಾ ನಂತರ ಫೇಟ್ ಕಾಟ

ಗುರುವಾರ ಹಾಗೂ ಶುಕ್ರವಾರ ಗುಜರಾತ್ ಕರಾವಳಿಗೆ ಅಪ್ಪಳಿಸಲಿರುವ ಫೇಟ್ ಚಂಡಮಾರುತದಿಂದ ಭಾರೀ ಮಳೆ ಸುರಿವ ನಿರೀಕ್ಷೆಯಲ್ಲಿ, ಗುಜರಾತ್ ನ ನಾಲ್ಕು ಜಿಲ್ಲೆಗಳಲ್ಲಿನ ಸುಮಾರು 8 ಸಾವಿರ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ಗುಜರಾತ್ ಕರಾವಳಿಯ ಮೇಲೆ ಪ್ರತಿ ಗಂಟೆಗೆ 25 ರಿಂದ 35 ಕಿ.ಮೀ ವೇಗದಲ್ಲಿ ಗಾಳಿ ಬೀಸುತ್ತಿದೆ. ಕಳೆದೆರಡು ದಿನಗಳಲ್ಲಿ ಸುಮಾರು 58 ಮಿಮೀ ಮಳೆಯನ್ನು ಗುಜರಾತ್ ರಾಜ್ಯ ಕಂಡಿದೆ.
ಗುಜರಾತ್ ನಿಂದ ಹೊರಟ ಫೇಟ್ , ಮಹಾರಾಷ್ಟ್ರ, ಕರ್ನಾಟಕ ಕರಾವಳಿ ಕಡೆಗೆ ತಿರುಗುವ ಸಾಧ್ಯತೆ ಕಮ್ಮಿ ಎನ್ನಲಾಗಿದ್ದು, ಓಮನ್ ದೇಶದ ಕಡೆಗೆ ಹೋಗುವ ನಿರೀಕ್ಷೆಯನ್ನು ಹವಾಮಾನ ಇಲಾಖೆ ವ್ಯಕ್ತಪಡಿಸಿದೆ. ಆದರೂ, ರಾಜ್ಯದ ಕರಾವಳಿಯಲ್ಲಿ ಇನ್ನೆರಡು ದಿನಗಳಲ್ಲಿ ಭಾರಿ ಮಳೆ ಸಂಭವಿಸುವ ಸಾಧ್ಯತೆಯಿದೆ.
ಮುಂಗಾರು ಪ್ರವೇಶ: ಮೇ.31ರಂದು ಕೇರಳವನ್ನು ಮುಂಗಾರು ಪ್ರವೇಶಿಸಿದೆ. ಹವಾಮಾನ ಇಲಾಖೆ ಮೊದಲೇ ಇದನ್ನು ತಿಳಿಸಿದ್ದು ಅಂದು ದಕ್ಷಿಣ ಕೇರಳದಲ್ಲಿ ಭಾರೀ ಮಳೆ ಸುರಿದಿತ್ತು. ಜೂ.5ರಿಂದ ಕೇರಳ, ಕರ್ನಾಟಕ, ಮಹಾರಾಷ್ಟ್ರ ಕರಾವಳಿಯಲ್ಲಿ ಮಳೆಗಾಲ ಆರಂಭ.ನೈಋತ್ಯ ಮಾರುತದಿಂದ ಕೇರಳ ಮತ್ತು ಕರ್ನಾಟಕದಲ್ಲಿ ಈ ಮಳೆಗಾಲದಲ್ಲಿ ಉತ್ತಮ ಮಳೆ ಬರಲಿದೆ ಎಂದು ಕೃಷಿ ಕಾರ್ಯದರ್ಶಿ ಪಿ.ಕೆ.ಬಸು ಅವರೂ ಹೇಳಿದ್ದಾರೆ.
ಕಳೆದ ವರ್ಷ ಅನಾವೃಷ್ಟಿಯ ಕಾರಣ16 ದಶಲಕ್ಷ ಟನ್ ಆಹಾರಧಾನ್ಯ ನಷ್ಟ ಉಂಟಾಗಿತ್ತು. ಈ ವರ್ಷವಾಉತ್ತಮ ಮುಂಗಾರು ಮಳೆಯಿಂದ ರೈತರಿಗೆ ಹರ್ಷ ಉಂಟಾಗಲಿದೆ . ಆದರೆ, 'ಫೇಟ್' ಚಂಡಮಾರುತ ಅಪ್ಪಳಿಸಿರುವ ಹಿನ್ನೆಲೆಯಲ್ಲಿ ಮುಂಗಾರು ಮೇಲೆ ಸ್ವಲ್ಪ ಪರಿಣಾಮ ಬೀರುವುದನ್ನು ಹವಾಮಾನ ತಜ್ಞರು ಒಪ್ಪಿಕೊಂಡಿದ್ದಾರೆ.












Click it and Unblock the Notifications