ವಿಮಾನ ದುರಂತದಲ್ಲಿ ಇವರು ಆಭರಣ ದೋಚಿದ್ದರು

Mangalore air crash : Jewel thieves arrested
ಮಂಗಳೂರು, ಜೂ. 2 : ಮೇ 22ರಂದು ಕೆಂಜಾರು ಪ್ರದೇಶದಲ್ಲಿರುವ ಬಜ್ಪೆ ವಿಮಾನ ನಿಲ್ದಾಣದಲ್ಲಿ ಸಂಭವಿಸಿದ ಏರ್ ಇಂಡಿಯಾ ವಿಮಾನ ಅಪಘಾತದಲ್ಲಿ ಮೃತ ವ್ಯಕ್ತಿಗಳಿಂದ ಆಭರಣಗಳನ್ನು ದೋಚಿದ್ದ ಕಳ್ಳರನ್ನು ಜಿಲ್ಲಾ ಕ್ರೈ ಇಂಟೆಲಿಜೆನ್ಸ್ ಬ್ಯೂರೋದ ತಂಡ ಬಂಧಿಸಿದೆ.

ಅಂದು ಬೆಳಗಿನ ಜಾವ ಸಂಭವಿಸಿದ್ದ ಭೀಕರ ಅಪಘಾತದಲ್ಲಿ 158 ಜನ ಸತ್ತು 8 ಜನ ಪಾರಾಗಿದ್ದರು. ಸುಟ್ಟು ಕರಕಲಾಗಿದ್ದ ಹೆಣಗಳನ್ನು ವಿಮಾನದಿಂದ ಹೊರತೆಗೆಯಲು ರಕ್ಷಣಾ ಸಿಬ್ಬಂದಿ ಜೊತೆಗೆ ಸ್ಥಳೀಯರು ಮಾನವೀಯತೆ ಮೆರೆದಿದ್ದರು. ಆದರೆ, ಕೆಲ ದುರುಳರು ಹೆಣಗಳನ್ನು ಹೊರತೆಗೆಯಲು ಸಹಕರಿಸದೆ ಆಭರಣಗಳಿಗೆ ಕೈಹಾಕಿದ್ದರು. ಸಿಕ್ಕಿಬಿದ್ದ ಒಂದಿಬ್ಬರನ್ನು ಸಾರ್ವಜನಿಕರೇ ಹಿಡಿದು ಥಳಿಸಿದ್ದರು.

ಪೊಲೀಸರು ಬೀಸಿದ ಬಲೆಯಲ್ಲಿ ಕೆಂಜಾರು ಬಳಿಯ ಮರವೂರ್ ಪ್ರದೇಶದ ಸತ್ತಾರ್ ಎಂಬ ವ್ಯಕ್ತಿಯಿಂದ 6.37 ಲಕ್ಷ ರು. ಬೆಲೆಯ 256.9 ಗ್ರಾಂ ಚಿನ್ನದಾಭರಣಗಳನ್ನು ಮತ್ತು ಆತ ಚಲಾಯಿಸುತ್ತಿದ್ದ ಕಾರನ್ನು ವಶಪಡಿಸಿಕೊಳ್ಳಲಾಗಿದೆ.

ಆತ ಆಭರಣದಂಗಡಿಯೊಂದಕ್ಕೆ ಒಡವೆಗಳನ್ನು ಮಾರಲು ಬರುತ್ತಿದ್ದಾನೆ ಎಂಬ ಖಚಿತ ಮಾಹಿತಿಯ ಮೇರೆಗೆ ಪೊಲೀಸರು ಬಲೆ ಬೀಸಿದ್ದರು. ಆತನ ಜೊತೆ ಟ್ಯಾಕ್ಸಿ ಡ್ರೈವರ್ ಬದ್ದುಮುಂಡೆ ಅಲಿಯಾಸ್ ಇರ್ಷಾದ್ ಎಂಬುವವನನ್ನೂ ಬಂಧಿಸಲಾಗಿದೆ. ಇಬ್ಬರೂ ಸೇರಿ ರಕ್ಷಣಾ ತಂಡಕ್ಕೆ ಸಹಾಯ ಮಾಡುವ ನೆಪದಲ್ಲಿ ಸತ್ತವರಿಂದ ಆಭರಣಗಳನ್ನು ದೋಚಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+