ಮಲೇಶಿಯಾ ಪೊಲೀಸರಿಗೆ ಮೋಹಿನಿ ಕಾಟ

A woman ghost nightmare to Malasian police
ಕೌಲಾಲಂಪುರ, ಜೂ. 1 : ರಾತ್ರಿ ವೇಳೆಯಲ್ಲಿ ನಿದ್ದೆ ಹೊಡೆಯದೆ ಕರ್ತವ್ಯನಿರತರಾಗಿರುವ ಮಲೇಶಿಯಾದ ಪೊಲೀಸರನ್ನು ಠಾಣೆಗೆ ಆಗಾಗ ಆಗಮಿಸುತ್ತಿರುವ 'ಹೊಸ ಅತಿಥಿ' ಗಡಗಡ ನಡುಗಿಸುತ್ತಿದೆ.

ಬಿಳಿ ದಿರಿಸು ಮತ್ತು ಉದ್ದನೆಯ ಕೂದಲನ್ನು ಬಿಟ್ಟಿರುವ 'ಮೋಹಿನಿ' ಎಚ್ಚರದಿಂದಿರುವ ಪೊಲೀಸ್ ಮಾತ್ರವಲ್ಲ ತೂಕಡಿಸುವ ಪೊಲೀಸರ ನಿದ್ದೆಯನ್ನೂ ಕೆಡಿಸಿದೆ. ಕುಚಿಂಗ್ ನಿಂದ 150 ಕಿ.ಮೀ. ದೂರದಲ್ಲಿರುವ ಬಿಟಾಂಗ್ ಜಿಲ್ಲೆಯ ಪೊಲೀಸ್ ಠಾಣೆಯ ಸುತ್ತ ಮೋಹಿನಿ ದೆವ್ವ ಠಳಾಯಿಸುತ್ತಿದೆ ಎಂದು ಸ್ಟಾರ್ ಆನ್ ಲೈನ್ ವರದಿ ಮಾಡಿದೆ.

ಪೊಲೀಸ್ ಅಧಿಕಾರಿಯಂತೆಯೇ ರೂಪವಿರುವ ಮೋಹಿನಿ, ಏನಾದರೂ ಕೇಳಿದರೆ ದಿವ್ಯಮೌನ ಧರಿಸುತ್ತದೆ. ತೀವ್ರ ವಿಚಲಿತವಾದಂತೆ ಮೋಹಿನಿ ಕಂಡುಬರುತ್ತದೆ. ಹಿಂದೊಮ್ಮೆ ಅತ್ಯಾಚಾರಕ್ಕೀಡಾಗಿ ಕೊಲೆಯಾದ ಮಹಿಳೆಯಂತೆ ಭೂತದ ರೂಪ ಕಂಡುಬರುತ್ತದೆ ಎಂದು ಪೊಲೀಸರೊಬ್ಬರು ಹೇಳಿದ್ದಾರೆ.

ಕಳೆದ ಏಪ್ರಿಲ್ ನಲ್ಲಿ ಹೊಸ ಸ್ಥಾನಕ್ಕೆ ಠಾಣೆಯನ್ನು ಸ್ಥಳಾಂತರಿಸಿದ ನಂತರ ಈ ರೀತಿ ವಿಚಿತ್ರ ಅನುಭವಗಳಾಗುತ್ತಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಈಗಾಗಲೆ ಮೂರು ಪೊಲೀಸರನ್ನು ಮೋಹಿನಿ ಗೋಳು ಹೊಯ್ದುಕೊಂಡಿದೆ.

ಹಿಂದೊಮ್ಮೆ, ಬೆಂಗಳೂರಿನ ಹೈಕೋರ್ಟ್ ಬಳಿ ಮೋಹಿನಿಯೊಂದು ರಾತ್ರಿಯಲ್ಲಿ ಕಾಣಿಸಿಕೊಂಡು ಬೆಂಗಳೂರು ಪೊಲೀಸರ ನಿದ್ದೆಗೆಡಿಸಿತ್ತು. ಮೋಹಿನಿಯ ಅಸ್ತಿತ್ವದ ಸತ್ಯಾಸತ್ಯತೆ ತಿಳಿಯಲು ಜಾಲವನ್ನೂ ಕೂಡ ಬೀಸಲಾಗಿತ್ತು. ಹೈಕೋರ್ಟು, ಕಬ್ಬನ್ ಪಾರ್ಕ್ ಎಲ್ಲ ಅಲೆದ ಡಿಸಿಪಿಗೆ ಕಡೆಗೂ ಮೋಹಿನಿ ದರ್ಶನವಾಗಲೇ ಇಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+