ಸರ್ಕಾರದ ಸಂಭ್ರಮಕ್ಕೆ ಸೂತಕದ ಛಾಯೆ!

Challakere accident overshadows BSY Govt celebration
ಚಿತ್ರದುರ್ಗ/ಬೆಂಗಳೂರು, ಮೇ.30: ಇಂದಿಗೆ ಸರಿಯಾಗಿ ಬಿಜೆಪಿ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದು ಎರಡು ವರ್ಷಗಳು ತುಂಬುತ್ತದೆ. ನವ ಕರ್ನಾಟಕ ನಿರ್ಮಾಣದ ಕನಸು ಹೊತ್ತು ಸರ್ವರಿಗೂ ಸಮಪಾಲು ಎಂದು ಆಡಳಿತ ಚುಕ್ಕಾಣಿ ಹಿಡಿದ ಬಿಎಸ್ ಯಡಿಯೂರಪ್ಪ ಅವರ ನೇತೃತ್ವದ ಸರ್ಕಾರ ಇಂದು ಬೆಳಗ್ಗೆ ಶುಭಾಶಯ ವಿನಿಮಯ ಮಾಡಿಕೊಳ್ಳುವ ಮೊದಲೇ ಚಳ್ಳಕೆರೆ ದುರಂತದ ಸೂತಕದ ಛಾಯೆ ಆವರಿಸಿತು.

"ಎರಡು ವರ್ಷ ಪೂರೈಸಿರುವುದಕ್ಕೆ ಸಹಜವಾಗಿ ಖುಷಿಯಾಗಿದೆ. ಸಾಕಷ್ಟು ಏಳು ಬೀಳುಗಳನ್ನು ಕಂಡಿದ್ದೇನೆ. ಆದರೆ, ನನ್ನ ಮನಸ್ಸು ವಿಚಲಿತವಾದಾಗಲೆಲ್ಲಾ ನನ್ನ ಆಪ್ತರು ಹಾಗೂ ನಾಡಿನ ಜನತೆ ನನಗೆ ಬೆಂಬಲ ಸೂಚಿಸಿ ಮುನ್ನಡೆಸಿದ್ದಾರೆ. ಸಾಧನೆಯ ಬಗ್ಗೆ ತೃಪ್ತಿಯಿದ್ದರೂ ಸಮಾಧಾನವಿಲ್ಲ. ದುರಂತಗಳನ್ನು ಎದುರಿಸುವ ಶಕ್ತಿ ಆ ಭಗವಂತ ನೀಡಲಿ" ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರು ಎರಡನೇ ವರ್ಷಾಚರಣೆಗೆ ಪ್ರತಿಕ್ರಿಯಿಸಿದರು.

ಚಳ್ಳಕೆರೆಗೆ ಧಾವಿಸಿದ ಸರ್ಕಾರ: ಅಪಘಾತದ ಸುದ್ದಿ ತಿಳಿದ ತಕ್ಷಣ ತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿ ಗ್ರಾಮಕ್ಕೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ದಂಡೇ ಹರಿದು ಬಂದಿತ್ತು. ಮೊದಲಿಗೆ ಬಂದವರು ಜಿಲ್ಲಾ ಉಸ್ತುವಾರಿ ಹಾಗೂ ಕಂದಾಯ ಸಚಿವ ಜಿ ಕರುಣಾಕರ ರೆಡ್ಡಿ, ನಂತರ ಸಮಾಜ ಕಲ್ಯಾಣ ಸಚಿವ ಡಿ. ಸುಧಾಕರ್ ಬಂದರು. ವಿಶೇಷ ಹೆಲಿಕ್ಯಾಪ್ಟರ್ ನಲ್ಲಿ ಆಗಮಿಸಿದ ಸಾರಿಗೆ ಸಚಿವ ಆರ್ ಅಶೋಕ್ , ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಅಜಯ್ ಕುಮಾರ್ ಸಿಂಗ್ ಜತೆಗೂಡಿ ಪರಿಹಾರ ಕಾರ್ಯವನ್ನು ವೀಕ್ಷಿಸಿದರು. ಆನಂತರ ಬಂದ ಗೃಹ ಸಚಿವ ವಿಎಸ್ ಆಚಾರ್ಯ ಅವರು ಮೃತರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ಸಿಗಲಿ ಎಂದು ಪ್ರಾರ್ಥಿಸಿದರು.

ಸಾಧನೆಯ ಬಗ್ಗೆ ತೃಪ್ತಿಯಿದ್ದರೂ ಸಮಾಧಾನವಿಲ್ಲ. ದುರಂತಗಳನ್ನು ಎದುರಿಸುವ ಶಕ್ತಿ ಆ ಭಗವಂತ ನೀಡಲಿ"
ಹರಿದು ಬಂದ ಪರಿಹಾರದ ಹೊಳೆ: ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟ ಕುಟುಂಬಗಳಿಗೆ ಸರ್ಕಾರದ ವತಿಯಿಂದ 3.50 ಲಕ್ಷ ರು ಪರಿಹಾರ ಸಿಗಲಿದೆ. ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ 1ಲಕ್ಷ ರು ಹಾಗೂ ರಾಜ್ಯ ರಸ್ತೆ ಸಾರಿಗೆ ಇಲಾಖೆಯಿಂದ 2.50 ಲಕ್ಷ ರು ನೀಡಲಾಗುತ್ತದೆ.

ಚಾಲಕನ ನಿರ್ಲಕ್ಷ್ಯ ಕಾರಣ: ಪ್ರಾಥಮಿಕ ವರದಿಗಳ ಪ್ರಕಾರ ಮುಂಜಾನೆ ವೇಳೆ ರಸ್ತೆ ಖಾಲಿ ಇದ್ದದ್ದರಿಂದ ಅತಿ ವೇಗವಾಗಿ ಚಾಲನೆ ಮಾಡುತ್ತಿದ್ದ ಚಾಲಕ, ಮುಂಬರುತ್ತಿದ್ದ ವಾಹನಕ್ಕೆ ಢಿಕ್ಕಿ ಹೊಡ್ಯುವುದನ್ನು ತಪ್ಪಿಸಲು ಹೋಗಿ ಬಸ್ ಆಯತಪ್ಪಿ ಬೀಳಬೇಕಾಯಿತು ಎಂದು ತಿಳಿದು ಬಂದಿದೆ. ಆದರೆ ಸ್ವತಂತ್ರ ಸಂಸ್ಥೆಯಿಂದ ಸಮಗ್ರ ತನಿಖೆ ನಡೆಸಿ, ನಂತರ ಕ್ರಮ ಜರುಗಿಸಲಾಗುವುದು ಎಂದು ಅಶೋಕ್ ಹೇಳಿದರು.

ಚಾಲಕರು, ನಿರ್ವಾಹಕ ಪೊಲೀಸ್ ವಶಕ್ಕೆ: ಬಸ್ ನಲ್ಲಿದ್ದ ಅರ್ಧದಷ್ಟು ಜನರು ಹೊರ ಬರಲಾರದೆ ಸಾವನ್ನಪ್ಪಿದರೂ, ನಿರ್ವಾಹಕ ನಂದನಗೌಡ ಪಾಟೀಲ, ಚಾಲಕರಾದ ಗುಂಡಪ್ಪ ಶೆಟ್ಟಿ ಹಾಗೂ ಸಿದ್ದಯ್ಯಸ್ವಾಮಿ ಆಶ್ಚರ್ಯಕರ ರೀತಿಯಲ್ಲಿ ಪಾರಾಗಿದ್ದಾರೆ. ಮೂವರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದ್ದಾರೆ.

ಸೂಚನೆ: ಎರಡು ವರ್ಷ ಪೂರೈಸಿದ ಬಿಎಸ್ ಯಡಿಯೂರಪ್ಪ ಸರ್ಕಾರದ ಸಂಭ್ರಮಾಚರಣೆ ಜೂನ್18 ರಂದು ಸಾಧನಾ ಸಮಾವೇಶ ಬೆಂಗಳೂರಿನ ಅರಮನೆ ಆವರಣದಲ್ಲಿ ನಡೆಯಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+