ಕಣ್ಣು ತೆರೆಸಿದ ರಾಜ್ ನೇತ್ರ ಸಂಗ್ರಹಣ ಟ್ರಸ್ಟ್

ಒಂದು ವರ್ಷದ ಅವಧಿಯಲ್ಲಿ ಅಪಘಾತದಲ್ಲಿ ಮತ್ತು ಸಹಜ ಸಾವಿಗೀಡಾದ 48 ಮಂದಿಯಿಂದ ನೇತ್ರ ಸಂಗ್ರಹಿಸಿ ಕತ್ತಲಿನಲ್ಲಿದ್ದ 96 ಮಂದಿಯ ಬಾಳಿಗೆ ಬೆಳಕು ತುಂಬಲು ಟ್ರಸ್ಟ್ ಸಹಕರಿಸಿದೆ. ನೇತ್ರ ದಾನ ಮಾಡಿ ಸಾವಿನಲ್ಲೂ ಡಾ.ರಾಜ್‌ರನ್ನ ಅನುಸರಿಸಿದ ಮಂದಿಯ ಕುಟುಂಬದವರು ನೋವಿನ ನಡುವೆಯೂ ಸಾರ್ಥಕತೆಯ ಬಗ್ಗೆ ಅನಿಸಿಕೆ ಹಂಚಿಕೊಂಡರು. ಬದುಕಿನಲ್ಲಿ ಬೆಳಕು ತುಂಬಿಕೊಂಡ ಮಂದಿಯೂ ಕೂಡ ನೇತ್ರದಾನ ಮಾಡಿದ ಮಂದಿಗೆ ಕಾರ್ಯಕ್ರಮದಲ್ಲಿ ಕೃತಜ್ಞತೆ ಅರ್ಪಿಸಿದ ಸಂದರ್ಭದಲ್ಲಿ ಹೃದಯ ತುಂಬಿ ಬಂದಿತ್ತು.
ಅಪಘಾತದಲ್ಲಿ ಮಡಿದವರ ಮತ್ತು ಸಹಜ ಸಾವಿಗೀಡಾದವರ ಕುಟುಂಬದವರ ಮನವೊಲಿಸಿ ಮೃತರ ನೇತ್ರಗಳನ್ನು ದಾನ ಪಡೆದು ಅಂಧರಿಗೆ ಬೆಳಕಾಗುವ ಉತ್ತಮ ಕಾರ್ಯದಲ್ಲಿ ತೊಡಗಿರುವ ಡಾ.ರಾಜ್‌ಕುಮಾರ್ ನೇತ್ರ ಸಂಗ್ರಹಣ ಟ್ರಸ್ಟ್‌ಗೆ ಒಂದು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಬಿಡದಿಯ ಬೈರಮಂಗಲದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಮತ್ತು ರಕ್ತದಾನ ಶಿಬಿರವನ್ನ ಆಯೋಜಿಸಲಾಗಿತ್ತು. ಶಿಬಿರಕ್ಕೆ ಚಲನ ಚಿತ್ರನಟರಾದ ರಾಘವೇಂದ್ರ ರಾಜ್‌ಕುಮಾರ್, ದೊಡ್ಡಣ್ಣ ಮತ್ತು ಶಾಸಕ ಬಾಲಕೃಷ್ಣ ಚಾಲನೆ ನೀಡಿದರು.
![]() | |
| ಅಂಧರ ಬಾಳ ಬೆಳಕಾಗಿರುವ ರಾಜ್ ನೇತ್ರ ಸಂಗ್ರಹಣ ಟ್ರಸ್ಟ್ | |
![]() | |
ಅದೇ ರೀತಿ ನಾಲ್ಕು ವರ್ಷಗಳ ಹಿಂದೆ ಬೆಂಗಳೂರಿನ ಮೋರಿಯೊಂದರಲ್ಲಿ ಸಿಕ್ಕಿದ್ದ ಆಗತಾನೇ ಹುಟ್ಟಿದ ಮಗುವನ್ನು ಕಟುಕ ತಾಯಿ ಅನಾಥನನ್ನಾಗಿ ಮಾಡಿದ್ದಳು. ಇರುವೆ ಕಚ್ಚಿ ಕಣ್ಣಿಲ್ಲದೆ ಅಂಧಕಾರದಲ್ಲಿದ್ದ 4 ವರ್ಷದ ಶ್ರೀನಿವಾಸನ ಬಾಳಿಗೆ ಬೆಳಕು ತುಂಬಲು ಡಾ.ರಾಜ್ ನೇತ್ರಸಂಗ್ರಹಣ ಟ್ರಸ್ಟ್ ಮತ್ತು ನಾರಾಯಣ ನೇತ್ರಾಲಯ ನೆರವಾಯಿತು. ಅನಾಥ ಮಗುವನ್ನ ಮನೆಮಗನಂತೆ ಬೆಳೆಸುತ್ತಿರುವ ಶ್ಯಾಮಲಾರವರು ಕೃತಜ್ಞತೆ ಸಲ್ಲಿಸಿ ಆನಂದ ಭಾಷ್ಪ ಸುರಿಸಿದರು.
ಸಾವಿನ ನಂತರವೂ ತಮ್ಮಿಂದ ಬೇರೆಯವರಿಗೆ ಸಹಾಯವಾಗಲಿ ಎಂಬ ಆದರ್ಶ ಮನೋಭಾವದಿಂದ ನೇತ್ರದಾನಕ್ಕೆ ಎಲ್ಲರೂ ಮುಂದಾದಾಗ ಮಾತ್ರ ಅಂಧರ ಬಾಳಿಗೆ ಬೆಳಕು ತುಂಬಲು ಸಾಧ್ಯವಾಗುತ್ತದೆ. ನೇತ್ರದಾನದಂತಹ ಮಹಾನ್ ಕಾರ್ಯ ದೇಶ ಮತ್ತು ವಿಶ್ವಕ್ಕೆ ಮಾದರಿಯಾಗಲಿ ಎಂಬ ನಿಟ್ಟಿನಲ್ಲಿ ಡಾ.ರಾಜ್‌ಕುಮಾರ್ ಟ್ರಸ್ಟ್ ಕೂಡ ಸೇವೆ ಮಾಡುತ್ತಿದೆ ಎಂದು ರಾಘವೇಂದ್ರ ರಾಜ್‌ಕುಮಾರ್ ಸಂತಸ ವ್ಯಕ್ತಪಡಿಸಿದರು.
ಶಾಸಕ ಎಚ್.ಸಿ.ಬಾಲಕೃಷ್ಣ, ಚಿತ್ರನಟ ದೊಡ್ಡಣ್ಣ, ನಾರಾಯಣ ಹೃದಯಾಲಯದ ಡಾ. ಭಜಂಗಶೆಟ್ಟಿ ಅವರು ಮಾತನಾಡಿ ಟ್ರಸ್ಟ್ ನ ಸಾಮಾಜಿಕ ಸೇವೆಯನ್ನು ಶ್ಲಾಘಿಸಿದರು. ಈ ಸಂದರ್ಭದಲ್ಲಿ ನೇತ್ರದಾನ ಮಾಡಿದ ಕುಟುಂಬದವರಿಗೆ ಸ್ಮರಣಿಕೆ ನೀಡಿ ಪುರಸ್ಕರಿಸಲಾಯಿತು. ನೇತ್ರ ಸಂಗ್ರಹಣಕ್ಕೆ ಅನುಕೂಲವಾಗಲೆಂದು ಡಾ.ರಾಜ್ ಕುಟುಂಬದ ಸದಸ್ಯರು ಉಚಿತವಾಗಿ ಆಂಬುಲೆನ್ಸ್ ವಾಹನ ನೀಡಿದರು.
ನೇತ್ರದಾನ : ಶನಿವಾರ ಮಧ್ಯಾಹ್ನ ಬಿಡದಿಯ ಹಲಸಿನಮರದದೊಡ್ಡಿ ಗೇಟ್‌ಬಳಿ ಸ್ವಿಫ್ಟ್ ಕಾರು ಮತ್ತು ಬೈಕ್ ನಡುವೆ ಡಿಕ್ಕಿ ಸಂಭವಿಸಿ ಮೃತಪಟ್ಟಿದ್ದ ಇಟ್ಟುಮಡು ಗ್ರಾಮದ ಕಿರಣ್ ಎಂಬ ಯುವಕನ ನೇತ್ರವನ್ನು ಕುಟುಂಬದವರು ಡಾ.ರಾಜ್ ನೇತ್ರ ಸಂಗ್ರಹಣಾ ಟ್ರಸ್ಟ್‌ಗೆ ದಾನ ಮಾಡಿದ್ದಾರೆ.
-
Gold Price March 11: ಚಿನ್ನದ ಬೆಲೆಯಲ್ಲಿ ಹೊಸ ದಾಖಲೆ: ಬೆಳ್ಳಿ ಪ್ರಿಯರಿಗೆ ಅಚ್ಚರಿ, ಎಷ್ಟಿದೆ ಇಂದಿನ ಚಿನ್ನ - ಬೆಳ್ಳಿ ಬೆಲೆ -
Rain In Karnataka: ಈ ವಾರದಲ್ಲಿ ಕರ್ನಾಟಕದ ಈ ಭಾಗಗಳಲ್ಲಿ ಮಳೆ ಸಾಧ್ಯತೆ, ಬೆಂಗಳೂರಲ್ಲಿ ಹೇಗಿದೆ ವೆದರ್ -
Sayali Surve: ಇಸ್ಲಾಂನಿಂದ ಹಿಂದೂ ಧರ್ಮಕ್ಕೆ ಮತಾಂತರಗೊಂಡ ಮಿಸ್ ಇಂಡಿಯಾ ಅರ್ಥ್ ವಿಜೇತೆ ಸಯಾಲಿ ಸುರ್ವೆ, ಕಾರಣವೇನು -
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
LPG Alternatives: ಎಲ್ಪಿಜಿ ಬೆಲೆ ಏರಿಕೆಗೆ ಹೆದರಬೇಡಿ: ನಮ್ಮಲ್ಲೇ ಇರುವ ಈ ಪರ್ಯಾಯ ಮಾರ್ಗಗಳನ್ನು ಅಳವಡಿಸಿಕೊಂಡು ಜಾಣರಾಗಿ -
Shivam Dube: ಶಿವಂ ದುಬೆ ಸಾಧನೆಗೆ ಮನಸಾರೆ ಮೆಚ್ಚುಗೆ ಸೂಚಿಸಿದ ಪತ್ನಿ ಅಂಜುಮ್ ಖಾನ್: ಇನ್ಸ್ಟಾ ಪೋಸ್ಟರ್ ಭಾರೀ ವೈರಲ್ -
Fact Check: ಟಿ20 ವಿಶ್ವಕಪ್ ಫೈನಲ್ ಪಂದ್ಯಕ್ಕೂ ಮುನ್ನ ರಾಷ್ಟ್ರಗೀತೆ ವೇಳೆ ಕಣ್ಣೀರಿಟ್ಟ ಕಿವೀಸ್ ಆಟಗಾರ ಇಶ್ ಸೋಧಿ -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ














Click it and Unblock the Notifications