ಬಿಜೆಪಿಗೆ ತೆಕ್ಕೆಗೆ ಕಾಂಗ್ರೆಸ್ ನ ರೇವಣ್ಣ ?
ಬೆಂಗಳೂರು,
ಮೇ. 28 : ಆಪರೇಷನ್ ಕಮಲವನ್ನು ಮತ್ತೆ ಶುರು ಹಚ್ಚಿಕೊಂಡಿರುವ ಬಿಜೆಪಿ ನಾಯಕರು ಕಾಂಗ್ರೆಸ್ ಮಾಜಿ ಸಚಿವ ಮಾಗಡಿಯ ಎಚ್ ಎಂ ರೇವಣ್ಣ ಹಾಗೂ ಹುಬ್ಬಳ್ಳಿ ವೀರಣ್ಣ ಮತ್ತಿಕಟ್ಟಿ ಅವರಿಗೆ ಗಾಳಿ ಹಾಕಿ ಭಾರಿ ಕಸರತ್ತು ನಡೆಸಿದೆ. id="toptextpromo">ಬಿಜೆಪಿ
ರಾಜ್ಯಾಧ್ಯಕ್ಷ ಕೆ ಎಸ್ ಈಶ್ವರಪ್ಪ ಅವರು ಎಚ್ ಎಂ ರೇವಣ್ಣ ಅವರನ್ನು ಬಿಜೆಪಿಗೆ ಕರೆತರುವ ಬಗ್ಗೆ ಮಾತುಕತೆ ನಡೆಸಿದ್ದು, ರೇವಣ್ಣ ಅವರಿಗೆ ವಿಧಾನ ಪರಿಷತ್ ಗೆ ನೇಮಕ ಮಾಡುವ ಆಮಿಷವನ್ನೂ ಒಡ್ಡಿದ್ದಾರೆ. ಆದರೆ, ರೇವಣ್ಣ ಅವರು ಪರಿಷತ್ ನೇಮಕದ ಜೊತೆಗೆ ಮಂತ್ರಿಯನ್ನಾಗಿಸಬೇಕು ಎಂದು ಬೇಡಿಕೆ ಮುಂದಿಟ್ಟಿದ್ದಾರೆ ಎನ್ನಲಾಗಿದೆ. id='are-slot-1' class='oiad oi-axt oiadv'> id='top-searched-articles'>ಕುರುಬ
ಸಮುದಾಯದ ನಾಯಕರಾಗಲು ಹೊರಟಿರುವ ಈಶ್ವರಪ್ಪ, ಸಿದ್ಧರಾಮಯ್ಯ ಅವರ ಬೆಂಬಲಿಗರನ್ನು ಸೆಳೆಯಲು ಮುಂದಾಗಿದ್ದಾರೆ. ಈ ಬಗ್ಗೆ ಬಿಜೆಪಿಯೊಳಗೆ ಅಪಸ್ವರ ಕೇಳಿಬಂದಿದ್ದು, ಪಕ್ಷವನ್ನು ಟೀಕಿಸಿದವರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವ ಅಗತ್ಯವೇನಿದೆ ಎಂದು ಮಾತು ಕೇಳಿ ಬಂದಿವೆ. ಜೂನ್ 2 ಅಥವಾ 3 ನೇ ವಾರದಲ್ಲಿ ಸಂಪುಟ ವಿಸ್ತರಣೆ ಆಗುವ ಸಾಧ್ಯತೆ ಇದೆ. ವೀರಣ್ಣ ಮತ್ತಿಕಟ್ಟಿ ಅವರನ್ನು ಬಿಜೆಪಿ ಕರೆತರುವ ಕಾರ್ಯ ಭರದಿಂದ ಸಾಗಿದೆ.











Click it and Unblock the Notifications