ಗಂಡನಿಗೆ ಬೆಂಕಿ ಹಚ್ಚಿ ಕೊಲೆಗೆ ಯತ್ನಿಸಿದ ಪತ್ನಿ
ಬೆಂಗಳೂರು,
ಮೇ. 26 : ಕೌಟುಂಬಿಕ ಕಲಹದಿಂದ ಕೋಪಗೊಂಡು ಉದ್ರಿಕ್ತಳಾದ ನವವಿವಾಹಿತೆಯೊಬ್ಬಳು ಪತಿಗೆ ಬೆಂಕಿ ಹಚ್ಚಿ ಕೊಲೆ ಮಾಡಲು ಯತ್ನಿಸಿದ ಘಟನೆ ಬೆಂಗಳೂರಿನ ಕಮಲಾನಗರದಲ್ಲಿ ಸೋಮವಾರ ರಾತ್ರಿ (ಮೇ 25) ವರದಿಯಾಗಿದೆ. ತೀವ್ರ ಸುಟ್ಟ ಗಾಯಗಳಿಂದ ಅಸ್ವಸ್ಥನಾಗಿರುವ ಪತಿಯನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. id="toptextpromo">ನಾಗರಾಜ್
ಬೆಂಕಿ ಪಾಲಾದ ನತದೃಷ್ಟಿ ಪತಿ. ಕೇವಲ ಎರಡು ತಿಂಗಳ ಹಿಂದೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಈ ಜೋಡಿಗಳ ನಡುವೆ ಆಗಾಗ ಜಗಳವಾಗುತ್ತಿತ್ತು. ಸೋಮವಾರ ರಾತ್ರಿ ಜಗಳವಾದ ಸಂದರ್ಭದಲ್ಲಿ ಕೋಪಗೊಂಡ ಪತ್ನಿ ವೇದಾವತಿ ಎಂಬುವವರು ಪತಿ ನಾಗರಾಜ್ ಗೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ್ದಾಳೆ. id='are-slot-1' class='oiad oi-axt oiadv'> id='top-searched-articles'>ಬೆಂಕಿಯ
ಉರಿ ತಾಳಲಾರದೆ ನಾಗರಾಜ್ ಕೂಗಿಕೊಂಡಾಗ ನೆರೆಹೊರೆಯವರು ಈತನನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಈತನ ಪರಿಸ್ಥಿತಿ ಗಂಭೀರವಾಗಿದೆ. ಬಸವೇಶ್ವರ ನಗರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ನವವಿವಾಹಿತೆ ವೇದಾವತಿಯನ್ನು ಪೊಲೀಸರು ಬಂಧಿಸಿದ್ದಾರೆ.











Click it and Unblock the Notifications