ಡಿಎನ್ಎ ಪರೀಕ್ಷೆ ಬೇಡಾಂದ್ರೆ ಬೇಡ : ಹಾಲಪ್ಪ
ಬೆಂಗಳೂರು,
ಮೇ. 25 : ಸ್ನೇಹಿತನ ಪತ್ನಿ ಮೇಲೆ ಅತ್ಯಾಚಾರ ಎಸಗಿದ ಆರೋಪ ಎದುರಿಸುತ್ತಿರುವ ಮಾಜಿ ಹರತಾಳು ಹಾಲಪ್ಪ ಅವರು ಡಿಎನ್ಎ ಪರೀಕ್ಷೆಯನ್ನು ನಡೆಸುವಂತೆ ಶಿವಮೂಗ್ಗ ಕೋರ್ಟ್ ನೀಡಿರುವ ಅನುಮತಿಯನ್ನು ಹೈಕೋರ್ಟ್ ನಲ್ಲಿ ಪ್ರಶ್ನಿಸಿದ್ದಾರೆ. ವಿಚಾರಣೆ ಹಂತದಲ್ಲಿರುವ ಪ್ರಕರಣಕ್ಕೆ ಡಿಎನ್ಎ ಪರೀಕ್ಷೆ ಅವಶ್ಯಕತೆ ಇಲ್ಲ ಎಂದು ಹಾಲಪ್ಪ ಪರ ವಕೀಲ ರವಿ ಬಿ ನಾಯಕ್ ಅವರು ಸೋಮವಾರ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. id="toptextpromo">ಅತ್ಯಾಚಾರಕ್ಕೆ
ಒಳಗಾಗಿದ್ದಾರೆ ಎನ್ನಲಾದ ವೆಂಕಟೇಶ್ ಮೂರ್ತಿ ಅವರ ಪತ್ನಿ ಚಂದ್ರಾವತಿ ಧರಿಸಿದ್ದ ಬಟ್ಟೆಗಳ ಮೇಲೆ ಇರುವ ರಕ್ತದ ಕಲೆಗಳು ಯಾರದ್ದು ಎಂಬುದು ಮೊದಲು ಪತ್ತೆಯಾಗಬೇಕು. ಅದನ್ನು ಪತ್ತೆ ಮಾಡುವ ಬದಲು ತಮ್ಮನ್ನು ಡಿಎನ್ಎ ಪರೀಕ್ಷೆ ಒಳಪಡಿಸುವುದು ಸರಿಯಲ್ಲ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ. ಅತ್ಯಾಚಾರಕ್ಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾಮೀನು ಕೋರಿ ಹಾಲಪ್ಪ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಸುಭಾಷ್ ಬಿ ಆದಿ ಅವರು ಬುಧವಾರಕ್ಕೆ ಮುಂದೂಡಿದ್ದಾರೆ. id='are-slot-1' class='oiad oi-axt oiadv'> id='top-searched-articles'>ನಗರದ
ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಆರೋಪಿ ಹಾಲಪ್ಪ ಅವರ ಆರೋಗ್ಯ ಸ್ಥಿತಿಯಲ್ಲಿ ಚೇತರಿಕೆ ಕಂಡುಬಂದಿರುವ ಹಿನ್ನೆಲೆಯಲ್ಲಿ ಸದ್ಯದಲ್ಲೇ ಅವರನ್ನು ಆಸ್ಪತ್ರೆಯಿಂದ ಬಿಡುಗಡೆಗೊಳಿಸಲು ನಿರ್ಧರಿಸಲಾಗಿದೆ ಎಂದು ವಿಕ್ಟೋರಿಯಾ ಆಸ್ಪತ್ರೆಯ ಅಧೀಕ್ಷಕ ಡಾ ಬಿ ಜಿ ತಿಲಕ್ ತಿಳಿಸಿದ್ದಾರೆ.











Click it and Unblock the Notifications