'ಸೀತೆ'ಯನ್ನು ಅಪಹರಿಸಿದ ಯಡಿಯೂರಪ್ಪ!
ಬೆಂಗಳೂರು,
ಮೇ. 24 : ನೈಸ್ ಹಗರಣದಲ್ಲಿ ತುಟಿಬಿಟ್ಟೆನ್ನೆದ ಮುಖ್ಯಮಂತ್ರಿ ಯಡಿಯೂರಪ್ಪ ಒಬ್ಬ ರಾವಣ. ಅಂದು ರಾವಣ ಸೀತೆಯನ್ನೇ ಅಪಹರಿಸಿದರೆ, ಇಂದು ರಾಜ್ಯವನ್ನಾಳುತ್ತಿರುವ ರಾವಣನ ಪ್ರತಿರೂಪದಂತಿರುವ ಯಡಿಯೂರಪ್ಪ ಬಡವರ, ದಲಿತರ, ರೈತರ ಭೂಮಿಯನ್ನು ಕೊಳ್ಳೆ ಹೊಡೆಯುತ್ತಿದ್ದಾನೆ ಎಂದು ಮಾಜಿ ಪ್ರಧಾನಿ ದೇವೇಗೌಡ ತೀವ್ರ ವಾಗ್ದಾಳಿ ನಡೆಸಿದ್ದಾರೆ. id="toptextpromo">ನೆರೆ
ಸಂತ್ರಸ್ತರ ಬಗ್ಗೆ ನಿರ್ಲಕ್ಷ್ಯ ತೋರುತ್ತಿರುವ ಮುಖ್ಯಮಂತ್ರಿಯನ್ನು ಬೀದಿಯಲ್ಲೇ ಒದೆಯಿರಿ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿಕೆ ನೀಡಿರುವ ಬೆನ್ನಲ್ಲೇ, ದೇವೇಗೌಡ ರಾವಣ ಎಂದು ಗುಡುಗಿದ್ದಾರೆ. ಸೋಮವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಯಡಿಯೂರಪ್ಪ ಸೀತೆಯನ್ನು ಅಪಹರಿಸಿದ ರಾವಣ ಎಂದು ಪತ್ರದಲ್ಲಿ ಜರೆದಿರುವೆ. ಅದಕ್ಕೆ ಕಾರಣವೂ ಇದೆ. ಸೀತೆಯಂದೆರೆ ಭೂಮಿ, ವಸುಂಧರೆಯಾಗಿದ್ದಾಳೆ. ಬಡವರ, ರೈತರ ಭೂಮಿ(ಸೀತೆ)ಯನ್ನು ಅಪಹರಿಸಿದ ರಾವಣ ಎಂದು ಬಣ್ಣಿಸಿರುವುದಾಗಿ ಗೌಡರು ಹೇಳಿದರು. id='are-slot-1' class='oiad oi-axt oiadv'> id='top-searched-articles'>ನೈಸ್
ಯೋಜನೆಯ ವಿಷಯದಲ್ಲಿ ರೈತರಿಗೆ, ದಲಿತರಿಗೆ ಮತ್ತು ಬಡವರಿಗೆ ಅನ್ಯಾಯ ಮಾಡಬಾರದು ಎಂದು ಮುಖ್ಯಮಂತ್ರಿಗಳಿಗೆ ಪತ್ರ ಬರೆಯಲಾಗಿದ್ದು, ಈ ವರೆಗೊ ಉತ್ತರ ಬಂದಿಲ್ಲ ಎಂದರು. ಯಾವುದೇ ಕಾರಣಕ್ಕೂ ನೈಸ್ ವಿರುದ್ಧದ ಹೋರಾಟ ಕೈಬಿಡುವುದಿಲ್ಲ. ಜೂನ್ 7ರಿಂದ ಮತ್ತೆ ನೈಸ್ ವಿರುದ್ಧ ಬೀದಿ ಹೋರಾಟ ಮಾಡುವುದಾಗಿ ಗೌಡರು ಹೇಳಿದರು.











Click it and Unblock the Notifications