ಮುಖ್ಯಮಂತ್ರಿಯನ್ನು ಬೀದಿಯಲ್ಲೇ ಒದೆಯಿರಿ : ಎಚ್ಡಿಕೆ
ಬೆಂಗಳೂರು,
ಮೇ. 23 : ಮುಖ್ಯಮಂತ್ರಿ, ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಅಧಿಕಾರಿಗಳು ನಿಮ್ಮೂರಿಗೆ ಬಂದರೆ ನಮಸ್ಕಾರ ಮಾಡುವ ಬದಲು ಬೀದಿಯಲ್ಲೇ ನಿಲ್ಲಿಸಿ ಒದೆಯಿರಿ. ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಉತ್ತರ ಕರ್ನಾಟಕದ ನೆರೆಪೀಡಿತ ಜಿಲ್ಲೆಗಳಲ್ಲಿ ಸಂಕಷ್ಟಕ್ಕೆ ಒಳಗಾಗಿರುವ ಸಂತ್ರಸ್ಥ ಜನರಿಗೆ ಕೊಟ್ಟಿರುವ ಕರೆ. ಕುಮಾರಸ್ವಾಮಿ ಅವರ ಪ್ರಚೋದನಕಾರಿ ಹೇಳಿಕೆಯನ್ನು ಬಿಜೆಪಿ ತೀವ್ರವಾಗಿ ಖಂಡಿಸಿದೆ. id="toptextpromo">ಬೆಂಗಳೂರಿನಲ್ಲಿ
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರವಾಹ ಸಂಭವಿಸಿ ಏಳು ತಿಂಗಳು ಕಳೆದರೂ ಅಲ್ಲಿನ ಜನರ ಸಂಕಷ್ಟ ಪರಿಹಾರಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದ ಸರಕಾರ ಕಿಂಚತ್ತೂ ಚಿಂತನೆ ನಡೆಸಿಲ್ಲ. ಆರು ತಿಂಗಳಿಂದ ತಗಡಿನ ಶೆಡ್ ಗಳಲ್ಲಿ ನರಕಯಾತನೆ ಅನುಭವಿಸಿರುವ ಈ ಜನರಿಗೆ ಮತ್ತೆ ಮಳೆಗಾಲ ಆರಂಭವಾಗಿರುವುದು ಆತಂಕಕ್ಕೆ ತಳ್ಳಿದೆ. ಮಾಧ್ಯಮಗಳ ವರದಿಗಳು ಈ ಜನರ ಕಷ್ಟ ಮನಕಲುಕುವಂತಿರುತ್ತವೆ. ಆದರೂ ಈ ಬಗ್ಗೆ ಸರಕಾರ ಎಚ್ಚತ್ತುಕೊಳ್ಳದಿದ್ದರೆ, ಜನರು ಹೇಗೆ ವರ್ತಿಸಬೇಕು ಎಂದು ಅವರು ಪ್ರಶ್ನಿಸಿದರು. id='are-slot-1' class='oiad oi-axt oiadv'> id='top-searched-articles'>ಪ್ರವಾಹ
ಪೀಡಿತ ಜಿಲ್ಲೆಗಳ ಗ್ರಾಮಗಳಿಗೆ ತೆರಳಿ ಒಂದು ವಾರ ಗ್ರಾಮ ವಾಸ್ತವ್ಯ ಹೂಡುವುದಾಗಿ ವಿಧಾನನಮಂಡಲದಲ್ಲಿ ಹೇಳಿದ್ದ ಮುಖ್ಯಮಂತ್ರಿ ಯಡಿಯೂರಪ್ಪ ಮಾತಿಗೆ ತಪ್ಪಿದ್ದಾರೆ. ಮೇ ತಿಂಗಳು ಕಳೆಯುತ್ತಾ ಬಂದರೂ ಒಂದು ಗ್ರಾಮಕ್ಕೂ ಹೋಗಿಲ್ಲ. ಅಲ್ಲದೇ ಜಿಲ್ಲಾ ಉಸ್ತುವಾರಿ ಸಚಿವರಾಗಲೀ, ಇತರೆ ಸಚಿವರಾಗಲಿ ಭೇಟಿ ನೀಡಿಲ್ಲ ಎಂದರೆ ಏನರ್ಥ ಎಂದು ಕುಮಾರಸ್ವಾಮಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.











Click it and Unblock the Notifications