ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವ್ಯಾಟ್ ಹಿಂಪಡೆಯಿರಿ, ಇಲ್ಲ ಪಂಪ್ ಮುಚ್ಚುತ್ತೇವೆ

By Mahesh
|
Google Oneindia Kannada News

Petrol pump owners intensify struggle for uniform VAT rates for diesel
ನವದೆಹಲಿ, ಮೇ.21: ಸರ್ಕಾರ ಡೀಸೆಲ್ ಮೇಲಿನ ವ್ಯಾಟ್ ತೆರಿಗೆ ಹೆಚ್ಚಳವನ್ನು ಹಿಂಪಡೆಯುವಂತೆ ಒತ್ತಾಯಿಸಿ ಪೆಟ್ರೋಲ್ ಪಂಪ್ ಮಾಲೀಕರು ಮೇ.24ರಿಂದ ಪ್ರತೀ ಸೋಮವಾರ ಪಂಪ್ ಗಳನ್ನು ಮುಚ್ಚುವ ತೀರ್ಮಾನ ತೆಗೆದುಕೊಂಡಿದ್ದಾರೆ.

ದೆಹಲಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಅವರು ಪಂಪ್ ಮಾಲೀಕರ ಬೇಡಿಕೆಯನ್ನು, ನೆರೆಯ ಹರ್ಯಾಣ ರಾಜ್ಯದ ವ್ಯಾಟ್ ತೆರಿಗೆಯನ್ನೂ ಪರಿಶೀಲಿಸುವುದಾಗಿ ಭರವಸೆ ನೀಡಿದ್ದಾರೆ. ಕಳೆದ ಏಪ್ರಿಲ್ ಒಂದರಿಂದ ದೆಹಲಿ ರಾಜ್ಯ ಸರ್ಕಾರ ಡೀಸೆಲ್ ಮೇಲಿನ ವ್ಯಾಟ್ ತೆರಿಗೆಯನ್ನು ಶೇ.12.5ರಿಂ ದ ಶೇ.20ಕ್ಕೆ ಏರಿಸಿತ್ತು. ಈ ಏರಿಕೆಯ ವಿರುದ್ಧ ಗಾಂಧಿಗಿರಿ ಪ್ರತಿಭಟನೆಗೆ ಇಳಿದ ದೆಹಲಿ ಪೆಟ್ರೋಲ್ ಡೀಲರ್ ರ ಸಂಘದ ಸದಸ್ಯರು ಮುಖ್ಯಮಂತ್ರಿ ಶೀಲಾ ದೀಕ್ಷಿತ್ ರ ಮನೆಯ ಹೊರಗೆ ಹೂ ಗುಚ್ಛ ಇರಿಸಿ ಪ್ರತಿಭಟಿಸಿದರು.

ನಂತರ ಮುಖ್ಯ ಮಂತ್ರಿಯೊಂದಿಗೆ ಮಾತುಕತೆ ನಡೆಸಿದ ಸಂಘದ ಪದಾಧಿಕಾರಿಗಳಿಗೆ ದೀಕ್ಷಿತ್ ಅವರು ಮುಂದಿನ ಕಾಮನ್ ವೆಲ್ತ್ ಕ್ರೀಡಾಕೂಟಕ್ಕೆ ಈ ಏರಿಕೆಯಿಂದ 1000 ಕೋಟಿ ರುಪಾಯಿ ಸಂಗ್ರಹವಾಗಲಿದೆ ಎಂದು ವಿವರಿಸಿದ್ದಾರೆ. ಆದರೂ, ನಂತರ ಪದಾಧಿಕಾರಿಗಳು ಕಾಂಗ್ರೆಸ್ ಅದ್ಯಕ್ಷೆ ಸೋನಿಯಾ ಗಾಂಧಿ ಅವರನ್ನೂ ಭೇಟಿ ಮಾಡಿ ಮನವಿ ಸಲ್ಲಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಸಂಘದ ಅದ್ಯಕ್ಷ ಜುಗಲ್ ಬಾತ್ರ ಅವರು ಹಣಕಾಸು ಸಚಿವರು , ವ್ಯಾಟ್ ಸಮಿತಿ ಯೊಂದಿಗೆ ಚರ್ಚಿಸಿ ಮತ್ತು ನೆರೆಯ ರಾಜ್ಯಗಳ ದರವನ್ನೂ ಪರಿಶೀಲಿಸಿ ದರ ಇಳಿಕೆ ಮಾಡುವ ಭರವಸೆ ನೀಡಿದ್ದಾರೆ ಎಂದರು . ಆದರೆ ಸರ್ಕಾರ ದರ ಕಡಿತ ಮಾಡದಿದ್ದರೆ ಪಂಪ್ ಮಾಲೀಕರ ಪ್ರತೀ ಸೋಮವಾರದ ಬಂದ್ ನಿಗದಿಯಂತೆ ನಡೆಯಲಿದೆ ಎಂದರು . ಹರ್ಯಾಣ ಮತ್ತು ಪಂಜಾಬ್ ರಾಜ್ಯಗಳಲ್ಲಿ ಡೀಸೆಲ್ ದರ ಪ್ರತೀ ಲೀಟರಿಗೆ ರೂ ೩೪.೨೨ ಇದ್ದು ಸರ್ಕಾರ ಶೇ ೮.೮ ವ್ಯಾಟ್ ತೆರಿಗೆ ವಿಧಿಸುತ್ತಿದೆ . ಆದರೆ ದೆಹಲಿಯಲ್ಲಿ ಬೆಲೆ ಪ್ರತೀ ಲೀಟರಿಗೆ ರೂ ೩೮.೧೦ ಇದ್ದು , ಡೀಸೆಲ್ ಮಾರಾಟ ಕುಸಿದಿದೆ ಎಂದು ಅವರು ಹೇಳಿದರು .

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X