ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಟಿಎಂ ಜನಕ ಜಾನ್ ಶೆಫರ್ಡ್ ಇನ್ನಿಲ್ಲ

By Mrutyunjaya Kalmat
|
Google Oneindia Kannada News

ATM
ಲಂಡನ್, ಮೇ. 20 : ವಿಶ್ವದಲ್ಲೇ ಪ್ರಥಮ ಬಾರಿಗೆ ಎಟಿಎಂ ಯಂತ್ರವನ್ನು ಕಂಡು ಹಿಡಿಯುವ ಮೂಲಕ ಎಟಿಎಂ ಜನಕರೆಂದೇ ಖ್ಯಾತರಾಗಿದ್ದ ಭಾರತೀಯ ಮೂಲದ ಜಾನ್ ಶೆಫರ್ಡ್ ಬಾರೋನ್ (84) ಗುರುವಾರ ನಿಧನರಾಗಿದ್ದಾರೆ ಎಂದು ಲಂಡನ್ ನ ಡೈಲಿ ಎಕ್ಸ್ ಪ್ರೆಸ್ ವರದಿ ಮಾಡಿದೆ.

ಎಟಿಎಂ ಕಂಡು ಹಿಡಿಯುವ ಮೂಲಕ ಜಗತ್ತಿನ ತಂತ್ರಜ್ಞಾನ ವಲಯವನ್ನೇ ನಿಬ್ಬೆರುಗಾಗಿಸಿದ್ದ ಶೆಫರ್ಡ್ ಅವರು ಇತ್ತೀಚೆಗೆ ಕೆಲ ದಿನಗಳ ಹಿಂದೆಯೆಷ್ಟೆ ಆನಾರೋಗ್ಯಕ್ಕೆ ಒಳಗಾಗಿದ್ದರು. ಬ್ಯಾಂಕ್ ಗೆ ತೆರಳುತ್ತಿದ್ದ ವೇಳೆಯಲ್ಲಿ ದಾರಿಯುದ್ದಕ್ಕೂ ಚಾಕೊಲೇಟ್ ಯಂತ್ರಗಳನ್ನು ನೋಡಿದ ಅವರು, ಇದೇ ಮಾದರಿಯಲ್ಲಿ ಹಣ ತೆಗೆದುಕೊಳ್ಳುವ ಯಂತ್ರವನ್ನು ಏಕೆ ಕಂಡುಹಿಡಿಯಬಾರದು. ಇಂತಹ ಪ್ರಶ್ನೆ ತಲೆಯಲ್ಲಿ ಹೊಕ್ಕಾಗ ಅವಿಷ್ಕಾರಗೊಂಡಿದ್ದೆ, ಇಂದು ನಾವು ನೀವೆಲ್ಲಾ ಬಳಸುತ್ತಿರುವ ಎಟಿಎಂ. ಎಟಿಎಂ ಜಗತ್ತಿನ ಪ್ರತಿಯೊಬ್ಬ ವ್ಯಕ್ತಿಯ ಜೀವನದ ಒಂದು ಭಾಗವಾಗಿದೆ ಎಂದರೆ ತಪ್ಪಾಗಲಾರದು.

ಶೆಫರ್ಡ್ ಅವರು ತಾವು ಕಂಡು ಹಿಡಿದಿದ್ದ ಎಟಿಎ ಯಂತ್ರವನ್ನು ಮೊದಲ ಬಾರಿಗೆ 1967ರ ಜೂನ್ 27 ರಂದು ಲಂಡನ್ ನ ಬರ್ಕ್ಲೆ ಎನ್ ಫಿಲ್ಡ್ ಶಾಖೆಯಲ್ಲಿ ಸ್ಥಾಪಿಸಿ ಪ್ರಯೋಗ ನಡೆಸಿದರು. ಅಲ್ಲಿಂದ ಜಗತ್ತಿನಾದ್ಯಂತ ಇದರ ಶೆಫರ್ಡ್ ಕರಾಮತ್ತು ಕಾಲ್ಗಿಚ್ಚಿನಂತೆ ವ್ಯಾಪಿಸಿತು. ಶೆಫರ್ಡ್ ಅವರು ಭಾರತದ ಅಸ್ಸಾಂ ರಾಜ್ಯದ ಶಿಲ್ಲಾಂಗ್ ನಲ್ಲಿ ಜನಿಸಿರುವುದು ವಿಶೇಷವಾಗಿದೆ. ಎಡಿನ್ ಬರ್ಗ್, ಕೆಂಬ್ರಿಡ್ಜ್ ವಿಶ್ವವಿದ್ಯಾಲಯದಲ್ಲಿ ವಿದ್ಯಾಭ್ಯಾಸ ಪೂರೈಸಿದ್ದಾರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X