ಮೈಸೂರಿನಲ್ಲಿ ನಕಲಿ ಖೋಟಾನೋಟು ಜಾಲ ಪತ್ತೆ

Fake Currency
ಮೈಸೂರು, ಮೇ. 19 : ಖೋಟಾನೋಟು ಚಲಾವಣೆ ಮಾಡಲು ಯತ್ನಿಸುತ್ತಿದ್ದ ಕೇರಳದ ಎಳು ಮಂದಿ ಆರೋಪಿಗಳನ್ನು ಮೈಸೂರು ಗ್ರಾಮಾಂತರ ಪೊಲೀಸರು ಸೋಮವಾರ ಬಂಧಿಸಿದ್ದು, ಒಂದು ಸಾವಿರ ಮುಖಬೆಲೆಯ ಒಟ್ಟು 290 ನೋಟುಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಪಾಕಿಸ್ತಾನದ ಐಎಸ್ಐ ಸಂಸ್ಥೆ ದೇಶದಲ್ಲಿ ಆರ್ಥಿಕ ಭಯೋತ್ಪಾದನೆ ಮಾಡುವ ಸಂಚು ರೂಪಿಸಿದ್ದು, ನಕಲಿ ನೋಟುಗಳನ್ನು ಚಲಾವಣೆ ಮಾಡಲು ಯತ್ನಿಸುತ್ತಿದೆ ಎಂಬ ಆರೋದ ಮೇಲೆ ಪ್ರಕರಣವನ್ನು ಕೇಂದ್ರ ಕಚೇರಿ ನಿರ್ದೇಶನದಂತೆ ಸಿಬಿಐಗೆ ವಹಿಸಲಾಗಿದೆ. ವಿಚಾರಣೆ ಮುಂದುವರೆದಿದ್ದು, ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಖೋಟಾನೋಟುಗಳ ಚಲಾವಣೆ ಚಾಲ್ತಿಯಲ್ಲಿರುವುದು ಪತ್ತೆಯಾಗುವ ಸಾಧ್ಯತೆ ಇದೆ.

ಕೇರಳದ ಮಲ್ಲಪ್ಪುರಂ ಜಿಲ್ಲೆಯ ಅಂಗಾಡಿಪುರನ ಮಹದಿದ್ರಿಯಾಜ್, ಸಿದ್ಧಿಕಿ, ಫೈಸಲ್, ಮುನ್ಷಿದ್, ಮಸೂದ್, ಕಾಸರಗೋಡು ಜಿಲ್ಲೆಯ ಕೆ ಅಬೂಬಕರ್, ಕ್ಯಾಲಿಕಟ್ ನ ಕೋಯಕೋಲಾಡ್ ತಾಲ್ಲೂಕಿನ ಕೆಕೆ ರಾಜನ್ ಅಲಿಯಾಸ್ ಬಾಲಾಜಿ ಬಂಧಿತ ಆರೋಪಿಗಳು. ಸದ್ಯ ಆರೋಪಿಗಳನ್ನು ನ್ಯಾಯಾಂಗ ಬಂಧನದಲ್ಲಿ ಇರಿಸಲಾಗಿದೆ.

ಬಂಧಿತ ಆರೋಪಿಗಳಿಂದ ಸಾವಿರ ಮುಖಬೆಲೆಯ 290 ನೋಟುಗಳು, 3 ಡ್ರಾಗೆರ್ ಚಾಕು, 5590 ರುಪಾಯಿ 9 ಮೊಬೈಲ್ ಫೋನ್ ಗಳು, ಕೆಎಲ್55, 4747 ಸಂಖ್ಯೆಯ ತಿಳಿ ಕ್ರಿಂ ಬಣ್ಣದ ಸ್ಕಾರ್ಪಿಯೋ ಕಾರು, ಒಂದು ಸೋನಿ ಕ್ಯಾಮರಾವನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳು ಕಾರು ಖರೀದಿಸಲು ಇಲ್ಲಿಗೆ ಬಂದಿರುವ ಮಾಹಿತಿ ಆಧರಿಸಿ ನಡೆಸಿದ ಕಾರ್ಯಾಚರಣೆಯಲ್ಲಿ ಬಂಧಿಸಲಾಗಿದೆ ಎಂದು ಎಸ್ಪಿ ರಾಮಸುಬ್ಬು ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+