ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೊರ ವಲಯಕ್ಕೆ ಜಿಲ್ಲಾ ಕಾರಾಗೃಹಗಳು ಶಿಫ್ಟ್

By Mahesh
|
Google Oneindia Kannada News

Umesh Katti
ಬೆಂಗಳೂರು, ಮೇ.19 : ಸುಮಾರು 8 ಕಾರಾಗೃಹಗಳನ್ನು ಜಿಲ್ಲಾಕೇಂದ್ರದ ಹೊರವಲಯಕ್ಕೆ ಸ್ಥಳಾಂತರ ಮಾಡಲು ರಾಜ್ಯ ಸರ್ಕಾರ ಯೋಜನೆ ಹಾಕಿಕೊಂಡಿದೆ. ಈ ಸ್ಥಳಾಂತರ ಯೋಜನೆಗೆ ಸುಮಾರು 40 ಕೋಟಿ ರು ವೆಚ್ಚ ತಗುಲಲಿದೆ ಎಂದು ಸಚಿವ ಉಮೇಶ್ ಕತ್ತಿ ಹೇಳಿದರು. ಶಿವಮೊಗ್ಗ, ಹಾಸನ ಹಾಗೂ ದಾವಣಗೆರೆ ಜಿಲ್ಲೆಯ ಕಾರಾಗೃಹಗಳನ್ನು ಆಯಾ ನಗರಗಳ ಹೊರ ವಲಯ ಪ್ರದೇಶದಲ್ಲಿ ಸ್ಥಾಪಿಸಲಾಗುವುದು. ನಗರದ ಮಧ್ಯ ಭಾಗದಲ್ಲಿ ಬಂದೀಖಾನೆ ಇರುವುದು ಅಷ್ಟು ಉಚಿತವಲ್ಲ ಎಂದು ಸಚಿವರು ಹೇಳಿದರು.

ಬಂದೀಖಾನೆಗಳಿಗೆ ಖಾಸಗಿ ಭದ್ರತಾ ಪಡೆ ನೇಮಕ ಮಾಡಲು ಮುಂದಾಗಿದ್ದ ಸರ್ಕಾರಕ್ಕೆ ಹೊಡೆತ ಬಿದ್ದಿರುವುದನ್ನು ಸಚಿವರು ಒಪ್ಪಿಕೊಂಡರು. ಖಾಸಗಿ ಸೆಕ್ಯೂರಿಟಿ ಗಾರ್ಡ್ಸ್ ಗಳನ್ನು ಕಾರಾಗೃಹದ ಕಾವಲು ಕಾಯಲು ನಿಯೋಜಿಸಲು ಸರ್ಕಾರ ಯೋಚಿಸಿ, ಈ ಬಗ್ಗೆ ಟೆಂಡರ್ ಕರೆಯಲಾಗಿತ್ತು, ಆದರೆ, ಖಾಸಗಿ ವಲಯದಿಂದ ಇದಕ್ಕೆ ಸರಿಯಾದ ಸ್ಪಂದನೆ ಬಂದಿರಲಿಲ್ಲ. ಬೆಂಗಳೂರಿನ ಹಳೆ ಜೈಲು ಕೂಡ ನಗರದ ಮಧ್ಯಭಾಗದಲ್ಲಿತ್ತು, ಅದನ್ನು ನಗರದ ಹೊರವಲಯದ ಪರಪ್ಪನ ಅಗ್ರಹಾರಕ್ಕೆ ಸ್ಥಳಾಂತರಿಸಿ, ಹಳೆ ಜೈಲು ಇದ್ದ ಸ್ಥಳದಲ್ಲಿ ಫ್ರೀಡಂ ಪಾರ್ಕ್ ನಿರ್ಮಾಣ ಮಾಡಲಾಗಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X