ಜಾರ್ಖಂಡ್ : ಬಿಜೆಪಿಯ ಅರ್ಜುನ್ ಮುಂಡಾ ಸಿಎಂ
ರಾಂಚಿ,
ಮೇ. 18 : ಕೊನೆಗೂ ರಾಜಕೀಯ ಬಿಕ್ಕಟ್ಟಿಗೆ ಅಂತ್ಯ ಕಂಡಿದ್ದು, ಬಿಜೆಪಿಯ ಅರ್ಜುನ್ ಮುಂಡಾ ಮೇ 25 ರಂದು ಜಾರ್ಖಂಡ್ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. id="toptextpromo">ಅತಂತ್ರ
ಸಂವಿಧಾನದಿಂದಾಗಿ ಜೆಎಂಎಂ-ಬಿಜೆಪಿ ಪಕ್ಷಗಳು ಸೇರಿ ಸರಕಾರ ರಚಿಸಿದ್ದವು. ಶಿಬು ಸೊರೇನ್ ಅವರನ್ನು ಮುಖ್ಯಮಂತ್ರಿಯಾನ್ನಾಗಿ ಮಾಡಲಾಗಿತ್ತು. ಆದರೆ, ಇತ್ತೀಚೆಗೆ ನಡೆದ ಯುಪಿಎ ಖಂಡನಾ ನಿರ್ಣಯ (ಕಟ್ ಮೋಷನ್) ಪ್ರಕ್ರಿಯೆಯಲ್ಲಿ ಸೊರೇನ್ ಯುಪಿಗೆ ಮತ ನೀಡಿದ್ದರು. ಇದರಿಂದ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದ ಬಿಜೆಪಿ ಬೆಂಬಲ ವಾಪಸ್ಸು ಪಡೆಯುವುದಾಗಿ ಘೋಷಿಸಿತ್ತು. ಮರುದಿನವೇ ಬೆಂಬಲ ಮುಂದುವರಿಸುವುದಾಗಿ ಹೇಳಿತ್ತು. ಅಲ್ಲಿಂದ ಇಲ್ಲಿಯವರೆಗೂ ಜಾರ್ಖಂಡ್ ನಲ್ಲಿ ರಾಜಕೀಯ ಅಸ್ಥಿರತೆ ಉಂಟಾಗಿತ್ತು. id='are-slot-1' class='oiad oi-axt oiadv'> id='top-searched-articles'>ಕೊನೆಗೂ
ಚರ್ಚೆ ನಂತರ ಬಿಜೆಪಿ-ಜೆಎಂಎಂ ಪಕ್ಷಗಳು ಒಪ್ಪಂದಕ್ಕೆ ಬಂದಿದ್ದು, ಬಿಜೆಪಿಗೆ ಮೊದಲ ಸಿಎಂ ಸ್ಥಾನವನ್ನು ಜೆಎಂಎಂ ನೀಡಿದೆ. ಮುಖ್ಯಮಂತ್ರಿಯನ್ನಾಗಿ ಅರ್ಜುನ ಮುಂಡಾ ಅವರನ್ನು ಬಿಜೆಪಿ ಆಯ್ಕೆ ಮಾಡಿದೆ. 28 ತಿಂಗಳು ಬಿಜೆಪಿ ಮುಂಡಾ ಮುಖ್ಯಮಂತ್ರಿಯಾದರೆ, ಉಳಿದ 28 ತಿಂಗಳು ಜೆಎಂಎಂ ಪಕ್ಷದ ಮುಖಂಡರು ಮುಖ್ಯಮಂತ್ರಿಯಾಗಲಿದ್ದಾರೆ.











Click it and Unblock the Notifications