ನೈಸ್ ಯೋಜನೆಗೆ ವಿರೋಧ ಏಕೆ ? ಆದಿಚುಂಚನಗಿರಿ ಶ್ರೀ

Balagangadharanatha Seer
ಮೈಸೂರು, ಮೇ, 17 : ನೈಸ್ ಯೋಜನೆಗೆ ವಿರೋಧ ವ್ಯಕ್ತಪಡಿಸುವುದು ಸರಿಯಲ್ಲ ಎಂದು ಆಧಿಚುಂಚನಗಿರಿ ಮಠಾಧೀಶ ಬಾಲಗಂಗಾಧರನಾಥ ಸ್ವಾಮೀಜಿ ಸ್ಪಷ್ಟಪಡಿಸಿದ್ದಾರೆ. ಯೋಜನೆಗೆ ತೀವ್ರವಾಗಿ ವಿರೋಧಿಸುವ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರ ಪ್ರತಿಭಟನೆಯನ್ನು ಶ್ರೀಗಳು ಪರೋಕ್ಷವಾಗಿ ಟೀಕಿಸಿದಂತಾಗಿದೆ.

ಬಸವ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ನೈಸ್ ಮುಖ್ಯಸ್ಥ ಅಶೋಕ್ ಖೇಣಿ ಅಮೆರಿಕದಲ್ಲಿದ್ದ ಉದ್ಯಮಿ, ತಾಯ್ನಾಡಿಗೆ ಸೇವೆ ಸಲ್ಲಿಸಬೇಕು ಎಂಬ ಮಹತ್ವಕಾಂಕ್ಷೆ ಇಟ್ಟುಕೊಂಡು ಕರ್ನಾಟಕಕ್ಕೆ ಬಂದಿದ್ದಾರೆ. ಮೈಸೂರು-ಬೆಂಗಳೂರು ಮಧ್ಯೆ ರೂಪಿಸಿರುವ ನೈಸ್ ರಸ್ತೆಯ ಯೋಜನೆ ಉತ್ತಮವಾಗಿದೆ. ಈ ಯೋಜನೆ ಕಾರ್ಯಗತಗೊಂಡಿದ್ದರೆ ದೇಶದ ಚೆರಿತ್ರೆಯಲ್ಲಿ ಇದು ದಾಖಲಾಗುತ್ತಿತ್ತು ಎಂದು ಶ್ರೀಗಳು ಅಭಿಪ್ರಾಯಪಟ್ಟಿದ್ದಾರೆ.

ನೈಸ್ ಯೋಜನೆಯಿಂದ ಲಕ್ಷಾಂತರ ಮಂದಿಗೆ ಉದ್ಯೋಗ ಲಭಿಸುತ್ತದೆ. ಕೋಟ್ಯಂತರ ರುಪಾಯಿ ವಹಿವಾಟು ನಡೆಯುತ್ತದೆ. ದೇಶ ಮತ್ತು ಜನರಿಗೆ ಒಳ್ಳೆಯದಾಗುವ ಯೋಜನೆಗಳನ್ನು ಸರಕಾರ ಬೆಂಬಲಿಸಬೇಕಾಗುತ್ತದೆ. ಆದ್ದರಿಂದ ಬೇರೆಲ್ಲಾ ವಿಚಾರಗಳನ್ನು ಸರಕಾರ ಬದಿಗೆ ಸರಿಸಿ ನೈಸ್ ಯೋಜನೆ ನೆರವೇರಿಸಲು ಬೇಕಾದ ಪೂರ್ಣ ಸಹಕಾರ ನೀಡಬೇಕೆಂದು ಸರಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ.

ರಾಜ್ಯಕ್ಕೆ ಸೇವೆ ಸಲ್ಲಿಸಲು ಬಂದವರ ಮನಸ್ಸಿಗೆ ನೋವುಂಟು ಮಾಡುವುದು ಸರಿಯಲ್ಲ. ಜನರ ಒಳಿತನ್ನು ಗಮನದಟ್ಟಿಕೊಂಡು ಸರಕಾರ ಮುನ್ನಡೆಯಬೇಕು ಎಂದು ಶ್ರೀಗಳು ಸಲಹೆ ನೀಡಿದರು. ನೈಸ್ ಮುಖ್ಯಸ್ಥ ಅಶೋಕ್ ಖೇಣಿ ಕೂಡ ವೇದಿಕೆಯಲ್ಲಿ ಉಪಸ್ಥಿತರಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+