ಪ್ರಮೋದ್ ಮುತಾಲಿಕ್ ಮತ್ತೊಂದು ವೇಷ ಬಯಲು
ಬೆಂಗಳೂರು,
ಮೇ. 14 : ಭಯಂಕರ ಹಿಂದುತ್ವವನ್ನು ಪ್ರತಿಪಾದಿಸುವ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ದುಡ್ಡಿಗಾಗಿ ಕೋಮುಗಲಭೆಯನ್ನು ನಡೆಸುತ್ತಿದ್ದರಾ ? 50 ಲಕ್ಷ ಕೊಟ್ಟರೆ ರಾಜ್ಯದ ಯಾವ ಜಿಲ್ಲೆಯಲ್ಲಾದರೂ ಗಲಭೆ ಎಬ್ಬಿಸಲು ರೆಡಿಯಾಗುತ್ತಿದ್ದರಾ ? ಗೊತ್ತಿಲ್ಲ, ಆದರೆ, ತೆಹಲ್ಕಾ ಪತ್ರಿಕೆ ನಡೆಸಿದ ಸ್ಟಿಂಗ್ ಆಪರೇಷನ್ ನಲ್ಲಿ ಮುತಾಲಿಕ್ ರೊಕ್ಕಕ್ಕಾಗಿ ಗಲಭೆ ಎಬ್ಬಿಸುತ್ತಿರುವ ಸಂಗತಿ ಬೆಳಕಿಗೆ ಬಂದಿದೆ. id="toptextpromo">ಹಿಂದು-ಮುಸ್ಲಿಂ
ನಡುವೆ ಗಲಭೆ ಹುಟ್ಟು ಹಾಕಲು ಪ್ರಮೋದ್ ಮುತಾಲಿಕ್ ಒಪ್ಪಿಕೊಂಡಿರುವುದನ್ನು ರಹಸ್ಯ ಕ್ಯಾಮೆರಾ ಕಾರ್ಯಾಚರಣೆಯಲ್ಲಿ ಸೆರೆ ಹಿಡಿಯಲಾಗಿದೆ ಎಂದು ತೆಹಲ್ಕಾ ಡಾಟ್ ಕಾಂ ಪತ್ರಿಕೆ ಹಾಗೂ ಹೆಡ್ ಲೈನ್ ಟುಡೆ ಟಿವಿ ಚಾನೆಲ್ ಗಳು ಹೇಳಿಕೊಂಡಿವೆ. ಬೆಂಗಳೂರು ಮತ್ತು ಮಂಗಳೂರಿನಲ್ಲಿ ಸುಲಭವಾಗಿ ಗಲಭೆ ಸೃಷ್ಟಿಸಬಹುದು. ಉತ್ತರ ಪ್ರದೇಶ, ಪಶ್ಚಿಮ ಬಂಗಾಲದಲ್ಲಿ ಕೂಡ ನಾವು ಗಲಭೆ ಸೃಷ್ಟಿಸಬಲ್ಲೆವು ಎಂದು ಮುತಾಲಿಕ್ ಹೇಳಿದ್ದರು ಎನ್ನಲಾಗಿದೆ. id='are-slot-1' class='oiad oi-axt oiadv'> id='top-searched-articles'>ವರದಿಗಾರ
ತಾನು ಉದಯೋನ್ಮಖ ಕಲಾವಿದ ಎಂದು ಹೇಳಿಕೊಂಡು ಸೇನೆಯ ಪ್ರಮುಖರನ್ನು ಭೇಟಿಯಾಗಿದ್ದ. ತಾನು ಏರ್ಪಡಿಸುವ ಲವ್ ಜಿಹಾದ್ ಕುರಿತ ಚಿತ್ರ ಕಲಾ ಪ್ರದರ್ಶನದ ಮೇಲೆ ನೀವು ದಾಳಿ ನಡೆಸುವ ಮೂಲಕ ಗಲಭೆ ಹುಟ್ಟು ಹಾಕಬೇಕು. ಇದರಿಂದ ತಮಗೆ ಭಾರಿ ಪ್ರಚಾರ ದೊರೆಯುತ್ತದೆ ಎಂದು ವರದಿಗಾರ ಹೇಳಿದ್ದ. ಇದಕ್ಕೆ ಪ್ರತಿಕ್ರಿಯಿಸಿದ ಸೇನೆಯ ಪ್ರಮುಖರು ಹಣಕೊಟ್ಟರೆ ತಾವು ಬೆಂಗಳೂರಿನ ಶಿವಾಜಿನಗರ, ಕೆ ಆರ್ ಮಾರ್ಕೆಟ್ ಮತ್ತು ಮಂಗಳೂರಿನ ಮುಸ್ಲಿಂ ಏರಿಯಾದಲ್ಲಿ ದೊಂಬಿ ಎಬ್ಬಿಸಲು ಸಿದ್ದ. ತಮಗೆ ಭೂಗತ ದೊರೆ ರವಿ ಪೂಜಾರಿಯ ಸಂಪರ್ಕವೂ ಇದೆ ಎಂದು ಪ್ರಸಾದ್ ಅತ್ತಾವರ್ ಹೇಳಿದ್ದಾರೆ ಎಂದು ಚಾನೆಲ್ ವರದಿ ಮಾಡಿದ್ದಾರೆ.











Click it and Unblock the Notifications