ಹಾಲಪ್ಪ ಪ್ರಕರಣ ಮುಜುಗರ ತಂದಿದೆ : ಸುರೇಶ್ ಕುಮಾರ್
ಬೆಂಗಳೂರು,
ಮೇ. 13 : ಹರತಾಳು ಹಾಲಪ್ಪ ಪ್ರಕರಣದಿಂದ ಸರಕಾರ ಮುಜುಗರಕ್ಕೆ ಒಳಗಾಗಿರುವುದು ನಿಜ ಎಂದು ನಗರಾಭಿವೃದ್ಧಿ ಸಚಿವ ಸುರೇಶ್ ಕುಮಾರ್ ಒಪ್ಪಿಕೊಂಡಿದ್ದಾರೆ. id="toptextpromo">ಇಲ್ಲಿಯ
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಹಾಲಪ್ಪ ಪ್ರಕರಣದಿಂದ ಸಮಾಜದಲ್ಲಿ ಜನಪ್ರತಿನಿಧಿಗಳ ಬಗ್ಗೆ ಅವಿಶ್ವಾಸ ಇನ್ನಷ್ಟು ಹೆಚ್ಚಾಗಿದೆ. ಪಕ್ಷದ ಕಾರ್ಯಕರ್ತರಿಗೆ ಈ ಪ್ರಕರಣದಿಂದ ಮುಜುಗರವಾಗಿರುವುದು ಸಹಜ ಎಂದರು. id='are-slot-1' class='oiad oi-axt oiadv'> id='top-searched-articles'>ಬಳ್ಳಾರಿಯ
ಮೂವರು ಸಚಿವರಿಗೆ ರಾಜ್ಯಪಾಲರು ನೋಟಿಸ್ ನೀಡಿರುವುದು ಕಾನೂನಿನ ದೃಷ್ಟಿಯಿಂದ ಸರಿಯಾಗಿರಬಹುದು. ರಾಜ್ಯಪಾಲ ಎಚ್ ಆರ್ ಭಾರದ್ವಾಜ್ ಹಿರಿಯ ನ್ಯಾಯವಾದಿ ಮತ್ತು ಕೇಂದ್ರ ಕಾನೂನು ಸಚಿವರಾಗಿ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಕಾನೂನು ಕಡೆಗಣಿಸಿ ರಾಜ್ಯಪಾಲರು ಕ್ರಮ ಕೈಗೊಳ್ಳುವುದಿಲ್ಲ ಎಂಬ ವಿಶ್ವಾಸವಿದೆ ಎಂದು ಸುರೇಶ್ ಕುಮಾರ್ ಹೇಳಿದ್ದಾರೆ.











Click it and Unblock the Notifications