ಮತದಾನ ಕಡ್ಡಾಯ ಇಲ್ಲ: ನವೀನ್ ಚಾವ್ಲಾ
ಬೆಂಗಳೂರು,
ಮೇ.13: ಮತದಾನ ಕಡ್ಡಾಯ ಮಾಡಲು ಸಾಧ್ಯವಿಲ್ಲ ಎಂದು ಕೇಂದ್ರ ಮುಖ್ಯ ಚುನಾವಣಾ ಆಯುಕ್ತ ನವೀನ್ ಬಿ. ಚಾವ್ಲಾ ಸ್ಪಷ್ಟಪಡಿಸಿದ್ದಾರೆ. ಬುಧವಾರ ನಗರದಲ್ಲಿ ಮಾತನಾಡಿದ ಅವರು, ಈ ಕುರಿತು ಎಷ್ಟೇ ಚರ್ಚೆ ನಡೆದರೂ, ವಾಸ್ತವದಲ್ಲಿ ಅದನ್ನು ಅನುಷ್ಠಾನಗೊಳಿಸಲು ಸಾಧ್ಯವಿಲ್ಲ. ಈ ನಿಯಮ ಹಲವು ದೇಶಗಳಲ್ಲಿ ವೈಫಲ್ಯ ಕಂಡಿದೆ ಎಂದರು. id="toptextpromo">ಆಯೋಗದ
ವಜ್ರಮಹೋತ್ಸವದ ಅಂಗವಾಗಿ ಸಾರ್ವಜನಿಕರು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ನೋಂದಾಯಿಸಿಕೊಳ್ಳುವ ಸಲುವಾಗಿ ರಾಷ್ಟ್ರಾದ್ಯಂತ ಉತ್ತಮ ಪ್ರಜಾಪ್ರಭುತ್ವಕ್ಕಾಗಿ ಹೆಚ್ಚಿನ ಪಾಲ್ಗೊಳ್ಳುವಿಕೆ ಎನ್ನುವ ಅಭಿಯಾನ ಹಮ್ಮಿಕೊಳ್ಳಲಾಗುತ್ತಿದೆ.ಮತದಾರರ ಯಾದಿಯಲ್ಲಿಹೆಸರು ತಪ್ಪಿಹೋಗುವುದನ್ನು ತಡೆಯುವ ಸಲುವಾಗಿ ರಾಜಕೀಯ ಪಕ್ಷಗಳು, ಯುವಕರ ಭಾಗವಹಿಸುವಿಕೆ ಸೇರಿದಂತೆ ಹಲವು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ವಿವರಿಸಿದರು. id='are-slot-1' class='oiad oi-axt oiadv'> id='top-searched-articles'>
ಚುನಾವಣಾ
ಆಯುಕ್ತ ಖುರೇಷಿ ಮಾತನಾಡಿ, ಮತದಾರರ ಯಾದಿ ಸರಿಪಡಿಸುವ ಸಲುವಾಗಿ ಬೂತ್ ಮಟ್ಟದಲ್ಲಿ ರಾಜಕೀಯ ಪಕ್ಷಗಳ ಪ್ರತಿನಿಧಿಗಳನ್ನು ಬಳಸಿಕೊಳ್ಳುವ ಕಾರ್ಯ ನಡೆಯುತ್ತಿದೆ. ತಪ್ಪಿಹೋಗಿರುವ ಮತದಾರರ ಹೆಸರು ನೀಡುವಂತೆ ಅವರಿಗೆ ಮನವಿ ಮಾಡಲಾಗುವುದು. ಈ ಸಂಬಂಧ ಯುವ ಸ್ವಯಂ ಸೇವಕರೊಬ್ಬರನ್ನು ನೇಮಿಸುವ ಕುರಿತು ಚಿಂತನೆ ನಡೆಯುತ್ತಿದೆ ಎಂದು ಹೇಳಿದರು.











Click it and Unblock the Notifications