ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಸ್ಲಿಂ ಹುಡುಗನ ವರಿಸಲು ಮತಾಂತರ ಅನಿವಾರ್ಯ

By Rajendra
|
Google Oneindia Kannada News

Allahabad High Court
ಅಲಹಾಬಾದ್, ಮೇ.12: ಮುಸ್ಲಿಂ ವ್ಯಕ್ತಿಯೊಬ್ಬ ಅನ್ಯ ಧರ್ಮೀಯ ಮಹಿಳೆಯನ್ನು ಮದುವೆಯಾಗುವ ಮುನ್ನ ಆಕೆ ಮತಾಂತರಗೊಳ್ಳದಿದ್ದಲ್ಲಿ ಆ ವಿವಾಹ ಅಸಿಂಧುವೆನಿಸುವುದು. ಇದು ಇಸ್ಲಾಂ ತತ್ವಗಳಿಗೆ ವಿರುದ್ಧ ಎನ್ನಿಸುತ್ತದೆ ಎಂದು ಅಲಹಾಬಾದ್ ಹೈಕೋರ್ಟ್ ತೀರ್ಪು ನೀಡಿದೆ.

ಮುಸ್ಲಿಂ ವ್ಯಕ್ತಿಯೊಬ್ಬ ತನ್ನ ಮೊದಲ ಹೆಂಡತಿಗೆ ವಿಚ್ಛೇದನ ನೀಡದೆ ಆಕೆಯನ್ನು ತೊರೆದಲ್ಲಿ ಹಾಗೂ ಮೊದಲ ಪತ್ನಿಯ ಮಕ್ಕಳನ್ನುನ್ಯಾಯೋಚಿತವಾಗಿ ನೋಡಿಕೋಳ್ಳಲು ವಿಫಲವಾನಾದಲ್ಲಿ ಆತನ ಮರುವಿವಾಹವನ್ನು ಅಸಿಂಧುವಾಗಿ ಪರಿಗಣಿಸಲಾಗುತ್ತದೆ ಎಂದು ನ್ಯಾಯಮೂರ್ತಿಗಳಾದ ವಿನೋದ್ ಪ್ರಸಾದ್ ಮತ್ತು ರಾಜೇಶ್ ಚಂದ್ರ ಅವರನ್ನೊಳಗೊಂಡ ಹೈಕೋರ್ಟ್ ವಿಭಾಗೀಯ ಪೀಠ ತೀರ್ಪು ನೀಡಿದೆ.

ಡಿಸೆಂಬರ್ 29ರಂದು ಖುಷ್ಬು ಎಂಬ ಹಿಂದು ಹುಡುಗಿಯನ್ನು ಮದುವೆಯಾದ ಅಲಹಾಬಾದಿನ ದಿಲ್ಬಾರ್ ಹಬೀಬ್ ಸಿದ್ದಿಕಿ ಎಂಬಾತ ಸಲ್ಲಿಸಿದ ರಿಟ್ ಅರ್ಜಿಯನ್ನು ಸೋಮವಾರ ಅನೂರ್ಜಿತಗೊಳಿಸಿ ಪೀಠ ಈ ತೀರ್ಪು ನೀಡಿದೆ. ತನ್ನ ಮಗಳನ್ನು ಸಿದ್ದಿಕಿ ಅಪಹರಿಸಿ ಬಲವಂತವಾಗಿ ಆಕೆಯನ್ನು ವಿವಾಹವಾಗಿದ್ದಾನೆ. ಮದುವೆ ಸಂದರ್ಭದಲ್ಲಿ ಆಕೆ ಅಪ್ರಾಪ್ತಳು ಎಂದು ಖುಷ್ಬು ತಾಯಿ ಸುನೀತಾ ಜೈಸ್ವಾಲ್ ಎಫ್ ಐಆರ್ ಸಲ್ಲಿಸಿದ್ದರು. ಇದನ್ನು ರದ್ದುಪಡಿಸುವಂತೆ ಸಿದ್ದಿಕಿ ಅಹಮದಾಬಾದ್ ಹೈಕೋರ್ಟ್ ಗೆ ರಿಟ್ ಅರ್ಜಿ ಸಲ್ಲಿಸಿದ್ದ.

ಇಸ್ಲಾಂ ಧರ್ಮದಲ್ಲಿ ಬಹುಪತ್ನಿತ್ವಕ್ಕೆ ಅವಕಾಶವಿದೆಯದರೂ ಸಿದ್ಧಿಕಿ ಖುಷ್ಬುರನ್ನು ಮದುವೆಯಾಗುವ ಮುನ್ನ ತನಗೆ ಈಗಾಗಲೆ ಮದುವೆಯಾಗಿದೆ, ಮೂರು ಮಕ್ಕಳ ತಂದೆ ಎಂಬುದನ್ನು ಆಕೆಗೆ ತಿಳಿಸಿರಲಿಲ್ಲ ಎಂದು ಅಲಹಾಬಾದ್ ಹೈಕೋರ್ಟ್ ಸವಾಲು ಮಾಡಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X