ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸ್ಟಾನ್ ಚಾರ್ಟ್ ನಿಂದ ಭಾರತದಲ್ಲಿ ಶೇರು ಮಾರಾಟ

By Prasad
|
Google Oneindia Kannada News

Standard Chartered bank
ನವದೆಹಲಿ, ಮೇ 11 : ಇಂಗ್ಲೆಂಡ್ ಮೂಲದ ಸ್ಟಾಂಡರ್ಡ್ ಚಾರ್ಟರ್ಡ್ ಬ್ಯಾಂಕ್ ಮುಂದಿನ ಎರಡು ವಾರಗಳಲ್ಲಿ ಭಾರತದಲ್ಲಿ ಶೇರು ಮಾರಾಟ ಮಾಡಲಿದ್ದು ಈ ಮೂಲಕ 600 ಮಿಲಿಯನ್ ಡಾಲರ್ ಗಳನ್ನು ಸಂಗ್ರಹಿಸಲು ಯೋಜಿಸಿದೆ.

ದೇಶದಲ್ಲೇ ಮೊದಲ ಬಾರಿಗೆ ಇಂಡಿಯನ್ ಡೆಪಾಸಿಟರಿ ರಿಸೀಟ್ಸ್ ಮೂಲಕ ಈ ಶೇರುಗಳನ್ನು ಮಾರಾಟ ಮಾಡಲಿದ್ದು ಮೇ 25ರಿಂದ 28ರವರೆಗೆ ನಡೆಯಲಿದೆ ಎನ್ನಲಾಗಿದೆ. ಈ ಶೇರುಗಳ ಮಾರಾಟಕ್ಕೆ ಈ ವಾರಾಂತ್ಯದಲ್ಲಿ ಸ್ಟಾನ್ ಚಾರ್ಟ್ ರೋಡ್ ಶೋ ಆರಂಬಿಸಲಿದ್ದು 240 ಮಿಲಿಯನ್ ಡೆಪಾಸಿಟರಿ ರಿಸೀಟ್ ಗಳನ್ನು ಬಿಡುಗಡೆ ಮಾಡಲಿದೆ.

ಹಾಂಗ್ ಕಾಂಗ್ ನ ಶೇರು ಮಾರುಕಟ್ಟೆಯಲ್ಲೂ ಈ ಬ್ಯಾಂಕ್ ನೋಂದಾಯಿತವಾಗಿದೆ. ಈ ಕುರಿತು ಪ್ರತಿಕ್ರಿಯಿಸಲು ಬ್ಯಾಂಕ್ ನ ವಕ್ತಾರರು ನಿರಾಕರಿಸಿದ್ದು ಸೂಕ್ತ ಸಮಯದಲ್ಲಿ ವಿಷಯವನ್ನು ಪ್ರಕಟಿಸಲಾಗುವುದು ಎಂದಿದ್ದಾರೆ. ಈ ಹಿಂದೆ ಭಾರತೀಯ ಮಾರುಕಟ್ಟೆಯಿಂದ 750 ಮಿಲಿಯ ಡಾಲರ್ ಗಳನ್ನು ಸಂಗ್ರಹಿಸುವದಾಗಿ ಬ್ಯಾಂಕ್ ಪ್ರಕಟಿಸಿತ್ತು.

152 ವರ್ಷಗಳ ಇತಿಹಾಸ ಹೊಂದಿರುವ ಸ್ಟಾಂಡರ್ಡ್ ಚಾರ್ಟರ್ಡ್ ಭಾರತದಲ್ಲಿ ಅತೀ ದೊಡ್ಡ ಅಂತಾರಾಷ್ಟ್ರೀಯ ಬ್ಯಾಂಕ್ ಆಗಿದೆ. 94 ಶಾಖೆ ಹಾಗೂ 17,000 ಸಿಬ್ಬಂದಿಗಳನ್ನು ಹೊಂದಿದೆ. ಶೇರುಗಳ ಮಾರಾಟಕ್ಕೆ ಯುಬಿಎಸ್ಎಜಿ, ಗೋಲ್ಡ್ ಮನ್ ಸಾಕ್ಸ್, ಜೆಎಮ್ ಫೈನಾನ್ಷಿಯಲ್, ಬ್ಯಾಂಕ್ ಆಫ್ ಅಮೇರಿಕಾ ಮೆರಿಲ್ ಲಿಂಚ್, ಕೋಟಕ್ ಮಹೀಂದ್ರಾ ಕ್ಯಾಪಿಟಲ್ ಮತ್ತು ಎಸ್ ಬಿ ಐ ಕ್ಯಾಪಿಟಲ್ ಮಾರ್ಕೆಟನ್ನು ನೇಮಕ ಮಾಡಿಕೊಂಡಿದೆ.

ಭಾರತದಲ್ಲಿ ಕಳೆದ ವರ್ಷ 1.06 ಬಿಲಿಯನ್ ಡಾಲರ್ ಗಳಷ್ಟು ಲಾಭ ಗಳಿಸಿದ್ದು ಲಾಭದಲ್ಲಿ ಶೇ.19 ಏರಿಕೆ ದಾಖಲಿಸಿದೆ. ಬ್ಯಾಂಕು ತನ್ನ ಒಟ್ಟು ಆದಾಯದ ಶೇ.21ರಷ್ಟನ್ನು ಭಾರತದಿಂದ ಗಳಿಸುತ್ತಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X