ಜುಲೈ 15 : ಹಿಂದೂ-ಮುಸ್ಲಿಂ ಬಾಯಿ ಬಾಯಿ
ನವದೆಹಲಿ,
ಮೇ. 11 : ಉಭಯ ದೇಶಗಳ ನಡುವೆ ಶಾಂತಿ ಹಾಗೂ ಸ್ನೇಹ ಸೌಹಾರ್ದತೆ ವೃದ್ಧಿಸಲು ಭಾರತ ಮತ್ತು ಪಾಕಿಸ್ತಾನದ ವಿದೇಶಾಂಗ ಸಚಿವರ ನಡುವಿನ ದ್ವಿಪಕ್ಷೀಯ ಮಾತುಕತೆ ಜುಲೈ 15ಕ್ಕೆ ಮಹೂರ್ತ ಫಿಕ್ಸ್ ಆಗಿದೆ. ಎರಡು ದೇಶಗಳ ಪ್ರಧಾನಮಂತ್ರಿಗಳು ಒಪ್ಪಿಗೆ ಸೂಚಿರುವುದರಿಂದ ಜುಲೈ 15 ರಂದು ಭಾರತದ ವಿದೇಶಾಂಗ ಖಾತೆ ಸಚಿವ ಎಸ್ ಎಂ ಕೃಷ್ಣ ಇಸ್ಲಾಮಾಬಾದ್ ಗೆ ತೆರಳಲಿದ್ದಾರೆ. id="toptextpromo">ಇತ್ತೀಚೆಗೆ
ಥಿಂಪುವಿನಲ್ಲಿ ನಡೆದ ಸಾರ್ಕ್(SAARC) ಸಮ್ಮೇಳನದಲ್ಲಿ ಪಾಕಿಸ್ತಾನದ ಪ್ರಧಾನಿ ಯೂಸುಫ್ ರಾಜಾ ಗಿಲಾನಿ ಮತ್ತು ಭಾರತದ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಉಭಯ ದೇಶಗಳ ನಡುವೆ ಶಾಂತಿ ಮತ್ತು ಸ್ನೇಹ ಸೌಹಾರ್ದತೆಯನ್ನು ಹೆಚ್ಚಿಸುವ ಕುರಿತಂತೆ ಚರ್ಚೆ ನಡೆಸಿದ್ದರು. ಈ ಸಂದರ್ಭದಲ್ಲಿ ಉಭಯ ದೇಶಗಳ ವಿದೇಶಾಂಗ ವ್ಯವಹಾರಗಳ ಖಾತೆ ಸಚಿವರ ಮಟ್ಟದ ಮಾತುಕತೆ ಇಬ್ಬರೂ ನಾಯಕರು ನಿರ್ಧರಿಸಿದ್ದರು. id='are-slot-1' class='oiad oi-axt oiadv'> id='top-searched-articles'>ಭಾರತದ
ವಿದೇಶಾಂಗ ಖಾತೆ ಸಚಿವ ಎಸ್ ಎಂ ಕೃಷ್ಣ ಇಂದು ಪಾಕಿಸ್ತಾನದ ವಿದೇಶಾಂದ ಸಚಿವ ಶಾ ಮೆಹಮೊದ್ ಖುರೇಶಿ ಅವರೊಂದಿಗೆ ದೂರವಾಣಿ ಮೂಲಕ ಚರ್ಚೆ ನಡೆಸಿದ್ದಾರೆ. ಜುಲೈ 15 ರಂದು ಇಸ್ಲಾಮಾಬಾದ್ ಗೆ ಆಗಮಿಸುವಂತೆ ಖುರೇಶಿ ಅವರು ಕೃಷ್ಣ ಅವರಿಗೆ ಅಧಿಕೃತ ಆಹ್ವಾನವಿತ್ತಿದ್ದಾರೆ. ಎಸ್ ಎಂ ಕೃಷ್ಣ ಹಾಗೂ ವಿದೇಶಾಂಗ ಖಾತೆ ಕಾರ್ಯದರ್ಶಿ ನಿರುಪಮಾ ರಾವ್ ಸೇರಿದಂತೆ ಸಿಬ್ಬಂದಿಗಳ ತಂಡ ಜುಲೈ 15 ಕ್ಕೆ ಇಸ್ಲಾಮಾಬಾದ್ ಗೆ ತೆರಳಿದೆ. ಇತ್ತೀಚೆಗೆ ಉಭಯದೇಶಗಳ ವಿದೇಶಾಂಗ ವ್ಯವಹಾರಗಳ ಕಾರ್ಯದರ್ಶಿಗಳ ಮಟ್ಟದ ಮಾತುಕತೆ ಚೆನ್ನೈನಲ್ಲಿ ನಡೆದಿತ್ತು.











Click it and Unblock the Notifications