ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವರ್ಷಾಂತ್ಯದಲ್ಲಿ ಕಸಬ್ ಗೆ ಗಲ್ಲು

By Mrutyunjaya Kalmat
|
Google Oneindia Kannada News

GK Pillai
ನವದೆಹಲಿ, ಮೇ. 11 : ಮುಂಬೈ ಭಯೋತ್ಪಾದನೆಗೆ ಸಂಬಂಧಿಸಿದಂತೆ ಗಲ್ಲು ಶಿಕ್ಷೆಗೆ ಗುರಿಯಾಗಿರುವ ಪಾಕಿಸ್ತಾನಿ ಮೂಲದ ಅಜ್ಮಲ್ ಅಮೀರ್ ಕಸಬ್ ನನ್ನು 2010 ಮುಗಿಯುವುದರೊಳಗಾಗಿ ನೇಣಿಗೇರಿಸಲಾಗುವುದು ಎಂದು ಕೇಂದ್ರ ಗೃಹ ಕಾರ್ಯದರ್ಶಿ ಜಿ ಕೆ ಪಿಳ್ಳೈ ಹೇಳಿದ್ದಾರೆ.

ಮುಂಬೈ ವಿಶೇಷ ನ್ಯಾಯಾಲಯ ನೀಡಿರುವ ತೀರ್ಪನ್ನು ಪ್ರಶ್ನಿಸಿ ಕಸಬ್ ಮೇಲ್ಮನವಿ ಸಲ್ಲಿಸಿಲ್ಲ. ಕಾನೂನಿನ ಯಾವ ಅಡ್ಡಿ ಆತಂಕಗಳೂ ಸರಕಾರಕ್ಕಿಲ್ಲ. ಈ ವರ್ಷದ ಅಂತ್ಯದಲ್ಲಿ ಕಸಬ್ ನನ್ನು ಗಲ್ಲಿಗೇರಿಸಲಾಗುವುದು ಎಂದು ಐಬಿಎನ್ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಪಿಳ್ಳೈ ಸ್ಪಷ್ಟಪಡಿಸಿದ್ದಾರೆ. 2008ರ ನವೆಂಬರ್ 26 ರಂದು ನಡೆದ ಮುಂಬೈ ಭಯೋತ್ಪಾದನೆಯಲ್ಲಿ ಕಸಬ್ ಸಿಕ್ಕಿಬಿದ್ದಿದ್ದ. 17 ತಿಂಗಳ ವಿಚಾರಣೆ ನಂತರ ನ್ಯಾಯಮೂರ್ತಿ ಮದನ್ ಲಕ್ಷ್ಮಣ ತೆಹಲಿಯಾನಿ ಅವರು ಕಸಬ್ ಗೆ ಗಲ್ಲು ಶಿಕ್ಷೆ ನೀಡಿ ಆದೇಶಿ ಹೊರಡಿಸಿದ್ದರು.

2002ರಲ್ಲಿ ನಡೆದ ಸಂಸತ್ ದಾಳಿಯಲ್ಲಿ ಪ್ರಮುಖ ಆಪರಾಧಿ ಅಫ್ಜಲ್ ಗುರು ಈಗಾಗಲೇ ಗಲ್ಲು ಶಿಕ್ಷೆಗೆ ಗುರಿಯಾಗಿದ್ದಾನೆ. ಆದರೆ, ಶಿಕ್ಷೆ ಘೋಷಣೆಯಾಗಿ ಐದಾರು ವರ್ಷ ಕಳೆಯುತ್ತಾ ಬಂದರೂ ಅಲ್ಪಸಂಖ್ಯಾತರ ಹಿತಾಸಕ್ತಿ ಗಮನದಲ್ಲಿರಿಸಿಕೊಂಡು ಆಡಳಿತರೂಢ ಕಾಂಗ್ರೆಸ್ ಸರಕಾರ ಶಿಕ್ಷೆ ನೀಡುವಲ್ಲಿ ವಿಳಂಬ ನೀತಿ ಅನುಸರಿಸುತ್ತಿದೆ. ಅಲ್ಲದೆ ಅಫ್ಜಲ್ ಗುರು ಪ್ರಾಣಭಿಕ್ಷೆಗಾಗಿ ರಾಷ್ಟ್ರಪತಿಯವರಲ್ಲಿ ಮೊರೆ ಹೋಗಿದ್ದಾನೆ. ಇದರಲ್ಲಿ ಕಾಂಗ್ರೆಸ್ ಪಕ್ಷದ ಹಿತಾಸಕ್ತಿಯೂ ಅಡಗಿದೆ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X