ಶಿಕ್ಷಣ ಸಾಲಕ್ಕೆ ಬಡ್ಡಿ ಇಳಿಕೆ ಸಂಭವ

ಶಿಕ್ಷಣ ಸಾಲದ ಬಡ್ಡಿದರವನ್ನು ಪೋಷಕರ ಆದಾಯದ ಮೇಲೆ ನಿರ್ಧರಿಸಲಾಗುತ್ತದೆ. ಪೋಷಕರ ವಾರ್ಷಿಕ ಆದಾಯ 4.5 ಲಕ್ಷ ರೂಪಾಯಿಗಳಿಗಿಂತ ಕಡಿಮೆ ಇದ್ದರೆ ಮಕ್ಕಳಿಗೆ ಶಿಕ್ಷಣ ಸಾಲವನ್ನು ಶೇ. 4ರ ವಾರ್ಷಿಕ ಬಡ್ಡಿದರದಲ್ಲಿ ನೀಡಲಾಗುವುದು. ಪೋಷಕರ ಆದಾಯ 4.5 ಲಕ್ಷ ರೂಪಾಯಿಗಳಿಗಿಂತ ಹೆಚ್ಚಿದ್ದು 12 ಲಕ್ಷ ರೂಪಾಯಿವರೆಗಿನ ಸಾಲಕ್ಕೆ ವಾರ್ಷಿಕ ಶೇ. 7 ಬಡ್ಡಿದರ ನಿಗದಿಪಡಿಸಲು ಚಿಂತನೆ ನಡೆದಿದೆ. 12 ಲಕ್ಷ ರೂಪಾಯಿ ಮೇಲ್ಪಟ್ಟ ಶಿಕ್ಷಣ ಸಾಲಕ್ಕೆ ವಾರ್ಷಿಕ ಶೇಕಡ 9ರ ಬಡ್ಡಿದರ ವಿಧಿಸಲಾಗುವುದು ಎನ್ನಲಾಗಿದೆ.
ಪ್ರಸ್ತುತ ದೇಶದಲ್ಲಿ ಬ್ಯಾಂಕ್ ಆಫ್ ಇಂಡಿಯಾ ಕಡಿಮೆ ಬಡ್ಡಿ ದರಕ್ಕೆ ಶಿಕ್ಷಣ ಸಾಲ ನೀಡುತಿದ್ದು 4 ಲಕ್ಷ ರೂಪಾಯಿವರೆಗಿನ ಶಿಕ್ಷಣ ಸಾಲಕ್ಕೆ ಶೇ. 8.5 ಬಡ್ಡಿ ವಿಧಿಸುತ್ತಿದೆ. ಬ್ಯಾಂಕ್ ಆಫ್ ಬರೋಡಾ 9, ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ 9.25, ಯುನೈಟೆಡ್ ಬ್ಯಾಂಕ್ ಆಫ್ ಇಂಡಿಯಾ 9.75 ಬಡ್ಡಿದರ ವಿಧಿಸುತ್ತಿವೆ. 4 ಲಕ್ಷದಿಂದ 7.5 ಲಕ್ಷ ರೂಪಾಯಿವರೆಗಿನ ಸಾಲಕ್ಕೆ ಬ್ಯಾಂಕ್ ಆಪ್ ಇಂಡಿಯಾ 9 ಹಾಗೂ ಸೆಂಟ್ರಲ್ ಬ್ಯಾಂಕ್ ಆಪ್ ಇಂಡಿಯಾ 9.5 ಬಡ್ಡಿದರ ವಿಧಿಸುತ್ತಿವೆ.
ಅನೇಕ ಬ್ಯಾಂಕ್ಗಳು 10ರಿಂದ 14ರವರೆಗೆ ಬಡ್ಡಿ ಪಡೆಯುತ್ತಿವೆ. 7.5 ಲಕ್ಷ ಮೇಲ್ಪಟ್ಟ ಶಿಕ್ಷಣ ಸಾಲಕ್ಕೆ ಕೆನರಾ ಬ್ಯಾಂಕ್ ಕಡಿಮೆ ಬಡ್ಡಿ ವಿಧಿಸುತ್ತಿದ್ದು ಬಡ್ಡಿದರ ಶೇ. 8.75 ಆಗಿದೆ. ಸೆಂಟ್ರಲ್ ಬ್ಯಾಂಕ್ ಆಪ್ ಇಂಡಿಯಾ 14 ಬಡ್ಡಿದರ ವಿಧಿಸುತ್ತಿದೆ. ಫೆಡರಲ್ ಬ್ಯಾಂಕ್ ಮತ್ತು ಎಚ್ ಡಿ ಎಫ್ ಸಿ ಬ್ಯಾಂಕ್ 12ರಿಂದ 14 ಬಡ್ಡಿದರ ವಿಧಿಸುತ್ತಿವೆ.
ಮಾನವ ಸಂಪನೂಲ ಇಲಾಖೆಯು ಸಾಲ ಮರುಪಾವತಿಯ ಅವಧಿಯನ್ನು ಈಗಿನ 5-7 ವರ್ಷಗಳಿಂದ 6-12 ವರ್ಷಗಳವರೆಗೆ ಹೆಚ್ಚಿಸಲು ಚಿಂತನೆ ನಡೆಸಿದೆ ಎಂದೂ ಮೂಲಗಳು ತಿಳಿಸಿವೆ. ಕಳೆದ ಏಪ್ರಿಲ್ ನಲ್ಲಿ ಶಿಕ್ಷಣ ಸಾಲಕ್ಕೆ ನೀಡಿದ ಬಡ್ಡಿಯ ಮೇಲೆ ಸರ್ಕಾರ ತೆರಿಗೆ ರಿಯಾಯ್ತಿ ಪ್ರಕಟಿಸಿದೆ.












Click it and Unblock the Notifications