2002 ನರಮೇಧ : ತೊಗಾಡಿಯಾ ವಿಚಾರಣೆ
ಗಾಂಧಿನಗರ,
ಮೇ. 10 : ಗುಜರಾತ್ ನರಮೇಧಕ್ಕೆ ಸಂಬಂಧಿಸಿದಂತೆ ವಿಶ್ವ ಹಿಂದೂ ಪರಿಷತ್ ಅಂತಾರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪ್ರವೀಣ್ ತೊಗಾಡಿಯಾ ಅವರು ಸುಪ್ರಿಂಕೋರ್ಟ್ ರಚಿಸಿರುವ ವಿಶೇಷ ತನಿಖಾ ತಂಡದ(ಎಸ್ಐಟಿ) ಎದುರು ವಿಚಾರಣೆಗೆ ಹಾಜರಾಗಿದ್ದಾರೆ. id="toptextpromo">ಇಂದು
ಬೆಳಗ್ಗೆ 11 ಗಂಟೆ ಸುಮಾರಿಗೆ ಹಳೆಯ ಸಚಿವಾಲಯ ಬ್ಲಾಕ್ ನಂಬರ್ 11 ರಲ್ಲಿರುವ ತನಿಖಾ ತಂಡದ ಕಚೇರಿಗೆ ಅವರು ಪ್ರವೇಶಿಸಿದರು. ಇದಕ್ಕೂ ಮುನ್ನ ಅವರು ಅಹಮದಾಬಾದ್ ನ ಮಹಾಲಕ್ಷ್ಮಿ ಮತ್ತು ಗಾಂಧಿ ನಗರದಲ್ಲಿರುವ ಪಂಚ್ ದೇವ್ ದೇವಾಲಯಕ್ಕೆ ಬೇಟಿ ಮಾಡಿ ಪೂಜೆ ಸಲ್ಲಿಸಿದ ನಂತರ ತನಿಖಾ ತಂಡದ ಎದುರು ವಿಚಾರಣೆಗೆ ಹಾಜರಾದರು. ಈ ಸಂದರ್ಭದಲ್ಲಿ ಸಾಧಿಸಂತರು, ವಿಎಸ್ ಪಿ ಕಾರ್ಯಕರ್ತರು ಜೊತೆಗಿದ್ದು, ತಮ್ಮ ನಾಯಕನಿಗೆ ಧೈರ್ಯ ತುಂಬಿದರು. ಎಸ್ಐಟಿ ಕಚೇರಿ ಆವರಣದಲ್ಲಿ ನೂರಾರು ವಿಎಚ್ ಪಿ ಕಾರ್ಯಕರ್ತರು ಬೀಡುಬಿಟ್ಟಿದ್ದು, ಜೈ ಶ್ರೀರಾಮ್ ಘೋಷಣೆ ಕೂಗುತ್ತಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಗೋಧ್ರಾ
ಹತ್ಯಾಕಾಂಡ ಖಂಡಿಸಿ 2002 ರಲ್ಲಿ ಗುಜರಾತ್ ನ ಗುಲ್ಬರ್ಗಾ ಕೇಂದ್ರದಲ್ಲಿ ಭೀಕರ ಕೋಮುಗಲಭೆ ನಡೆಯಿತು. ಆಗ ಸಂಸದರಾಗಿದ್ದ ಎಹಸಾನ್ ಜಾಫ್ರಿ ಎಂಬುವವರು ಸೇರಿ ಸುಮಾರು 69 ಮಂದಿ ಸಾವನ್ನಪ್ಪಿದ್ದರು. ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ, ಪ್ರವೀಣ್ ತೊಗಾಡಿಯಾ ಸೇರಿದಂತೆ ಅನೇಕ ಹಿಂದೂ ಪರ ನಾಯಕ ವಿರುದ್ಧ ಜಾಫ್ರಿ ಪತ್ನಿ ಜಾಕೀಯಾ ಜಾಫ್ರಿ ಅವರು ದೂರು ದಾಖಲಿಸಿದ್ದರು. ಮೋದಿ ಅವರನ್ನ ಎಸ್ಐಟಿ ತಂಡ ಈಗಾಗಲೇ ವಿಚಾರಣೆಗೆ ಒಳಪಡಿಸಿದೆ.











Click it and Unblock the Notifications