ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಿತ್ರಕಲಾ ಪರಿಷತ್ತಿನಲ್ಲಿ ಚಲನಚಿತ್ರ ದೃಶ್ಯಾವಳಿ ಪ್ರದರ್ಶನ

By Prasad
|
Google Oneindia Kannada News

Photo exhibition at Chitrakala Parishat
ಬೆಂಗಳೂರು, ಮೇ 8 : ವಾರ್ತಾ ಇಲಾಖೆ ಮತ್ತು ಕರ್ನಾಟಕ ಚಿತ್ರಕಲಾ ಪರಿಷತ್ ಸಂಯುಕ್ತಾಶ್ರಯದಲ್ಲಿ ಮೇ 8 ರಂದು ಸಂಜೆ 7 ಗಂಟೆಗೆ ನಗರದ ಕುಮಾರಕೃಪ ರಸ್ತೆಯಲ್ಲಿರುವ ಕರ್ನಾಟಕ ಚಿತ್ರಕಲಾ ಪರಿಷತ್ತಿನ ಬಯಲು ರಂಗಮಂದಿರದಲ್ಲಿ ಮಾಹಿತಿ ಮನರಂಜನೆ ಕಾರ್ಯಕ್ರಮ ಏರ್ಪಡಿಸಲಾಗಿದೆ.

ಇದರ ಅಂಗವಾಗಿ ಹಿರಿಯ ಸಿನಿಮಾ ಪತ್ರಕರ್ತ ಪಿ.ಜಿ. ಶ್ರೀನಿವಾಸಮೂರ್ತಿ ಅವರಿಂದ ಕನ್ನಡ ವಾಕ್ಚಿತ್ರ 75 ಒಂದು ನೋಟ ಎಂಬ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಚಲನಚಿತ್ರ ದೃಶ್ಯಾವಳಿಗಳ ಪ್ರದರ್ಶನ ಮತ್ತು ಪ್ರಕೃತಿ ತಂಡದಿಂದ ಚಿತ್ರಗೀತೆಗಳ ಗಾಯನ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ ಎಂದು ಇಲಾಖೆಯ ಪ್ರಕಟಣೆ ತಿಳಿಸಿದೆ.

ಮಾಹಿತಿ - ಮನರಂಜನೆ:

ಕನ್ನಡ ಚಲನಚಿತ್ತೋದ್ಯಮ ನಡೆದುಬಂದ ಹಾದಿ ಕುತೂಹಲಕಾರಿ. ಸತಿಸುಲೋಚನ ಸಿನಿಮಾದಿಂದ ಈವರೆವಿಗೆ 2000ಕ್ಕೂ ಮಿಕ್ಕು ಚಲನಚಿತ್ರಗಳ ವಿಶಾಲ ಹರವಿನಲ್ಲಿ ಕನ್ನಡ ಚಲನಚಿತ್ರೋದ್ಯಮ, ಸಮಕಾಲೀನ ಸಾಮಾಜಿಕ ಸಾಂಸ್ಕೃತಿಯ ಅಂಶಿಕ ಬಿಂಬವೂ ಹೌದು. ನಾಡ ಲಲಿತಕಲಾ ಸಂಸ್ಕೃತಿಯ ಬೆಳೆದು ಬಂದ ಹಾದಿಯ ದಾಖಲಾತಿಯೂ ಹೌದು. ಕನ್ನಡ ಸಾಹಿತ್ಯ-ಸಂಸ್ಕೃತಿ-ಪರಂಪರೆಗಳನ್ನು ತನ್ನೇ ಆದ ರೀತಿಯಲ್ಲಿ ಪ್ರತಿಫಲಿಸುತ್ತ ಬಂದ ಕನ್ನಡ ಚಿತ್ರೋದ್ಯಮಕ್ಕೆ ರಾಷ್ಟ್ರೀಯ-ಅಂತಾರರಾಷ್ಟ್ರೀಯ ಖ್ಯಾತಿಯ ಗರಿಮೆ ಕೂಡ ತಂದಿತ್ತಿದೆ. ಈ ಕಾರ್ಯಕ್ರಮಕ್ಕೆ ಪ್ರವೇಶ ಉಚಿತ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X