ಪ್ರಥಮ ಪಿಯು ಪ್ರವೇಶಕ್ಕೆ ನೂಕು ನುಗ್ಗಲು
ಬೆಂಗಳೂರು,
ಮೇ.6: ಎಸ್ಸೆಸೆಲ್ಸಿ ಫಲಿತಾಂಶ ಹೊರಬಿದ್ದ ನಂತರ ಪಾಸಾದ ವಿದ್ಯಾರ್ಥಿಗಳು ಸಿಹಿ ಹಂಚಿ ಖುಷಿಪಟ್ಟಾಯ್ತು. ಫೇಲ್ ಆದವರು ಸಂಪ್ಲಿಮೆಂಟರಿಗೆ ಸಿದ್ಧತೆ ಮಾಡಿಕೊಳ್ಳತೊಡಗಿದ್ದಾರೆ. ಪೋಷಕರು ಮಾತ್ರ ಉತ್ತಮ ಕಾಲೇಜಿನಲ್ಲಿ ತಮ್ಮ ಮಕ್ಕಳು ಪ್ರಥಮ ಪಿಯು ತರಗತಿಗೆ ಪ್ರವೇಶ ಪಡೆಯಲಿ ಎಂದು ಹರ ಸಾಹಸ ಪಡುತ್ತಿದ್ದಾರೆ. ಅರ್ಜಿ ಪಡೆಯಲು ಎಲ್ಲಾ ಪ್ರತಿಷ್ಠಿತ ಕಾಲೇಜುಗಳಲ್ಲಿ ಪೋಷಕರು ಮುಗಿ ಬಿದ್ದ ಕಾರಣ ನೂಕು ನುಗ್ಗಲು ಉಂಟಾಗಿದೆ. id="toptextpromo">ಮುಂಜಾನೆಯೇ
ನಗರದ ಪ್ರಮುಖ ಕಾಲೇಜಿನ ಮುಂದೆ ಉದ್ದುದ್ದದ ಸರತಿ ಸಾಲು ಕಂಡು ಬರುತ್ತಿದೆ. ಕೆಲವು ಕಾಲೇಜುಗಳಲ್ಲಿ ಕಟ್ ಆಫ್ ಮಾರ್ಕ್ಸ್ ಪಟ್ಟಿ ಹಾಕಿರುವುದರಿಂದ ಗೊಂದಲ ಕೊಂಚ ಕಮ್ಮಿಯಾಗಿದೆ. ಪೋಷಕರು ಹಾಗೂ ವಿದ್ಯಾರ್ಥಿಗಳು ತಮ್ಮ ಆಯ್ಕೆಯ ಕಾಲೇಜುಗಳತ್ತ ಮುಖ ಮಾಡಿ ಫಸ್ಟ್ ಲಿಸ್ಟ್ , ಸೆಕೆಂಡ್ ಲಿಸ್ಟ್ .. ಯಾವಾಗ ಪ್ರಕಟ ಎಂದು ಕಾಲೇಜು ಆಡಳಿತ ಮಂಡಳಿಯವರನ್ನು ವಿಚಾರಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. id='are-slot-1' class='oiad oi-axt oiadv'> id='top-searched-articles'>ನಗರ
ಮೌಂಟ್ ಕಾರ್ಮೆಲ್ ಕಾಲೇಜು, ಎಂ ಇಎಸ್ , ನ್ಯಾಷನಲ್, ಮಹಾವೀರ್ ಜೈನ್, ವಿಜಯ, ಜ್ಯೋತಿ ನಿವಾಸ್, ಸೆಂಟ್ ಜೋಸೆಫ್ , ಕ್ರೈಸ್ಟ್, ಎನ್ ಎಂಕೆಆರ್ ವಿ ಮುಂತಾದ ಕಾಲೇಜುಗಳಲ್ಲಿ ಅಧಿಕ ಸಂಖ್ಯೆಯಲ್ಲಿ ಅಭ್ಯರ್ಥಿಗಳು ಕಂಡು ಬಂದರು. ಪಿಯುಸಿ ಪ್ರವೇಶದ ಅರ್ಜಿಗಳ ಬೆಲೆ ದುಬಾರಿಯಾಗಿದ್ದು, ಕೆಲವು ಕಾಲೇಜುಗಳಲ್ಲಿ ಅರ್ಜಿ ಶುಲ್ಕ 500 ರಿಂದ 1000 ರು ವರೆಗೂ ಇದೆ. ವಿಜ್ಞಾನ ವಿಭಾಗಕ್ಕೆ ಹೆಚ್ಚಿನ ಬೇಡಿಕೆ ಮುಂದುವರೆದಿದೆ. ಕೆಲವು ಸ್ಥಿತಿವಂತ ಪೋಷಕರಂತೂ ಎರಡು ಮೂರು ಕಾಲೇಜುಗಳಲ್ಲಿ ಪ್ರವೇಶ ಅರ್ಜಿಯನ್ನು ಪಡೆದು, ಆಯ್ಕೆ ಪಟ್ಟಿಯ ನಿರೀಕ್ಷೆಯಲ್ಲಿದ್ದಾರೆ.











Click it and Unblock the Notifications