ತಮಿಳುನಾಡಿನಲ್ಲಿ ಕನ್ನಡ ಶಾಲೆಗಳು ಬ್ಯಾನ್
ಬೆಂಗಳೂರು,
ಮೇ. 2 : ತಮಿಳುನಾಡು ಸರಕಾರ ಕನ್ನಡ ಶಾಲೆಗಳಿಗೆ ನಿಷೇಧ ಹೇರಿ ಆದೇಶ ಹೊರಡಿಸಿರುವುದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಮುಖ್ಯಮಂತ್ರಿ ಯಡಿಯೂರಪ್ಪ, ಕನ್ನಡ ಶಾಲಾ ಮಕ್ಕಳಿಗೆ ಅನ್ಯಾಯವಾಗಲು ಬಿಡುವುದಿಲ್ಲ ಎಂದು ಹೇಳಿದ್ದಾರೆ. ಹೊಗೇನಕಲ್ ವಿವಾದದ ಬೆಂಕಿಯಲ್ಲಿ ಮುಖ್ಯಮಂತ್ರಿ ಕರುಣಾನಿಧಿ ತುಪ್ಪ ಸುರಿವಿದ್ದಾರೆ. id="toptextpromo">ತಮಿಳುನಾಡಿನಲ್ಲಿರುವ
ಕನ್ನಡ ಶಾಲೆಗಳ ಅಭಿವೃದ್ದಿಗೆ ಸರಕಾರ 50 ಕೋಟಿ ರುಪಾಯಿಗಳನ್ನು ಬಜೆಟ್ ನಲ್ಲಿ ಮೀಸಲಿಟ್ಟಿತ್ತು. ಅಷ್ಟರಲ್ಲೇ ಅಲ್ಲಿನ ಸರಕಾರ ಈ ಆದೇಶ ಹೊರಡಿಸಿರುವುದು ಅಚ್ಚರಿ ತಂದಿದೆ. ಇದನ್ನು ಸಹಿಸಲು ಸಾಧ್ಯವಿಲ್ಲ. ಈ ಕುರಿತು ವರದಿ ತರಿಸಿಕೊಂಡು ನಂತರ ಮುಂದಿನ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಶನಿವಾರಕ ತಿಳಿಸಿದ್ದಾರೆ. id='are-slot-1' class='oiad oi-axt oiadv'> id='top-searched-articles'>ತಮಿಳುನಾಡಿನಲ್ಲಿರುವ
64 ಕನ್ನಡ ಶಾಲೆಗಳನ್ನು ಮುಚ್ಚುವಂತೆ ಅಲ್ಲಿನ ಸರಕಾರ ಆದೇಶ ಹೊರಡಿಸಿರುವ ಕುರಿತು ಪತ್ರಿಕೆಯಲ್ಲಿ ಪ್ರಕರಣವಾಗಿದೆ. ವರದಿಗೆ ಪ್ರತಿಕ್ರಿಯಿಸಿರುವ ಯಡಿಯೂರಪ್ಪ ಅವರು, ತಮಿಳುನಾಡು ಸರಕಾರ ಹೊರಡಿಸಿರುವ ಆದೇಶ ಪರಿಶೀಲಿಸಿದ ನಂತರ ಈ ಕುರಿತು ಅಲ್ಲಿನ ಮುಖ್ಯಮಂತ್ರಿಯೊಂದಿಗೆ ಮಾತನಾಡಿ, ಅನ್ಯಾಯ ಸರಿಪಡಿಸುವಂತೆ ಕೋರಲಾಗುವುದು ಎಂದು ತಿಳಿಸಿದ್ದಾರೆ.











Click it and Unblock the Notifications