ಯುಲಿಪ್ ವಿವಾದ: ಕೇಂದ್ರ,ವಿಮಾ ಕಂಪನಿಗೆ ನೋಟಿಸ್
ನವದೆಹಲಿ,
ಏ.30: ಸುಪ್ರೀಂ ಕೋರ್ಟ್ ಇಂದು ಕೇಂದ್ರ ಹಾಗೂ 14 ವಿಮಾ ಕಂಪೆನಿಗಳಿಗೆ ನೋಟೀಸ್ ಜಾರಿ ಮಾಡಿದೆ. ಮಾರುಕಟ್ಟೆ ಆಧಾರಿತ ವಿಮಾ ಪಾಲಿಸಿಗಳ (ಯುಲಿಪ್ ) ಕುರಿತು ಷೇರು ಮಾರುಕಟ್ಟೆ ನಿಯಂತ್ರಕ ಸೆಬಿ ವಿರುದ್ಧ ಸಾರ್ವಜನಿಕ ಹಿತಾಸಕ್ತಿಯಡಿಯಲ್ಲಿ ಸಲ್ಲಿಸಲಾಗಿತ್ತು. ಆಲ್ಲದೆ ಎರಡು ಮೊಕದ್ದಮೆಗಳನ್ನು ಇತರ ಹೈ ಕೋರ್ಟ್ ಗಳಿಗೆ ವರ್ಗಾಯಿಸುವಂತೆ ಸೆಬಿ ಸಲ್ಲಿಸಿದ್ದ ಅರ್ಜಿಯ ಕುರಿತು ವಿಚಾರಣೆ ಕೂಡ ಇಂದು ನಡೆಯಿತು. id="toptextpromo">ನ್ಯಾಯಮೂರ್ತಿ
ಎಸ್ ಹೆಚ್ ಕಪಾಡಿಯಾ ನೇತೃತ್ವದ ಪೀಠ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿರುವ ಅರ್ಜಿದಾರರಿಂದಲೂ ಉತ್ತರಿಸುವಂತೆ ಸೂಚಿಸಿದೆ. ಸೆಬಿ, ವಿಮಾ ಕಂಪೆನಿಗಳು ಹಾಗೂ ಎಲ್ ಐಸಿ ಮುಂಬೈನಲ್ಲಿದ್ದು, ಇದರ ವಿಚಾರಣೆ ಬಾಂಬೆ ಹೈ ಕೋರ್ಟಿನಲ್ಲಿ ನಡೆದರೆ ಸೂಕ್ತ ಎಂದು ಕೋರ್ಟ್ ಅಭಿಪ್ರಾಯಪಟ್ಟಿತು. id='are-slot-1' class='oiad oi-axt oiadv'> id='top-searched-articles'>ಸೆಬಿ
ನ್ಯಾಯಾಲಯಕ್ಕೆ ಸಲ್ಲಿಸಿದ್ದ ಅರ್ಜಿಯ ಬಗ್ಗೆ ಅಟರ್ನಿ ಜನರಲ್ ಜಿ ಇ ವಾಹನ್ವತಿ ಅವರು ಸುಪ್ರೀಂ ಕೋರ್ಟಿನಲ್ಲೇ ವಿಚಾರಣೆ ನಡೆಸಲು ಕೋರಿದರು. ಸೆಬಿ ಹಾಗೂ ಐಆರ್ ಡಿಎ ವಿವಾದದ ಕುರಿತು ಆಶ್ಚರ್ಯ ವ್ಯಕ್ತಪಡಿಸಿದ ಪೀಠ ಎರಡೂ ಸಂಸ್ಥೆಗಳ ಮೇಲೆ ಏಕೆ ಉನ್ನತ ಪ್ರಾಧಿಕಾರವೊಂದನ್ನು ರಚಿಸಬಾರದು ಎಂದೂ ಪ್ರಶ್ನಿಸಿತು. ಮುಂದಿನ ವಿಚಾರಣೆಯನ್ನು ಜುಲೈ 8ಕ್ಕೆ ಮುಂದೂಡಲಾಯಿತು.











Click it and Unblock the Notifications