ವಿಡಿಯೋ ದೃಶ್ಯದಲ್ಲಿರೋದು ನಾನಲ್ರಿ : ರಂಜಿತಾ
ಚೆನ್ನೈ,
ಏ. 30 : ಕರ್ನಾಟಕದ ಸಿಐಡಿ ಅಧಿಕಾರಿಗಳೊಂದಿಗೆ ನಾನು ದೂರವಾಣಿ ಮೂಲಕ ಮಾತುಕತೆ ನಡೆಸಿದ್ದೇನೆ ಎಂಬ ವರದಿಗಳೆಲ್ಲ ಸುಳ್ಳು. ಟಿವಿಗಳಲ್ಲಿ ಪ್ರಸಾರವಾದ ವಿಡಿಯೋ ದೃಶ್ಯಗಳನ್ನು ದುರುದ್ದೇಶದಿಂದ ಕೂಡಿವೆ ಎಂದು ತಮಿಳು ನಟಿ ರಂಜಿತಾ ಸ್ಪಷ್ಟಪಡಿಸಿದ್ದಾರೆ. id="toptextpromo">ನಿತ್ಯಾನಂದ
ಸ್ವಾಮಿ ಜತೆಗಿನ ರಾಸಲೀಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಂಜಿತಾ ಅವರ ದೆಹಲಿ ಮೂಲದ ಕಾನೂನು ಸಲಹಾ ಸಂಸ್ಥೆ ಪಿಎಂ ಲಾ ಚೇಂಬರ್ಸ್ ಸಂಸ್ಥೆಯೂ ಟಿವಿಗಳಲ್ಲಿ ಪ್ರಸಾರವಾಗಿರುವ ವೀಡಿಯೋ ದೃಶ್ಯಗಳನ್ನು ಕೃತಕವಾಗಿ ತಯಾರಿಸಲಾಗಿದೆ ಎಂದು ಹೇಳಿದೆ. ಅಲ್ಲದೇ ಗೂಗಲ್ ಮತ್ತು ಯೂ ಟ್ಯೂಬ್ ವೆಬ್‌ಸೈಟ್‌ಗಳು ತಮ್ಮಲ್ಲಿರುವ ರಾಸಲೀಲೆ ವೀಡಿಯೋ ದೃಶ್ಯಾವಳಿಗಳನ್ನು 72ಗಂಟೆಯೊಳಗೆ(ಮೇ 2) ತೆಗೆದು ಹಾಕುವಂತೆ ಸೂಚಿಸಿ ಸಂಸ್ಥೆ ನೋಟಿಸ್ ಕಳುಹಿಸಿದೆ. id='are-slot-1' class='oiad oi-axt oiadv'> id='top-searched-articles'>ಈ
ರೀತಿಯ ದುರುದ್ದೇಶ ಪೂರಿತ ವೀಡಿಯೋದಿಂದಾಗಿ ನಮ್ಮ ಕಕ್ಷಿದಾರರ ಜೀವ ಮತ್ತು ಆಸ್ತಿಗೆ ಅಪಾಯ ಎದುರಾಗಿದೆ. ವಿವಾದದ ಬಗ್ಗೆ ನಟಿ ರಂಜಿತಾ ಯಾವುದೇ ಸಂದರ್ಶನವನ್ನೂ ನೀಡಿಲ್ಲ, ಬೆಂಗಳೂರಿನಲ್ಲಿ ಸಿಐಡಿ ಪೊಲೀಸರಿಗೂ ಯಾವುದೇ ಹೇಳಿಕೆ ಕೊಟ್ಟಿಲ್ಲ ಎಂದು ಸ್ಪಷ್ಟಪಡಿಸಿದೆ. ಕರ್ನಾಟಕ ಸಿಐಡಿ ಪೊಲೀಸರು ಕೂಡ ನಟಿ ರಂಜಿತಾಳನ್ನು ವಿಚಾರಣೆಗೆ ಒಳಪಡಿಸಿಲ್ಲ ಎಂದು ಹೇಳಿದೆ. ಅಲ್ಲದೇ ನಿತ್ಯಾನಂದನ ಜಾಮೀನು ಅರ್ಜಿ ವಿಚಾರಣೆ ರಾಮನಗರ ಜಿಲ್ಲಾ ನ್ಯಾಯಾಲಯದಲ್ಲಿ ಮೇ 3ಕ್ಕೆ ಮುಂದೂಡಿದೆ.











Click it and Unblock the Notifications